ಸೆ. 10: ಶಶಿಕಲಾ ವರ್ಕಾಡಿಯವರ ‘ನೀನೊಂದು ಮುಗಿಯದ ಕವಿತೆ’ ಕವನ ಸಂಕಲನ ಬಿಡುಗಡೆ ಮತ್ತು ಕವಿಗೋಷ್ಠಿ

0

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ನೇತೃತ್ವದಲ್ಲಿ, ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಹಾಗೂ ಸುದಾನ ವಸತಿಯುತ ಶಿಕ್ಷಣ ಸಂಸ್ಥೆ – ನೆಹರು ನಗರ ಇದರ ಆಶ್ರಯದಲ್ಲಿ ಸಾಹಿತಿ ಶ್ರೀಮತಿ ಶಶಿಕಲಾ ವರ್ಕಾಡಿಯವರ ‘ನೀನೊಂದು ಮುಗಿಯದ ಕವಿತೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಸೆ. 10 ರಂದು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ನಡೆಯಲಿದೆ.ವಿವೇಕಾನಂದ ಕಾಲೇಜಿನ ಪರೀಕ್ಷಾಂಗ ಕುಲಸಚಿವ, ಸಾಹಿತಿ ಡಾ. ಎಚ್. ಜಿ. ಶ್ರೀಧರ ಉದ್ಘಾಟಿಸಲಿದ್ದಾರೆ.


ಹಿರಿಯ ಪತ್ರಕರ್ತ, ಖ್ಯಾತ ವಾಗ್ಮಿ ಮತ್ತು ಸಾಹಿತಿ ಮನೋಹರ್ ಪ್ರಸಾದ್ ರವರು ಕೃತಿ ಬಿಡುಗಡೆಗೊಳಿಸಲಿದ್ದು, ನ್ಯಾಯವಾದಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈಯವರು ಕೃತಿಕಾರರ ಪರಿಚಯ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ಕ. ಸಾ. ಪ. ಪುತ್ತೂರು ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ವಹಿಸಲಿದ್ದು, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ, ಸುದಾನ ಶಿಕ್ಷಣ ಸಂಸ್ಥೆಯ ಸಂಚಾಲಕ ರೆ. ಫಾ. ವಿಜಯಹಾರ್ವಿನ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕೋಶಾಧ್ಯಕ್ಷರಾದ ಬಿ. ಐತ್ತಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್, ಕವನಸಂಕಲನದ ಮುಖಪುಟ ವಿನ್ಯಾಸಗಾರರಾದ ಖ್ಯಾತ ವ್ಯಂಗ್ಯಚಿತ್ರ ಕಲಾವಿದ ಜಾನ್ ಚಂದ್ರನ್ ರವರಿಗೆ ಗೌರವಾರ್ಪಣೆ ನಡೆಯಲಿದೆ.


ನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 60 ಉದಯೋನ್ಮುಖ ಕವಿಗಳಿಂದ ‘ಮುಗಿಯದ ಕವಿತೆಗೆ ಮನದ ಕವಿತೆ ಕವಿಗೋಷ್ಠಿ’ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ಶಿಕ್ಷಕಿ ಮತ್ತು ಸಾಹಿತಿ ಶ್ರೀಮತಿ ವಿಜಯಲಕ್ಷ್ಮಿ ಕಟೀಲು ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಕೃತಿಕಾರರಾದ ಶ್ರೀಮತಿ ಶಶಿಕಲಾ ವರ್ಕಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here