ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಾಣಿಜ್ಯ ಮತ್ತುಕೈಗಾರಿಕಾ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಗದ ವತಿಯಿಂದ ಪುತ್ತೂರು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪ್ರಮುಖವಾಗಿ ಜಿಎಸ್‌ಟಿ ನೋಂದಾಯಿತ ವರ್ತಕರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ಆರೋಗ್ಯ ವಿಮೆ 5 ಲಕ್ಷದವರೆಗೆ ಕುಟುಂಬ ಸದಸ್ಯರಿಗೂ ದೊರೆಯುವಂತೆ ಸರಕರದ ಗಮನಸೆಳೆಯುವುದು, ಪ್ಲಾಸ್ಟಿಕ್ ಏಕಬಳಕೆ ಚೀಲಗಳ ನಿಷೇಧ ಸಲುವಾಗಿ ವರ್ತಕರಿಗೆ ಪಾರದರ್ಶಕವಾದ ಕಾನೂನಿನ ತೊಡಕಿನಿಂದಾಗಿ ವರ್ತಕರಿಗೆ ದಂಡ ವಿನಾಯಿತಿ, ಪುತ್ತೂರು ನಗರದ ಮುಖ್ಯ ರಸ್ತೆಗಳಲ್ಲಿ ಸರಕು ಸಮಾಗ್ರಿ ಇಳಿಸಲು ಜನದಟ್ಟನೆ ಸಮಯ ಬಿಟ್ಟು ಉಳಿದ ಸಮಯದಲ್ಲಿ ಅವಕಾಶ ನೀಡುವುದು, ಪೇಟೆಯ ವ್ಯವಹಾರಗಳಿಗೆ ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಎಂ ಟಿ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಅನುಮತಿ, ಸರಕಾರಿ ಮತ್ತು ಖಾಸಗಿ ಬಸ್ಸುಗಳನ್ನು ಮುಖ್ಯ ರಸ್ತೆಯಲ್ಲೇ ಓಡಾಟಕ್ಕೆ ಅವಕಾಶ ಕಲ್ಪಿಸುವುದು, ವಿದ್ಯುತ್ ಕಡಿತದ ಸಂದರ್ಭದಲ್ಲಿ ಕೈಗಾರಿಕಾ ಉದ್ದಿಮೆಗಳಿಗೆ ತೊಂದರೆಯಾಗುತ್ತಿದ್ದು ನಿಯಮಿತ ಸಮಯದಲ್ಲಿ ದುರಸ್ಥಿ ಮಾಡುವ ಕುರಿತು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೆಲ್ಲಿಕಟ್ಟೆ ಸರಕರಿ ಶಾಲೆಯನ್ನು ಮೇಲ್ದರ್ಜೆಗೇರಿಸಿ
ನೆಲ್ಲಿಕಟ್ಟೆ ಸರಕಾರಿ ಹಿ ಪ್ರಾ ಶಾಲೆಯನ್ನು ಮೇಲ್ದಜೆಗೇರಿಸಬೇಕು, 150 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಕೊಠಡಿಗಳ ಕೊರತೆ ಮತ್ತು ಶಿಕ್ಷಕರ ಕೊರತೆಯೂ ಇದ್ದು, ಶಾಲೆಗೆ ತೆರಳಲು ಸುಕ್ತವಾದ ರಸ್ತೆಯ ವ್ಯವಸ್ಥೆಯನ್ನು ಮಾಡುವಂತೆಯೂ ಶಾಸಕರಲ್ಲಿ ಮನವಿ ಮಾಡಿದರು.

ಶಾಸಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಸಂಗದ ವತಿಯಿಂದ ಶಾಸಕರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಗದ ಅಧ್ಯಕ್ಷರಾದ ಜಾನ್ ಕುಟಿನ್ಹಾ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಉಪಾಧ್ಯಕ್ಷರುಗಳಾದ ವಾಮನ ಪೈ, ಸೂರ್ಯನಾಥ ಆಳ್ವ, ಕಾರ್ಯದರ್ಶಿ ಮಹಮ್ಮದ್ ನೌಶಾದ್, ಶ್ರೀಕಾಂತ್ ಕೊಳತ್ತಾಯ,ಕೋಶಾಧಿಕಾರಿ ರಾಜೇಶ್ ಕಾಮತ್ ಸುದಾಕರ ಶೆಟ್ಟಿ, ಮಾಜಿ ಅಧ್ಯಕ್ಷರಾದ ಭಾಸ್ಕರ ಬಾರ್ಯ, ಸದಾನಂದ ನಾಯ್ಕ್ ಬೊಳುವಾರು, ಎಂ ಯು ಗೋಪಾಲಕೃಷ್ಣ, ಲಾರೆನ್ಸ್ ಗೋನ್ಸಾಲಿಸ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here