ವಲಯ ಮಟ್ಟದ ಪ್ರತಿಭಾ ಕಾರಂಜಿ – ಮಾಣಿ ಬಾಲವಿಕಾಸ‌ ಶಾಲೆಯ ಹಲವು ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ‌‌ ಆಯ್ಕೆ

0

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಣಿಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಮತ್ತು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸನ್ನಿಧಿ ಯಲ್. ಎಸ್.(ಅಭಿನಯ ಗೀತೆ), ತೃಪ್ತಿ ಯು. ಶೆಟ್ಟಿ(ಕವನ ವಾಚನ), ಅಕ್ಷರ ಜೆ. ಶೆಟ್ಟಿ(ಚಿತ್ರ ಕಲೆ),ವರ್ಣ ಮಯೂರಿ(ಲಘು ಸಂಗೀತ), ವೈಷ್ಣವಿ ಎಸ್ ತುಂಗ (ಸಂಸ್ಕೃತ ಧಾರ್ಮಿಕ ಪಠಣ ಹಾಗೂ ಅಭಿನಯ ಗೀತೆ),ಧರಿತ್ರಿ(ಕವನ ವಾಚನ), ಪ್ರೌಢಶಾಲಾ ವಿಭಾಗದಲ್ಲಿ ಸ್ವಸ್ತಿ(ಸಂಸ್ಕೃತ ಧಾರ್ಮಿಕ ಪಠಣ),ಮುಹಮ್ಮದ್ ಅಜ್ಮಲ್ (ಅರೇಬಿಕ್ ಧಾರ್ಮಿಕ ಪಠಣ),ವೃದ್ಧಿ ಎ. ಕೊಂಡೆ (ಹಿಂದಿ ಭಾಷಣ),ಸ್ತುತಿ (ಜನಪದ ಗೀತೆ),ಅಧಿತ್ರಿ ರಾವ್ (ರಂಗೋಲಿ), ದೇವಿಕ (ಕವನ ವಾಚನ),ಮುಹಮ್ಮದ್ ಅಜ್ಮಲ್,ಮುಹಮ್ಮದ್ ಅನ್ಸಫ್, ಮುಹಮ್ಮದ್ ಫಾಝಿಲ್, ಅಕ್ಷಯ್ ಕುಮಾರ್, ಧೀರಜ್,ಸಾಯಿಷ ಎಸ್(ಕವ್ವಾಲಿ) ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಮರ್ಥ್ (ಇಂಗ್ಲಿಷ್ ಕಂಠಪಾಠ),ಆರಾಧ್ಯ ಜಿ ಪಿ( ಕಥೆ ಹೇಳುವುದು), ಜಿ ಎಸ್ ರಿಷಿಕ್ ಅಂಚನ್( ಕ್ಲೇ ಮಾಡೆಲಿಂಗ್),ಪಾವನ ಎ ಬಿ(ಲಘು ಸಂಗೀತ), ಶ್ರಿಗೌರಿ ಶೆಟ್ಟಿ(ಸಂಸ್ಕೃತ ಧಾರ್ಮಿಕ ಪಠಣ), ಸಾಯಿಕಿರಣ್ ಕೆ ಶೆಟ್ಟಿ(ಇಂಗ್ಲಿಷ್ ಕಂಠಪಾಠ), ತನ್ವಿ ಎಸ್(ಕಥೆ ಹೇಳುವುದು),ವರ್ಣ ಮಯೂರಿ(ಭಕ್ತಿ ಗೀತೆ)ಆಶಿಯ ಮಿರ್ಜಾ(ಅರೇಬಿಕ್ ಧಾರ್ಮಿಕ ಪಠಣ), ಸಿಂಚನ ಸಿ ಕೆ(ಮಿಮಿಕ್ರಿ), ಪ್ರೌಢಶಾಲಾ ವಿಭಾಗದಲ್ಲಿ ಮಾನ್ಯ ಆರ್ ಶೆಟ್ಟಿ(ಭರತನಾಟ್ಯ), ಪ್ರಕೃತಿ ಶೆಟ್ಟಿ(ಇಂಗ್ಲಿಷ್ ಭಾಷಣ), ಪ್ರಗತಿ(ಕನ್ನಡ‌ ಭಾಷಣ), ಸಂಜಿತ್(ಮಿಮಿಕ್ರಿ), ಸ್ಪರ್ಶ ಜಿ ಎನ್‌‌ (ಭಾವಗೀತೆ), ಪ್ರೇಕ್ಷಾ(ಚರ್ಚಾ ಸ್ಪರ್ಧೆ), ಯುಕ್ತವರ್ಷಿಣಿ, ಶ್ರೇಯ ವೈ, ವೈಷ್ಣವಿ ಶೆಟ್ಟಿ, ಸಾನ್ವಿ ಆರ್, ನಿವ್ಯಾ ರೈ, ಮಾನ್ಯ ಆರ್. ಶೆಟ್ಟಿ(ಜಾನಪದ ನೃತ್ಯ)ದ್ವಿತೀಯ ಬಹುಮಾನ ಪಡೆದಿದ್ದಾರೆ. ಸಮರ್ಥ್(ಆಶುಭಾಷಣ), ಅಹಮದ್ ರಿಫನ್( ಅರೇಬಿಕ್ ಧಾರ್ಮಿಕ ಪಠಣ), ಸನ್ನಿಧಿ ಎಲ್ ಎಸ್ ಮತ್ತು ಕೃತಿ ಏನ್ ಪಿ( ಛದ್ಮವೇಷ)ತೃತೀಯ ಬಹುಮಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here