ಡಿ.ಜಿ ವಿಕಸನದಡಿಯಲ್ಲಿ 3 ಗ್ರಾ.ಪಂ ಗ್ರಂಥಾಲಯಗಳಿಗೆ ಲ್ಯಾಪ್‌ಟಾಪ್, ಮಾನಿಟರ್ ವಿತರಣೆ

0

ಪುತ್ತೂರು: ಶಿಕ್ಷಣ ಫೌಂಡೇಶನ್, ಡೆಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಗ್ರಾಮ ಡಿ.ಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ಪುತ್ತೂರು ತಾಲೂಕಿನಲ್ಲಿ ಆಯ್ಕೆಯಾದ ಉಪ್ಪಿನಂಗಡಿ, ಕೆದಂಬಾಡಿ ಹಾಗೂ ಹಿರೇಬಂಡಾಡಿ ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನಗಳಾದ ಲ್ಯಾಪ್‌ಟಾಪ್, ಮಾನಿಟರ್‌ಗಳನ್ನು ಸೆ.೮ರಂದು ತಾ.ಪಂ ಸಭಾಂಗಣದಲ್ಲಿ ವಿತರರಿಸಲಾಯಿತು.

ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಹೆಚ್ ಹಾಗೂ ತಾ.ಪಂ ಯೋಜನಾಧಿಕಾರಿ ಸುಕನ್ಯಾ ಹಸ್ತಾಂತರಿಸಿದರು. ಶಿಕ್ಷಣ ಫೌಂಡೇಶನ್‌ನ ಗ್ರಾಮ ಡಿಜಿ ವಿಕಸನದ ಜಿಲ್ಲಾ ಸಂಯೋಜಕ ಲವಿಶ್ ಕುಮಾರ್ ಪಿ. ಹಾಗೂ ತಾಲೂಕು ಸಂಯೋಜಕಿ ರಾಧಿಕಾರವರು ಗ್ರಾಮ ಡಿಜಿ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಂಥಾಲಯ ಮೇಲ್ವಿಚಾರಕರು, ತಾ.ಪಂ.ಸಿಬ್ಬಂಧಿಗಳು ಉಪಸ್ಥತರಿದ್ದರು.

LEAVE A REPLY

Please enter your comment!
Please enter your name here