ಜಿದ್ದಾದಲ್ಲಿ ಅಮರ್-ಅಕ್ಬರ್-ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

0

ಕ್ಲಾಸಿಕ್ ಫ್ರೆಂಡ್ ಪುತ್ತೂರು ಸೌದಿ ಅರೇಬಿಯಾ, ತುಳುನಾಡು ಕ್ರಿಕೆಟ್ ಅಸೋಸಿಯೇಶನ್ ಹಾಗೂ ಸಿಟಿ ಬಾಯ್ಸ್ ಪುತ್ತೂರು ಆಯೋಜನೆ

ಪುತ್ತೂರು: ತುಳುನಾಡು ಕ್ರಿಕೆಟ್ ಅಸೋಸಿಯೇಶನ್ ಸಿಟಿ ಬಾಯ್ಸ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಅಮರ್-ಅಕ್ಬರ್-ಅಂತೋನಿ ಸೌಹಾರ್ದ ರೋಲಿಂಗ್ ಟ್ರೋಫಿ ಟಿಪಿಎಲ್ ಸೀಸನ್-3 ಕ್ರಿಕೆಟ್ ಪಂದ್ಯಾಟ ಆ.11ರಂದು ಜಿದ್ದಾದಲ್ಲಿ ಉದ್ಘಾಟನೆಗೊಂಡಿತು.


ಉದ್ಘಾಟನಾ ಸಮಾರಂಭದಲ್ಲಿ ಜಾವೀದ್ ಮಿಯಾಂದಾದ್, ಶಾಹುಲ್ ಭೂಪಾ, ಮೊಹಸೀನ್ ವಾಮಂಜೂರು, ಜಾಸಿಮ್ ಕಲ್ಲಡ್ಕ, ನವಾಝ್ ಮಂಗಳ್‌ಪೇಟೆ, ಅಲ್ತಾಫ್ ಕುಮಟಾ ಸಮದ್, ಫಯಾಝ್, ಕ್ಲಾಸಿಕ್ ಫ್ರೆಂಡ್ಸ್ ಪುತ್ತೂರು ತಂಡದ ಮಾಲಕರಾದ ಹುರೈಸ್ ಬಪ್ಪಳಿಗೆ ಅಧ್ಯಕ್ಷ ಇಫ್ರಾಜ್ ಬೆಳುವಾಯಿ ಪಾಲ್ಗೊಂಡಿದ್ದರು.


ಮೊಹಸಿನ್ ವಾಮಂಜೂರು ಮಾಲಕತ್ವದ ಸನ್ ಮೂನ್ ವಾಮಂಜೂರು, ಸಿಬ್ಬತ್&ಜಾವೀದ್ ಮಿಯಾಂದಾದ್ ಮಾಲಕತ್ವದ ಜಾಝ ಸ್ಪೋರ್ಟ್ಸ್ ಅಕಾಡೆಮಿ, ಜೈಸನ್ ಡಿಕೋಸ್ಟಾ ಮಾಲಕತ್ವದ ಕುಡ್ಲ ಬುಲ್ಸ್, ಯಾಸಿನ್ ಉಳ್ಳಾಲ ಹಾಗೂ ಇರ್ಷಾದ್ ಮಾಲಕತ್ವದ ನಝರ್ ಗಯ್ಸ್ ಜಿದ್ದಾ ಈ ತಂಡಗಳು ಪಂದ್ಯಾಕೂಟದಲ್ಲಿ ಭಾಗವಹಿಸಿದ್ದವು.
ಇದರ ಜೊತೆಗೆ ಲೆಜೆಂಡ್ ಕಪ್ ಓವರ್ ಆರ್ಮ್ `ಹಳ್ಳಿ ಹುಡುಗ್ರು ಪ್ಯಾಟೆ ಕಪ್’ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ನಡೆಯಲಿದೆ.


ಪಂದ್ಯಾಕೂಟದ ಆಯೋಜಕರಾದ ಸಿನಾನ್ ಪೆರ್ನೆ ನೌಶಾದ್ ಮೊಟ್ಟೆತ್ತಡ್ಕ ತಂಝಿಲ್ ವಾಮಂಜೂರು, ಹುರೈಸ್ ಬಪ್ಪಳಿಗೆ, ಇಫ್ರಾಜ್ ಬೆಳುವಾಯಿ ಭಾಗವಹಿಸಿದವರನ್ನು ಸ್ವಾಗತಿಸಿ ಸತ್ಕರಿಸಿದರು.
ಅಮರ್ ಅಕ್ಬರ್ ಅಂತೋನಿ ಇದರ ಸ್ಥಾಪಕರಾದ ರಝಾಕ್ ಬಿ.ಎಚ್ ಬಪ್ಪಳಿಗೆ ಅವರು ಪಂದ್ಯಕೂಟಕ್ಕೆ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು.ಟಿಪಿಎಲ್ ಸೀಸನ್ 3 ಇದರ ಸಮವಸ್ತ್ರವನ್ನು ಫಯಾಜ್ ಸುಧಿರ್ ರೆಂಟಲ್‌ರವರು ಕೊಡುಗೆಯಾಗಿ ನೀಡಿದರು.

LEAVE A REPLY

Please enter your comment!
Please enter your name here