




ನೆಲ್ಯಾಡಿ: ಆ.22ರಂದು ನಿಧನರಾದ ನೆಲ್ಯಾಡಿ ಕೆಳಗಿನಪರಾರಿ ಗುತ್ತು ಮೀನಾಕ್ಷಿ ಶಿವಪ್ಪ ಬಂಟ್ರಿಯಾಲ್‌ರವರ ಶ್ರದ್ಧಾಂಜಲಿ ಸಭೆ ಹಾಗೂ ಉತ್ತರ ಕ್ರಿಯಾದಿ ಕಾರ್ಯಕ್ರಮ ಸೆ.3ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಕೆದಿಕಂಡೆಗುತ್ತು ಬಾಲಕೃಷ್ಣ ಆಳ್ವರವರು ನುಡಿನಮನ ಸಲ್ಲಿಸಿ, ಮೃತ ಮೀನಾಕ್ಷಿಯವರು ಮನೆಯವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿ ಆದರ್ಶ ಗೃಹಿಣಿಯಾಗಿದ್ದರು. ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸಿ, ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದವರು. ಜೀವನದ ಕೊನೆಯ ಹಂತದ ತನಕವೂ ಕುಟುಂಬದ ಹಿಂತಚಿಂತಕರಾಗಿ, ಪ್ರೀತಿ, ವಾತ್ಸಲ್ಯ, ಮಮಕಾರದ ಸಾಕಾರಮೂರ್ತಿಯಾಗಿದ್ದರು. ಅವರ ಸರಳ, ಸಜ್ಜನಿಕೆಯ ಆದರ್ಶ ಜೀವನ ಮಾದರಿಯಾಗಿದೆ. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.






ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಬಂಟರ ಯಾನೆ ನಾಡವರ ಮಾತೃ ಸಂಘದ ತಾಲೂಕು ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ರಮೇಶ್ ರೈ ಡಿಂಬ್ರಿ, ಕೃಷ್ಣ ಶೆಟ್ಟಿ ಕಡಬ, ಶಿವರಾಮ ಶೆಟ್ಟಿ ಕೇಪು, ನಿವೃತ್ತ ಎಎಸ್‌ಐಗಳಾದ ಸಂಜೀವ ರೈ, ನಾರಾಯಣ ರೈ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಜನಜಾಗೃತಿ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ಕೃಷ್ಣ ಪ್ರಸಾದ್ ಆಳ್ವ, ಜಯಂತ ಶೆಟ್ಟಿ ಕೆದಿಕಂಡೆಗುತ್ತು, ಮಹಾಬಲ ರೈ ರಾಮಜಾಲು ಹಳೆನೇರೆಂಕಿ, ಲೀಲಾವತಿಪೂವಪ್ಪ ಶೆಟ್ಟಿ ಕಡೆಂಬಿಲಗುತ್ತು, ಮೋಹನದಾಸ್ ಶೆಟ್ಟಿ ಪೇರಮೊಗರು, ವಿಠಲ ರೈ ಹೊಸಮಾರಡ್ಡ, ರವೀಂದ್ರಕುಮಾರ್ ರೈ, ರಮೇಶ್ ರೈ ಮನವಳಿಕೆಗುತ್ತು, ರಘುರಾಮ ರೈ ಕಡೆಂಬಿಲಗುತ್ತು, ಗುಡ್ಡಪ್ಪ ಬಲ್ಯ, ಸತೀಶ್ ಕೆ.ಎಸ್.ದುರ್ಗಾಶ್ರೀ, ನಿತ್ಯಾನಂದ ಶೆಟ್ಟಿ ಮನವಳಿಕೆಗುತ್ತು, ಪ್ರತಾಪಚಂದ್ರ ರೈ ಕುದ್ಮಾರುಗುತ್ತು, ರವಿಪ್ರಸಾದ್ ಶೆಟ್ಟಿ ರಾಮನಗರ, ಅಗ್ರಾಳ ನಾರಾಯಣ ರೈ, ದಯಾಕರ ರೈ ಮುಂಡಾಳಗುತ್ತು, ಪ್ರಶಾಂತ ರೈ ಅರಂತಬೈಲು ಸೇರಿದಂತೆ ನೂರಾರು ಮಂದಿ ಗಣ್ಯರು ಆಗಮಿಸಿ ಮೃತರ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಜೆ ಮೃತರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ವಿಶ್ವನಾಥ ಶೆಟ್ಟಿಯವರು ನುಡಿನಮನ ಸಲ್ಲಿಸಿದರು. ಕೆಪಿಸಿಸಿ ಸಂಯೋಜಕ ಕೃಷ್ಣಪ್ಪ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆ.ಪಿ.ತೋಮಸ್, ಕೆ.ಜೆ.ಜೋಸ್, ಅಬ್ರಹಾಂ ಕೆ.ಪಿ., ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯರಾದ ಉಷಾಜೋಯಿ, ಆನಂದ ಪಿಲವೂರು, ಶ್ರೀಲತಾ ಸಿ.ಹೆಚ್.,ಚೇತನಾ, ಜಯಂತಿ, ಮಾಜಿ ಅಧ್ಯಕ್ಷ ಧರ್ಣಪ್ಪ ಹೆಗ್ಡೆ, ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು, ಸದಸ್ಯ ಉದಯಕುಮಾರ್ ದೋಂತಿಲ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ಸುರೇಶ್ ಪಡಿಪಂಡ, ಯಾದವ ಪುಚ್ಚೇರಿ, ಶೇಖರ ಪುಚ್ಚೇರಿ, ಗಣೇಶ್ ಪುಚ್ಚೇರಿ, ಚಂದ್ರಶೇಖರ ಬಾಣಜಾಲು, ಆನಂದ ಅಜಿಲ, ಕಡಬ ಉಪತಹಶೀಲ್ದಾರ್ ಗೋಪಾಲ ಕಲ್ಲುಗುಡ್ಡೆ, ಮಹಾಬಲ ಶೆಟ್ಟಿ ದೋಂತಿಲ, ಶಾಂತರಾಮ ಶೆಟ್ಟಿ ದೋಂತಿಲ, ತುಕರಾಮ ರೈ ಹೊಸಮನೆ, ಸೆಬಾಸ್ಟಿನ್ ಪಿ.ಜೆ., ಬಾಲಕೃಷ್ಣ ಗೌಡ ಹಾರ್ಪಳ ಮತ್ತಿತರರು ಉಪಸ್ಥಿತರಿದ್ದರು. ಮೃತರ ಪುತ್ರರಾದ ಮೋಹನದಾಸ್ ಬಂಟ್ರಿಯಾಲ್, ರತ್ನಾಕರ ಬಂಟ್ರಿಯಾಲ್, ಜಯಾನಂದ ಬಂಟ್ರಿಯಾಲ್, ಪುತ್ರಿಯರಾದ ಶೀಲಾವತಿ, ಕಲಾವತಿಶೇಖರ ಶೆಟ್ಟಿ ಪೆರಿಬೆಟ್ಟು ತೋಡಾರು, ಸಂಪದ, ಶಶಿಕಲಾ, ಅಳಿಯಂದಿರಾದ ಜಯರಾಮ ರೈ ಕುಬಲಾಡಿಗುತ್ತು, ವಿಶ್ವನಾಥ ರೈ ಬಾರಾಮತಿ ಪೂನ, ಸುರೇಶ್ ಶೆಟ್ಟಿ ಮಾಣಿಸಾಗು, ಸೊಸೆಯಂದಿರಾದ ಜಯಂತಿ, ವನಜಾಕ್ಷಿ, ಸುಚಿತ್ರಾ ಹಾಗೂ ಮೊಮ್ಮಕ್ಕಳು, ಮರಿಮಕ್ಕಳು ಅತಿಥಿಗಳನ್ನು ಸತ್ಕರಿಸಿದರು.













