ಪುತ್ತೂರು:ಸಂಪ್ಯದಲ್ಲಿ ಅಕ್ಷಯ ಏಜ್ಯುಕೇಶನ್ & ಚಾರಿಟೇಬಲ್ ಟ್ರಸ್ಟ್ನ ಅಡಿಯಲ್ಲಿ ಕಾರ್ಯಚರಿಸುತ್ತಿರುವ ಅಕ್ಷಯ ಕಾಲೇಜು ಇದರ ಶೈಕ್ಷಣಿಕ ವರ್ಷ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಚುನಾವಣೆಯ ಮುಖಾಂತರ ರಚಿಸಲಾಯಿತು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್ ವಿನೋದ್.ಕೆ.ಸಿ, ಉಪಾಧ್ಯಕ್ಷರಾಗಿ ತೃತೀಯ ಬಿ.ಕಾಂ.ಮಿಥುನ್ ಕುಮಾರ್, ಕಾರ್ಯದರ್ಶಿಯಾಗಿ ತೃತೀಯ ಫ್ಯಾಷನ್ & ಅಪ್ಯಾರಲ್ ಡಿಸೈನ್ ಶೈಲಶ್ರೀ, ಕೋಶಾಧಿಕಾರಿಯಾಗಿ ತೃತೀಯ ಬಿ.ಕಾಂ ಸಾಕ್ಷಿ ಕೆ.ಇ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಫ್ಯಾಷನ್ ಡಿಸೈನ್ ತನುಶ್ರೀ ಆಯ್ಕೆಯಾಗಿದ್ದಾರೆ. ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ತೃತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್ ನವೀನ್ ಕುಮಾರ್, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿ,ಕಾಂ ವಿಸ್ಮಿತಾ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ತೃತೀಯ ಫ್ಯಾಷನ್ & ಅಪ್ಯಾರಲ್ ಡಿಸೈನ್ ದುರ್ಗಶ್ರೀ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಇಂಟೀರಿಯರ್ ಡಿಸೈನ್ & ಡೆಕೊರೇಶನ್ ಕೀರ್ತನ್ ಜಿ, ಮಾಧ್ಯಮ ಕಾರ್ಯದರ್ಶಿಯಾಗಿ ಬಿ.ಎ, ತೃತೀಯ ಬಿ.ಕಾಂ ಮುಸ್ತಫಾ . ಮಾಧ್ಯಮ ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿ,ಕಾಂ ಟೀನಾ ಆಯ್ಕೆಯಾಗಿದ್ದಾರೆ.
©