ಕಾಣಿಯೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆ

0

ಕಾಣಿಯೂರು: 2022-23ನೇ ಸಾಲಿನ ಕಾಣಿಯೂರು ಗ್ರಾ.ಪಂ ಜಮಾಬಂದಿ ಸಭೆಯು ಗ್ರಾಮ ಪಂಚಾಯತ್‌ನ ಕಣ್ವರ್ಷಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ ವಹಿಸಿದ್ದರು. ಜಮಾಬಂದಿ ಅಧಿಕಾರಿಯಾಗಿ ಪುತ್ತೂರು ತಾ.ಪಂ.ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಭಾಗವಹಿಸಿದ್ದರು. ಗ್ರಾ.ಪಂ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ವಸಂತ ಪೆರ್ಲೋಡಿ, ತಾರನಾಥ ಇಡ್ಯಡ್ಕ, ದೇವಿಪ್ರಸಾದ್ ದೋಳ್ಪಾಡಿ, ಲೋಕಯ್ಯ ಪರವ ದೋಳ್ಪಾಡಿ, ಲಲಿತಾ ದರ್ಖಾಸು ಹಾಗೂ ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ದೇವರಾಜ್ ಸ್ವಾಗತಿಸಿ, ಸಭೆ ನಿರ್ವಹಿಸಿದರು. ಗ್ರಾ.ಪಂ. ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ 2022-23ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ವಿವರಗಳನ್ನು ಓದಿದರು. ಸಿಬ್ಬಂದಿಗಳಾದ ಚಿತ್ರಾ, ಕುಮಾರ್, ಶಶಿಕಲಾ, ಕೀರ್ತಿಕುಮಾರ್, ಪಾರ್ವತಿ ಸಹಕರಿಸಿದರು. ಬಳಿಕ ಕಳೆದ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು.

LEAVE A REPLY

Please enter your comment!
Please enter your name here