ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರಹ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಎಲ್ಲರಿಗೂ ಮುಂಜಾನೆಯ ಶುಭೋದಯ ಹಾಗೆ ನನಗೆ ವಿದ್ಯೆಯನ್ನು ಕಲಿಸಿದ ಗುರು ಹಾಗೂ ಮಾತೆಯರಿಗೂ ಶಿಕ್ಷಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಬೆಳೆದರು, ಕೆಟ್ಟ ದಾರಿಯಲ್ಲಿ ನಡೆದರು ಎಲ್ಲದಕ್ಕೂ ನೇರವಾಗಿ ಶಿಕ್ಷಕರನ್ನೇ ಹೊಣೆಯಾಗಿಸುವುದು ಸಹಜ. ಯಾವ ಶಿಕ್ಷಕ ಕೂಡ ತಮ್ಮ ವಿದ್ಯಾರ್ಥಿಗಳನ್ನು ಕೆಟ್ಟದಾರಿಗೆ ಕ್ರಮಿಸಲು ಇಷ್ಟಪಡುವುದಿಲ್ಲ. ಹಾಗಾಗಿ ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ಮೂಲಕ ವಿವೇಕ, ತಾಳ್ಮೆ, ದೂರ ದೃಷ್ಟಿ, ಮಾನವೀಯತೆಯ ಶಿಕ್ಷಣವನ್ನು ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ಮಾಡುವ ಚಾಣಕ್ಯತನವು ಗುರುವಿನಲ್ಲಿ ಅಡಗಿರುವ ಸೂಪ್ತ ನಿದರ್ಶನವಾಗಿದೆ. ಇಂದು ಯಾವುದಾದರೂ ವ್ಯಕ್ತಿ ಜೀವನದಲ್ಲಿ ಅತ್ಯಂತ ಉನ್ನತ ಸ್ಥಾನವನ್ನು ಪಡೆದರೆ ಅದಕ್ಕೆ ಅಡಿಪಾಯವಾಗಿರಿಸಿದ ಶಿಕ್ಷಕರ ಶ್ರಮವನ್ನು ಯಾರು ಗಮನಿಸುವುದೇ ಇಲ್ಲ. ಇಲ್ಲಿ ಪ್ರತಿ ಮಗುವಿಗೆ ಜಗತ್ತಿನಲ್ಲಿ ” ಶಿಕ್ಷಕರೇ ರೋಲ್ ಮಾಡೆಲ್ ” ಆಗಿರುತ್ತಾರೆ. ಒಂದು ಮಗು ಮೊದಲು ತನ್ನ ಗುರುಗಳಿಗೆ ತಿಳಿಯದ ವಿಷಯದ ಜ್ಞಾನವಿಲ್ಲವೆಂದು ಭಾವಿಸಿಕೊಳ್ಳುತ್ತದೆ. ಇಂತಹ ಆಧುನಿಕ ಜಾಯಮಾನದಲ್ಲಿ ಶಿಕ್ಷಕರ ಜವಾಬ್ದಾರಿ ನಿಜವಾಗಿ ಮಹತ್ವದ್ದಾಗಿದೆ.
ಪ್ರಸ್ತುತ ಸಮಾಜ ಬದಲಾವಣೆ ಅಂಚಿನಲ್ಲಿದ್ದು ಹಿಂದೆ ಶಿಕ್ಷಕರಿಗೆ ಇದ್ದ ಗೌರವ, ಘನತೆ, ಸ್ಥಾನಮಾನಗಳು ಕುಂಠಿತಗೊಳ್ಳುತ್ತಿದೆ. ಹಿಂದೆ ಶಿಕ್ಷಕರು ಎಲ್ಲೇ ಕಾಣ ಸಿಕ್ಕರೂ ಮಕ್ಕಳು ಮತ್ತು ಅವರ ಪೋಷಕರು ಹೇಗೆ ” ಎರಡು ಕೈಗಳು ಸೇರಿದರೆ ಚಪ್ಪಾಳೆ ” ಎಂಬ ಮಾತಿನಂತೆ ಸರಿಸಾಟಿಯಾಗಿ ಇಂದಿನ ಯುಗದಲ್ಲಿ ನಮಸ್ಕರಿಸುವ ಎರಡು ಎರಡು ಕೈಗಳಲ್ಲಿ ಮೊಬೈಲ್ ಎಂಬ ಜಂಗಮವಾಣಿ ಆವರಿಸಿದೆ. ಇದರಿಂದಾಗಿ ಸಾಮಾಜಿಕ ಜಗತ್ತು ಬದಲಾದಂತೆ ವ್ಯಕ್ತಿಗಳು ಕೊಡುವ ಗೌರವಗಳು ಕೂಡ ಕ್ಷೀಣಿಸುತ್ತಿದೆ..
ಮುಖ್ಯವಾಗಿ ಮಕ್ಕಳ ಪೋಷಕರು ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಯಬೇಕು. ಮಕ್ಕಳ ಎದುರಿಗೆ ಯಾವುದೇ ಶಿಕ್ಷಕರನ್ನು ವೈಯಕ್ತಿಕ ನಿಂದನೆ ಮಾಡಬಾರದು. ಹಾಗಾದಾಗ ಮಕ್ಕಳಲ್ಲಿ ಖಂಡಿತವಾಗಿಯೂ ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಸಬಹುದು. ಅದರಂತೆ ಶಿಕ್ಷಕರು ಕೂಡ ಮೊಬೈಲ್ ಎಂಬ ಯಕ್ಷಣಿ ಲೋಕದಲ್ಲಿ ಕಣ್ಮರೆಯಾಗದೆ ಹೇಗೆ ” ಕಬ್ಬಿಣ ಇಟ್ಟಲ್ಲೇ ಇಟ್ಟರೆ ತುಕ್ಕು ಹಿಡಿಯುತ್ತದೆಯೋ ” ಅದೇ ರೀತಿ ನಮ್ಮ ಜ್ಞಾನ ಕೂಡ ನಿಂತ ನೀರಾಗದೆ ನಿರಂತರವಾಗಿ ಹೆಚ್ಚಿನ ಓದು ವೈಯಕ್ತಿಕ ಬೆಳವಣಿಗೆಗೆ ಆದ್ಯತೆ ನೀಡಬೇಕು. ಯಾರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಕಲಿಸಿದ ಗುರು ಹಾಗೂ ಮಾತೇಯರೂ ಎದುರಿಗೆ ಬಂದಾಗ ಮನಸ್ಸನ್ನು ಎಚ್ಚೆತ್ತುಕೊಂಡು ನಮಸ್ಕರಿಸುವ ಗುಣವನ್ನು ಬೆಳೆಸಿಕೊಳ್ಳಿ..
” ಪಠ್ಯವನ್ನು ಅದ್ಭುತವಾಗಿ ಬೋಧಿಸಿ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಎಲ್ಲಾ ಶಿಕ್ಷಕ ವೃಂದದವರಿಗೆ ಶಿಕ್ಷಕ ದಿನಾಚರಣೆಯ ಹಾರ್ದಿಕ ಶುಭಾಶಯಗಳು