ಬೆಟ್ಟಂಪಾಡಿ: ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧೀನ ಸಂಸ್ಥೆಯಾದ ಬೆಟ್ಟಂಪಾಡಿ ವಿದ್ಯಾಗಿರಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ 6ನೇ ವರ್ಷದ ಗೋಕುಲಾಷ್ಟಮಿ ಆಚರಣೆ ಸೆ. 9 ರಂದು ಶಾಲಾ ಆವರಣದಲ್ಲಿ ವಿಜೃಂಭೆಯಿಂದ ನಡೆಯುತ್ತಿದೆ.


ಉದ್ಘಾಟನಾ ಕಾರ್ಯಕ್ರಮ
ಬೆಳಿಗ್ಗೆ 9 ಗಂಟೆಗೆ ಶಾಲೆಯಲ್ಲಿ ಶ್ರೀ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ನಡೆದ ಬಳಿಕ ರೆಂಜ ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ ವಠಾರದಲ್ಲಿ ವೈಭವದ ಶ್ರೀಕೃಷ್ಣ ವೇಷಧಾರಿಗಳ ಮೆರವಣಿಗೆಯ ಉದ್ಘಾಟನೆ ನಡೆಯಿತು. ಪ್ರಗತಿಪರ ಕೃಷಿಕ ಶಂಕರ ನಾರಾಯಣ ರಾವ್ ಪಾರ ಉದ್ಘಾಟಿಸಿದರು. ಗುರುಸ್ವಾಮಿ ಕೃಷ್ಣಪ್ಪ ರೆಂಜ ಹಾಗೂ ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಧನಂಜಯ ರೆಂಜ ರವರು ಗೌರವ ಉಪಸ್ಥಿತರಿದ್ದರು.



