ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆಯಲ್ಲಿ ಸ್ಥಾಪನಾ ದಿನಾಚರಣೆ

0

ಕುಂಬ್ರ: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಸ್ಥಾಪನೆಗೊಂಡು ಯಶಸ್ವಿ 21 ವರ್ಷಗಳನ್ನು ಪೂರೈಸಿ 22ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದ್ದು, ಈ ಹಿನ್ನಲೆಯಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಕುಂಬ್ರ ಶಾಖೆಯಲ್ಲಿ ಸ್ಥಾಪನಾ ದಿನಾಚರಣೆಯನ್ನು ಸೆ.2ರಂದು ಆಚರಿಸಲಾಯಿತು.

ಹಿರಿಯರು ಹಾಗೂ ಕುಂಬ್ರ ಶಾಖೆಯ ಸಲಹಾ ಸಮಿತಿ ಸದಸ್ಯ ರಾಮಣ್ಣ ಗೌಡ ಬಸವನಹಿತ್ಲು ದೀಪ ಪ್ರಜ್ವಲಿಸಿ, ಸಹಕಾರ ಸಂಘದ ಬೆಳವಣಿಗೆಯ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಮಾಜಿ ನಿರ್ದೇಶಕರು, ಗೌರವ ಸಲಹೆಗಾರ ಶಿವರಾಮ ಗೌಡ ಇದ್ಯಾಪೆ, ನಿರ್ದೇಶಕರು ಕುಂಬ್ರ ಶಾಖ ಸಲಹಾ ಸಮಿತಿ ಅಧ್ಯಕ್ಷ ಲೋಕೇಶ್ ಚಾಕೋಟೆ, ಮಾಜಿ ನಿರ್ದೇಶಕರು ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯ ರೇಖಾ ಆರ್ ಗೌಡ ಮಾತನಾಡಿ, ಸಂಘದ ಎಲ್ಲಾ ಸಂಸ್ಥಾಪಕರನ್ನು ಸ್ಮರಿಸಿ, ಬೆಳವಣಿಗೆಗೆ ಸಹಕರಿಸಿದ ಎಲ್ಲರನ್ನು ಅಭಿನಂದಿಸಿ ಶುಭಕೋರಿದರು. ಈ ಸಂದರ್ಭದಲ್ಲಿ ಕುಂಬ್ರ ಶಾಖಾ ಸಲಹಾ ಸಮಿತಿ ಸದಸ್ಯರಾದ ಶ್ರೀಧರ ಗೌಡ ಅಂಗಡಿಹಿತ್ಳು, ಉಮೇಶ್ ಗೌಡ ಕನ್ನಯ, ವಿಶ್ವನಾಥ ಗೌಡ ಬೊಳ್ಳಾಡಿ, ಶ್ರೀಧರ ಗೌಡ ಎರಕ್ಕಲ, ವಿಜಯಭಾರತಿ ಮಂಡ್ಯಂಗಳ, ಸದಸ್ಯರಾದ ಯೋಗೇಂದ್ರ ಉರ್ವ, ಕಿರಣ್ ಸಂಕೀರ್ಣದ ಮಾಲಕ ಪರಮೇಶ್ವರ ಗೌಡ, ಶರತ್ ಉಪಸ್ಥಿತರಿದ್ದರು. ಶಾಖಾ ಮೆನೇಜರ್ ಹರೀಶ್ ವೈ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಹರಿಣಾಕ್ಷಿ ಪಿ, ದಿನೇಶ್ ಕುಮಾರ್ ಸಹಕರಿಸಿದರು.

LEAVE A REPLY

Please enter your comment!
Please enter your name here