ಗೋಕುಲನಗರ: 41ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ

0

ರಾಮಕುಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೋಕುಲನಗರ, ಕೊಯಿಲ-ರಾಮಕುಂಜ ಇದರ ಆಶ್ರಯದಲ್ಲಿ 41ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಸೆ.6ರಂದು ಕೊಯಿಲ ಗೋಕುಲನಗರದಲ್ಲಿ ನಡೆಯಿತು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಚೇತನ್ ಮೊಗ್ರಾಲ್‌ರವರು, ಸನಾತನ ಹಿಂದೂ ಧರ್ಮದ ಧಾರ್ಮಿಕ ಚಿಂತನೆ , ಆಚರಣೆಗಳನ್ನು ಪಾಲನೆ ಮಾಡಲು ಧಾರ್ಮಿಕ ತತ್ವ ಬೋಧಿಸುವ ಗ್ರಂಥಗಳ ಅಧ್ಯಯನ ಅಗತ್ಯವಾಗಿದೆ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದರಿಂದ ಪರಮಾತ್ಮನ ಸಾಕ್ಷತ್ಕಾರಗಳನ್ನು ಅನುಗ್ರಹವನ್ನು ಸಂಪಾದಿಸಬಹುದು ಎಂದರು. ಶಿಷ್ಟರ ರಕ್ಷಣೆ ಮಾಡಿ ದುಷ್ಟರಿಗೆ ಶಿಕ್ಷೆ ನೀಡುವ ಜೀವನದ ಸಿದ್ದಾಂತವಾಗಿರಿಸಿಕೊಂಡ ಶ್ರೀ ಕೃಷ್ಣ ಪರಮಾತ್ಮನ ಸಾತ್ಬಿಕ ಗುಣಗಳು ಅಧುನಿಕ ಕಾಲಘಟದಲ್ಲಿನ ನಮಗೆಲ್ಲ ಆದರ್ಶವಾಗಬೇಕು ಎಂದರು.


ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಪ್ರಕಾಶ್ ಕೆ ಆರ್ ಕೆಮ್ಮಾರ ಅಧ್ಯಕ್ಷತೆ ವಹಿಸಿದ್ದರು. ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಆರುವಾರ, ರಾಮಕುಂಜ ಹಾ.ಉ.ಸಹಕಾರಿ ಸಂಘದ ಅಧ್ಯಕ್ಷ ಮುರಳಿಕೃಷ್ಣ ಬಡಿಲ ಮಾತನಾಡಿದರು. ಸಮಿತಿಯ ಪದಾಧಿಕಾರಿಗಳಾದ ಉದಯ ಕಶ್ಯಪ್, ಪುರುಷೋತ್ತಮ ಗೋಕುಲನಗರ, ಜಗದೀಶ ಪಲ್ಲಡ್ಕ, ಬಾಬು ಕುಲಾಲ್ ಪಾದೆ, ಗಣೇಶ್ ಕೇದಗೆದಡಿ, ಸುದರ್ಶನ ಕೇದಗೆದಡಿ, ಮನಮೋಹನ ಪುಣ್ಕೆತ್ತಡಿ, ದಯಾನಂದ ರಾವ್, ಶ್ರೀಶ ಕುಮಾರ್, ಭವಿತ್ ಪಲ್ಲಡ್ಕ ಪಟ್ಟೆ ಉಪಸ್ಥಿತರಿದ್ದರು.


ಸನ್ಮಾನ:
ನಿವೃತ್ತ ಹಿರಿಯ ಪಶುವೈದ್ಯ ಪರೀಕ್ಷಕ ಅಶೋಕ್ ಕೊಯಿಲ, ನಿವೃತ್ತ ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಸುಲೇಖಾ ಎಂ.ಕೆ, ಕೊಯಿಲ ಜಾನುವಾರು ತಳಿ ಸಂವರ್ಧನ ಕೇಂದ್ರದ ನಿವೃತ್ತ ಉದ್ಯೋಗಿ ಚಂದಪ್ಪ ಕುಲಾಲ್, ಉದ್ಯಮಿ ಕೇಶವ ಅಮೈ, ಅಂತರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಲ ಪ್ರತಿಭೆ ಸೃಜನಾ ಸಿ.ಟಿ ಆನೆಗುಂಡಿ ಅವರುಗಳನ್ನು ಸನ್ಮಾನಿಸಲಾಯಿತು. ಜನ್ಮಾಷ್ಟಮಿ ಪ್ರಯುಕ್ತ ನಡೆದ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಕಾರ್ಯದರ್ಶಿ ಮೋಹನ್‌ದಾಸ್ ಶೆಟ್ಟಿ ವರದಿ ವಾಚಿಸಿದರು. ಸಮಿತಿ ಕೋಶಧಿಕಾರಿ ಕೃಷ್ಣಮೂರ್ತಿ ಕೆಮ್ಮಾರ ಸ್ವಾಗತಿಸಿದರು. ಹರಿಕೃಷ್ಣ ಪಿ ಎನ್ ನೆಕ್ಕರಾಜೆ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಬೆಳಿಗ್ಗೆ ಅಷ್ಟಮಿ ಕಟ್ಟೆಯಲ್ಲಿ ದೀಪೋಜ್ವಲನ ಮಾಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ ಸೇವೆ ನಡೆಯಿತು.

LEAVE A REPLY

Please enter your comment!
Please enter your name here