ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ ಮಹಾಸಭೆ, ಪದಗ್ರಹಣ ಸಮಾರಂಭ

0

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮಂಗಳೂರು (ದ. ಕ ಮತ್ತು ಉಡುಪಿ ಜಿಲ್ಲೆ ) ಇದರ ವಿಟ್ಲ ವಲಯದ ಮಹಾಸಭೆ ಮತ್ತು ಪದಗ್ರಹಣ ಸಮಾರಂಭವು ಚಂದಳಿಕೆಯ ಭಾರತ್ ಆಡಿಟೋರಿಯಂ ನಲ್ಲಿ ಜರಗಿತು.


ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಘಟನೆ, ಸಂಸ್ಕಾರಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಹಾದಿ ತೋರಿಸುತ್ತದೆ. ಈ ನೆಲೆಯಲ್ಲಿ ಸಂಘವು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಸಭಾಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯದ ಅಧ್ಯಕ್ಷ ಬಿ. ಕೆ. ಬಾಬು ರವರು ವಹಿಸಿದ್ದರು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಜನಾರ್ದನ ಅತ್ತಾವರ (ಪ್ರಸಕ್ತ ಅಧ್ಯಕ್ಷರು ದ. ಕ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘ ಮಂಗಳೂರು), ದಿನೇಶ್ ಕುಮಾರ್ (ನಿಕಟ ಪೂರ್ವ ಅಧ್ಯಕ್ಷರು,ಗ್ಯಾರೇಜ್ ಮಾಲಕರ ಸಂಘ ಮಂಗಳೂರು), ಚಂದ್ರಶೇಖರ ಭಟ್ ಪಡಾರು (ಲೆಕ್ಕ ಪರಿಶೋಧಕರು ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ)ಹರೀಶ್ ಆಚಾರ್ಯ ವಿ (ಗೌರವ ಅಧ್ಯಕ್ಷರು, ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ),ಸರಪಾಡಿ ಅಶೋಕ ಶೆಟ್ಟಿ (ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದ) ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಸಜನ್ ಕುಮಾರ್ ಹಾಗೂ ಮೋನಿಷ್ ವಿಟ್ಲ ರವರಿಗೆ ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಯಿತು. ದೇಲಂತಬೆಟ್ಟು ಚರ್ಚ್‌ನ ಧರ್ಮಗುರುಗಳಾದ ಸುನಿಲ್ ಪ್ರವೀಣ್ ಪಿಂಟೋ, ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಉಪಾಧ್ಯಕ್ಷರಾದ ದಿನಕರ ಕುಲಾಲ್, ಉದ್ಯಮಿ ಸಂಜೀವ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕ ವರದಿಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಬಿ ವಾಚಿಸಿದರು. ಹಿರಿಯ ಸದಸ್ಯ ಮತ್ತು ಪ್ರಸಕ್ತ ಲೆಕ್ಕ ಪರಿಶೋಧಕರಾದ ಚಂದ್ರಶೇಖರ ಭಟ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಗೌರವ ಸಲಹೆಗಾರರಾದ ನೆಗಳಗುಳಿ ಸುಂದರ ಆಚಾರ್ಯ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಿವಿಧ ವಲಯ ಪ್ರತಿನಿಧಿಗಳನ್ನು ಗೌರವಿಸಲಾಯಿತು. ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಾದ ಲಿಯೊ ಡಿ.ಲಸ್ರಾದೋ (ಅಧ್ಯಕ್ಷರು), ಲಕ್ಷ್ಮಣ ಬಿ. ಯಸ್ (ಕಾರ್ಯದರ್ಶಿ),ಚಂದ್ರಶೇಖರ ಭಟ್ (ಲೆಕ್ಕ ಪರಿಶೋಧಕರು), ಪುರುಷೋತ್ತಮ. ಎಂ (ಕೋಶಾಧಿಕಾರಿ), ಉಮ್ಮರ್ (ಸಂಚಾಲಕರು) ಹಾಗೂ ನೂತನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಮುಂದಿನ ವರ್ಷಗಳ ಜವಾಬ್ಧಾರಿಯನ್ನು ಹಸ್ತಾಂತರಿಸಲಾಯಿತು. ವಿದ್ಯಾರ್ಥಿ ಪ್ರಣಾಮ್ ಪ್ರಾರ್ಥಿಸಿದರು. ರಾಧಾಕೃಷ್ಣ ಎರುಂಬು ಹಾಗೂ ಪರಮೇಶ್ವರ ಆಚಾರ್ಯ ಮಂಕುಡೆ ನೆಡ್ಯಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here