ವಿಟ್ಲ: ಮಾಣಿ ಕರ್ನಾಟಕ ಪ್ರೌಢಶಾಲೆಯಲ್ಲಿ ಭಾರತ್ ಸ್ಕೌಟ್ಸ್ – ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ, ಕರ್ನಾಟಕ ಪ್ರೌಢ ಶಾಲೆ ಮಾಣಿ, ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆ ಮಾಣಿ ಇವುಗಳ ಜಂಟಿ ಆಶ್ರಯದಲ್ಲಿ ಮಾಣಿ ಸ್ಥಳೀಯ ಸಂಸ್ಥೆಗೆ ಮಾಣಿ ಮತ್ತು ಕೆದಿಲ ಕ್ಲಸ್ಟರ್ ಶಾಲಾ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ & ಗೈಡ್ಸ್ ಪಟಾಲಮ್ ಮತ್ತು ಷಟ್ಕ ನಾಯಕರ ತರಬೇತಿ, ದ್ವಿತೀಯ ಸೋಪಾನ ಪರೀಕ್ಷೆ ಹಾಗೂ ದೇಶಭಕ್ತಿ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಸಂಸ್ಥೆ ಮಾಣಿ ಇದರ ಉಪಾಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ವೇದಿಕೆಯಲ್ಲಿ ಸ್ಥಳೀಯ ಸಂಸ್ಥೆ ಮಾಣಿ ಇದರ ಕೋಶಾಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಹಾಜಿ ಇಬ್ರಾಹಿಂ ಕೆ. ಪಂಚಾಯತ್ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್, ಸಿಆರ್‌ಪಿ ಸತೀಶ್ ರಾವ್, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎಸ್.ಚೆನ್ನಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
ತರಬೇತುದಾರರಾಗಿ ಬುಲ್ಸ್ ವಿಭಾಗಕ್ಕೆ ಯಶೋಧ (ಬಾಲವಿಕಾಸ )ಕಬ್ಸ್ ವಿಭಾಗಕ್ಕೆ ಶೀಲಾವತಿ (ಮಾಣಿ) ಸ್ಕೌಟ್ಸ್ ವಿಭಾಗಕ್ಕೆ ಸ್ವಪ್ನ ಆಚಾರ್ಯ (ಬಾಲವಿಕಾಸ) ಹಾಗೂ ಗೈಡ್ಸ್ ವಿಭಾಗಕ್ಕೆ ಸುಪ್ರಿಯ ಡಿ.(ಬಾಲವಿಕಾಸ) ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ತರಬೇತಿ ನೀಡಿದರು.
ಗೀತ ಗಾಯನ ಸ್ಪರ್ಧೆಗಳ ತೀರ್ಪುಗಾರರಾಗಿ ಐ. ಜಯಲಕ್ಷ್ಮಿ, ಶಾಂತಿ ಪಾಯಸ್, ಹನ್ನತ್, ಜಯರಾಮ್ ಕಾಂಚನ ಸಹಕರಿಸಿದರು.
ಸ್ಥಳೀಯ ಸಂಸ್ಥೆ ಮಾಣಿ ಇದರ ಕಾರ್ಯದರ್ಶಿ ಉಮ್ಮರಗಿ ಶರಣಪ್ಪ ಧ್ವಜಾರೋಹಣ ನೆರವೇರಿಸಿ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿ, ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಗೈಡ್ಸ್ ಕ್ಯಾಪ್ಟನ್ ಶ್ಯಾಮಲ ಕೆ. ವಂದಿಸಿ, ಸ್ಕೌಟ್ಸ್ ಮಾಸ್ಟರ್ ಸದಾನಂದ ಶೆಟ್ಟಿ ಗಡಿಯರ ಕಾರ್ಯಕ್ರಮ ನಿರೂಪಿಸಿದರು. ಮಾಣಿ ಸ್ಥಳೀಯ ಸಂಸ್ಥೆಗೆ ಒಳಪಡುವ ನೆರೆಯ ಬಾಲವಿಕಾಸ ,ಪಾಟ್ರಕೋಡಿ, ಕೆದಿಲ ಗಡಿಯಾರ,ಸತ್ತಿಕಲ್ಲು,ಕಡೇಶಿವಾಲಯ ಮತ್ತು ಮಾಣಿ ಶಾಲೆಗಳ ಸುಮಾರು ೧೨೫ ವಿದ್ಯಾರ್ಥಿಗಳು ಮತ್ತು 15 ಶಿಕ್ಷಕಿಯರು ಭಾಗವಹಿಸಿದ್ದರು.