*ಎಲ್ಲವನ್ನು ತಿಳಿದು ಬೆಳುಸುವ ಆಚರಣೆಗೆ ನಿಜವಾದ ಅರ್ಥ -ಆಶಾ ಬೆಳ್ಳಾರೆ
*ವಿಹಿಂಪದಿಂದಾಗಿ ಭಾರತೀಯ ಸಂಸ್ಕೃತಿ ಉಳಿದಿದೆ – ಕಾವ್ಯ ಕೆ ಶೆಟ್ಟಿ
ಪುತ್ತೂರು: ನಮ್ಮ ದೇಯ ಉದ್ದೇಶ, ನಮಗೆಲ್ಲ ಗೊತ್ತಿದೆ. ಆದರೆ ನಾವು ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಆದರೆ ನಮ್ಮ ಸಂಸ್ಕೃತಿಯನ್ನು ಅಧ್ಯಾಯನ ಮಾಡಿದಾಗ ನಂಬಿಕೆಗೆ ಪುಷ್ಟಿ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲವನ್ನು ತಿಳಿದು ಬೆಳೆಸುವಲ್ಲಿ ಮಾಡುವ ಆಚರಣೆಗೆ ಅರ್ಥ ಬರುತ್ತದೆ. ಈ ಉದ್ದೇಶವಿಟ್ಟು ಕೊಂಡು ವಿಶ್ವಹಿಂದು ಪರಿಷತ್ ಮಾಡುತ್ತಿದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಅವರು ಹೇಳಿದರು.
ವಿಶ್ವಹಿಂದು ಪರಿಷತ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ವಿಶ್ವ ಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ದಿ. ನಿತಿನ್ ಕುಮಾರ್ ನಿಡ್ಪಳ್ಳಿ ಅವರ ಸ್ಮರಣಾರ್ಥ ಸೆ.3ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಎದುರು ಗದ್ದೆಯಲ್ಲಿ ಮಕ್ಕಳಿಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು. ಭಾರತ ಜ್ಞಾನ ಸಂಪನ್ನ ದೇಶ. ಋಷಿಮುನಿಗೂ, ಸಾಧು ಸಂತರು, ಜ್ಞಾನಿಗಳು, ವಿಜ್ಞಾನಿಗಳು, ಪರಂಪರೆ ಮೂಲದಿಂದ ಭಾರತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇದನ್ನು ನಾವು ಅಧ್ಯಯನ ಮಾಡಿದಾಗ ನಮ್ಮ ನಂಬಿಕೆಗೆ ಪುಷ್ಟಿ ಕೊಡುತ್ತದೆ. ಅದೇ ರೀತಿ ಸ್ಪರ್ಧೆ ಅನ್ನುವ ಯಾವುದೇ ಅಲೋಚನೆ ಇರದ ಮುಗ್ದ ಮಕ್ಕಳು ಮತ್ತು ಜ್ಞಾನಿಗಳಿಗೆ ಭಗವಂತ ಹತ್ತಿರವಾಗುತ್ತಾರೆ. ಇವೆಲ್ಲವನ್ನು ತಿಳಿದು ಬೆಳೆಸುವಲ್ಲಿ ಮಾಡುವ ಆಚರಣೆಗೆ ಅರ್ಥ ಬರುತ್ತದೆ. ಭಾರತಿಯರು ಅಂದ ಕ್ಷಣ ನಾವೆಲ್ಲ ಒಂದೇ ಸೂತ್ರದಲ್ಕ ಬಂದಿಸಲ್ಪಟ್ಟವರು. ಈ ಉದ್ದೆಶ ಇಟ್ಟು ಕೊಂಡು ವಿಶ್ವಹಿಂದು ಪರಿಷತ್ ರಾಷ್ಟ್ರದ ಏಳಿಗೆಗಾಗಿ ಕೆಲಸ ಮಾಡುತ್ತಿದೆ ಎಂದರು.
ವಿಹಿಂಪದಿಂದಾಗಿ ಭಾರತೀಯ ಸಂಸ್ಕೃತಿ ಉಳಿದಿದೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯಮುನಾ ಬೋರ್ವೆಲ್ಸ್ನ ಮಾಲಕಿ ಕಾವ್ಯ ಕೆ ಶೆಟ್ಟಿಯವರು ಮಾತನಾಡಿ ಒಂದು ಕಾಲದ ಬಳಿಕ ಇನ್ನು ನಮ್ಮ ಸಂಸ್ಕೃತಿಯನ್ನು ಕಾಣಲು ಅಸಾಧ್ಯ ಎಂದ ಸಂದರ್ಭದಲ್ಲಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ವಿಶ್ವಹಿಂದು ಪರಿಷತ್ ಶ್ರಮ ಶ್ಲಾಘನೀಯ. ಹಿಂದು ಸಂಸ್ಕೃತಿ ಉಳಿಸುವಲ್ಲಿ ವಿಶ್ವಹಿಂದು ಪರಿಷತ್ ಶ್ರಮಕ್ಕೆ ತಾಯಂದಿರು ಕೂಡಾ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ವಿಶ್ವಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಲತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಪ್ರಾರ್ಥಿಸಿದರು. ಸುಕೀರ್ತಿ ಸ್ವಾಗತಿಸಿದರು. ವಿಶಾಖ್ ರೈ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಗೆ ವಿವಿಧ ಕೃಷ್ಣವೇಷ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.