ನೆಲ್ಯಾಡಿ: ಭಾರತೀಯ ಜೆಸಿಐ ಸಂಸ್ಥೆಯ ನಿರ್ದೇಶನದಂತೆ ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸೆಪ್ಟೆಂಬರ್ 9 ರಿಂದ 15 ತನಕ ವಿವಿಧ ಕಾರ್ಯಕ್ರಮಗಳ ಮೂಲಕ ಜೇಸಿ ಸಪ್ತಾಹ ನಡೆಯಲಿದೆ.
ಸೆಪ್ಟೆಂಬರ್ 9 ರಂದು ಕೊಳಕ್ಕೆ ಬೈಲು ಸ.ಕಿ.ಪ್ರಾ. ಶಾಲಾ ನಾಯಕಿ ಕು. ತನುಶ್ರೀ ಅವರು ಸಪ್ತಾಹ ಹಾಗೂ ಅಕ್ಷರ ದೀವಿಗೆ ಕಾರ್ಯಕ್ರಮ ಉದ್ಘಾಟಿಸುವರು. 2023 ನೇ ಸಾಲಿನಲ್ಲಿ ಕನ್ನಡ, ಸರ್ಕಾರಿ ಮಕ್ಕಳಿಗೆ ಘಟಕದ ವಿಶೇಷ ಕಾರ್ಯಕ್ರಮದಂತೆ ಕೊಳಕ್ಕೆ ಬೈಲು, ಸೌತಡ್ಕ, ಕೊಕ್ಕಡ ಹಾಗೂ ಶಿಶಿಲ ಸ.ಉ. ಹಿ. ಪ್ರಾ. ಶಾಲಾ ಮಕ್ಕಳಿಗೆ ಲೈಬ್ರರಿ ಪುಸ್ತಕ ವಿತರಿಸಲಾಗುವುದು.
ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆವರಣದಲ್ಲಿ ಆಸಕ್ತ ಮಕ್ಕಳಿಗೆ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಶಾಲೆತ್ತಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಬಾಯಿ ಹಾಗೂ ಹಲ್ಲಿನ ಆರೋಗ್ಯ ಮಾಹಿತಿ ಇರಿಸಲಾಗಿದೆ. ಸೆಪ್ಟೆಂಬರ್ 15 ರಂದು ಸಮಾರೋಪ ಸಮಾರಂಭದ ಅಂಗವಾಗಿ ಕೌಕ್ರಾಡಿ ಗ್ರಾಮದ ಆಯ್ದ ಮನೆಗಳ ಭೇಟಿ, ಹಿರಿಯ ನಾಗರಿಕರಿಗೆ ಹಣ್ಣು ಹಂಪಲು ವಿತರಣೆ ಮಾಡಲಾಗುವುದು ಎಂದು ಘಟಕಾಧ್ಯಕ್ಷರಾದ ಶ್ರೀ ಜಿತೇಶ್ ಎಲ್ ಪಿರೇರಾ ತಿಳಿಸಿದ್ದಾರೆ.