ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆ

0

ಗ್ಯಾರಂಟಿ ಯೋಜನೆಗಳು ಬಡವರಿಗೆ ವರದಾನ-ಎಂ.ಬಿ.ವಿಶ್ವನಾಥ ರೈ


ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈರವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ಕಾಂಗ್ರೆಸ್ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಯ ಮೂಲಕ ಮಧ್ಯಮ ವರ್ಗ ಹಾಗೂ ಸಾಮಾನ್ಯ ವರ್ಗದವರಿಗೆ ಬಹಳ ಪ್ರಯೋಜನ ವಾಗಿದ್ದು ಈ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಕಾಂಗ್ರೆಸ್ ಸರಕಾರವು ಅಭಿನಂದನಾರ್ಹವಾಗಿದೆ ಎಂದು ಎಂ.ಬಿ. ವಿಶ್ವನಾಥ ರೈ ಹೇಳಿದರು. ಮುಂದೆ ನಡೆಯುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವಂತಾಗಲು ಇಂತಹ ಗ್ಯಾರಂಟಿ ಯೋಜನೆಗಳು ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದವರು ಹೇಳಿದರು.

ಪುತ್ತೂರು ಶಾಸಕರು ಬಡವರ, ನಿರ್ಗತಿಕರ ಹಾಗೂ ಎಲ್ಲಾ ವರ್ಗದವರ ಆಶೋತ್ತರಗಳನ್ನು ಪೂರೈಸುವ ಸಲುವಾಗಿ ಕ್ಷೇತ್ರಾದ್ಯಂತ ಶಕ್ತಿಮೀರಿ ಕೆಲಸ ಮಾಡುತ್ತಿದ್ದು ಪಕ್ಷ ಸಂಘಟನೆಗೆ ಶಾಸಕರ ಈ ಕಾರ್ಯ ಪ್ರವೃತ್ತಿಯು ಬಹಳಷ್ಟು ಸಹಕಾರಿಯಾಗಲಿದೆ ಎಂದವರು ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿಗೆ ಒಳಪಟ್ಟ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಒಳ್ಳೆಯ ಫಲಿತಾಂಶ ಪಡೆದಿದೆ ಎಂದು ವಿಶ್ವನಾಥ ರೈ ಹೇಳಿದರು.


ಪುಡಾ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶನ್ ಶೆಟ್ಟಿ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಜೋಕಿಂ ಡಿ’ಸೋಜ, ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿಎಚ್‌ಎ ಶಕೂರ್ ಹಾಜಿ, ಕಾಂಗ್ರೆಸ್ ಮುಖಂಡರಾದ ಶಿವರಾಮ ಆಳ್ವ ಕುರಿಯ, ಮಹಾಬಲ ರೈ ಒಳತಡ್ಕ, ಪ್ರಜ್ವಲ್ ರೈ ತೋಟ, ಸೀತಾ ಭಟ್, ಕೆ.ಎಂ. ಆಲಿ ಆರ್ಲಪದವು, ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಎಸ್ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮನೋಹರ ರೈ ಎಂಡೆಸಾಗು, ಮನಮೋಹನ್ ರೈ, ವಿಶಾಲಾಕ್ಷಿ ಬನ್ನೂರು, ದಿನೇಶ್ ಪಿವಿ, ಬೋಳೋಡಿ ಚಂದ್ರಹಾಸ ರೈ, ಹರೀಶ್ ಕುಮಾರ್ ನಿಡ್ಪಳ್ಳಿ, ಸೈಯದ್ ಗಪೂರ್ ಸಾಹೇಬ್ ಪಾಲ್ತಾಡ್, ಮೌರೀಸ್ ಮಸ್ಕರೇನಸ್, ಸಿರಿಲ್ ರೋಡ್ರಿಗಸ್, ಹಾರೀಸ್ ಸಂಟ್ಯಾರ್, ಸಲಾಂ ಸಂಪ್ಯ, ಎನ್‌ಎಸ್‌ಯುಐ ಅಧ್ಯಕ್ಷ ಎಡ್ವರ್ಡ್, ಮೋನಪ್ಪ ಪೂಜಾರಿ ಕೆರೆಮಾರು, ಶಶಿಕಿರಣ ರೈ ನೂಜಿಬೈಲ್, ಮೆಲ್ವಿನ್ ಮೊಂತೇರೊ, ರಾಮಚಂದ್ರ ನಾಯ್ಕ, ರಾಮ ಮೇನಾಲ, ಐತಪ್ಪ ಪೇರಲ್ತಡ್ಕ, ಆಲಿ ಕುಂಞಿ ಮೊದಲಾದವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಿಯಾಜ್ ಸ್ವಾಗತಿಸಿದರು. ಸಂತೋಷ್ ಭಂಡಾರಿ ಚಿಲ್ಮೆತ್ತಾರು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here