





ಪುತ್ತೂರು: ಮಾಂಡೋವಿ ಮೋಟರ್‍ಸ್ ಪ್ರೈ.ಲಿ ಉಪ್ಪಿನಂಗಡಿ ಶಾಖೆಯು ಪ್ರತಿವರ್ಷವು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ.5ರಂದು ಪುತ್ತೂರು ಬಂಟರ ಭವನದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಗುರುವಂದನಾ ಸಮಾರಂಭದಲ್ಲಿ ಹೊಸ ಕಾರುಗಳ ಪ್ರದರ್ಶನ ಮೇಳವನ್ನು ಹಮ್ಮಿಕೊಂಡು ಶಿಕ್ಷಕರಿಗೆ ಅತ್ಯುತ್ತಮ ಕೊಡುಗೆಗಳನ್ನು ಪರಿಚಯಿಸಲಾಯಿತು.


ಪ್ರದರ್ಶನ ಮೇಳವನ್ನು ಶಾಸಕ ಅಶೋಕ್ ರೈಯವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಹೇಮನಾಥ ಶೆಟ್ಟಿ ಕಾವು, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್, ಗ್ರೇಡ್ 2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ ರೈ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ರೈ ಉಪಸ್ಥಿತರಿದ್ದರು.
ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯ ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಎನ್ ಎಸ್ ಸ್ವಾಗತಿಸಿ, ಮನೋಹರ್ ಶೆಟ್ಟಿ ಎಂ ವಂದಿಸಿದರು.
















