ಬಿದ್ದುಸಿಕ್ಕಿದ ಪರ್ಸ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

0

ವಿಟ್ಲ: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆಗೆ ಬಿದ್ದ ಮಹಿಳೆಯೋರ್ವರ ಪರ್ಸನ್ನು ಆಟೋ ಚಾಲಕರೋರ್ವರು ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ.
ಅಳಕೆಮಜಲು ನಿವಾಸಿ ಮೊಹಮ್ಮದ್ ಹಾರೀಸ್ ರವರು ತನ್ನ ಆಟೋರಿಕ್ಷಾದಲ್ಲಿ ಮಾಣಿಯಿಂದ ಕಬಕ ಕಡೆಗೆ ತೆರಳುತ್ತಿದ್ದ ವೇಳೆ ಮಾಣಿ ಸಮೀಪ ರಸ್ತೆಯಲ್ಲಿ ನಗದು ಇದ್ದ ಪರ್ಸೊಂದು ಬಿದ್ದು ಸಿಕ್ಕಿತು. ಪರ್ಸ್ ಬಿದ್ದ ಬಗ್ಗೆ ಅರಿತ ಪುತ್ತೂರು ಮೂಲದ ಮಹಿಳೆ ಸೆಲ್ವಿಯವರು ಬಳಿಕದ ನಿಲ್ದಾಣದಲ್ಲಿ ಬಸ್ಸಿಂದ ಇಳಿದು ಪರ್ಸ್ ಗಾಗಿ ಹುಡುಕಾಟ ನಡೆಸಿದ್ದರು. ಇತ್ತ ಮೊಹಮ್ಮದ್ ಹಾರೀಸ್‌ರವರು ಪರ್ಸನ್ನು ಹೆಕ್ಕಿ ಅದರೊಳಗೆ ಚೀಟಿಯೊಳಗೆ ಬರೆದಿಟ್ಟಿದ್ದ ಮೊಬೈಲ್ ನಂಬರ್ ಮೂಲಕ ಪರ್ಸ್‌ನ ವಾರಸುದಾರರನ್ನು ಸಂಪರ್ಕಿಸಿ ಅವರನ್ನು ಪತ್ತೆ ಮಾಡುವಲ್ಲಿ ಸಫಲರಾದರು. ಬಳಿಕ ನಗದು ಇದ್ದ ಪರ್ಸನ್ನು ಮೊಹಮ್ಮದ್ ಹಾರೀಸ್ ರವರು ಸೆಲ್ವಿಯವರಿಗೆ ಹಸ್ತಾಂತರ ಮಾಡಿದ್ದಾರೆ.

LEAVE A REPLY

Please enter your comment!
Please enter your name here