
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ: ಭಾಗೀರಥಿ ಮುರುಳ್ಯ
ಕಡಬ: ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಆದುದರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳ ಅಭಿವೃದ್ಧಿ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇಲೆ ಅನುದಾನ ನೀಡಲಾಗಿದೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಭಿಪ್ರಾಯಪಟ್ಟರು.
ಅವರು ಮರ್ದಾಳ ಸಮೀಪದ ಬೊಳಂತ್ಯಡ್ಕದಲ್ಲಿ ಕರ್ಮಾಯಿ-ಬೊಳಂತ್ಯಡ್ಕ ಮೂಲಕ ಬರೆಮೇಲು, ನೇಲಡ್ಕ, ಎನ್ಕೂಪ್ ತಮಿಳು ಕಾಲನಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಲಾ ಸಂಪರ್ಕ ಸೇತು ಯೋಜನೆಯಡಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 102 ನೆಕ್ಕಿಲಾಡಿ ಮತ್ತು ಐತ್ತೂರು ಗ್ರಾಮಗಳನ್ನು ಬೆಸೆಯುವ ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳಾಗಿ ಅಭಿವೃದ್ಧಿಪಡಿಸುವುದು ಹಾಗೂ ಅಗತ್ಯವಿದ್ದೆಡೆ ಸೇತುವೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹಿಂದಿನ ಶಾಸಕ, ಮಾಜಿ ಸಚಿವ ಎಸ್.ಅಂಗಾರ ಅವರು ದೊಡ್ಡ ಮೊತ್ತದ ಅನುದಾನಗಳನ್ನು ಇರಿಸಿದ ಕಾರಣದಿಂದಾಗಿ ಇಂದು ಹೆಚ್ಚಿನ ರಸ್ತೆಗಳು ಅಭಿವೃದ್ಧಿಗೊಂಡಿವೆ ಎಂದು ಅವರು ನೆನಪಿಸಿಕೊಂಡರು. ಜಿ.ಪಂ. ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಪುತ್ತೂರು ಎಪಿಎಂಸಿ ಮಾಜಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪುತ್ತಿಲ, ಪ್ರಮುಖರಾದ ಪೂವಪ್ಪ ಗೌಡ ಐತ್ತೂರು, ಸೂರ್ಯನಾರಾಯಣ ಭಟ್ ಪಟ್ರೋಡಿ, ಮೋನಪ್ಪ ಗೌಡ ಪುತ್ತಿಲ, ತಮ್ಮಯ್ಯ ಗೌಡ ಸುಳ್ಯ, ಸತ್ಯನಾರಾಯಣ ಹೆಗ್ಡೆ ನಡುಮಜಲು, ಸರ್ವೋತ್ತಮ ಗೌಡ ಪಂಜೋಡಿ, ಶರತ್ ಪಂಜೋಡಿ, ದಾಸಪ್ಪ ಪೂಜಾರಿ ಐತ್ತೂರು ಬೈಲು, ಮುತ್ತಪ್ಪ ಅಜಲ ನೇಲಡ್ಕ, ಜಯರಾಮ ಗೌಡ ಕಡಮಾಜೆ, ವರದರಾಜ್ ಬಜಕೆರೆ, ಅಚ್ಚುತ ಗೌಡ ಬರೆಮೇಲು, ನಾರಾಯಣ ಗೌಡ ಕೊಡೆಂಕಿರಿ, ಹರೀಶ್ ಕೋರಿಯಾರ್, ಪುರುಷೋತ್ತಮ ಪಂಜೋಡಿ, ರಾಜೀವಿ ಐತ್ತೂರು ಬೈಲು, ಹೊನ್ನಮ್ಮ, ಶಿವಪ್ರಸಾದ್ ಪೊನ್ನೆತ್ತೂರು, ಚಂದ್ರಶೇಖರ ಪಂಜೋಡಿ, ಕೊರಗಪ್ಪ ಕೊಡೆಂಕಿರಿ, ದೇವಪ್ಪ ಕೊಡೆಂಕಿರಿ, ಶೇಖರ ಪೂಜಾರಿ ಐತ್ತೂರು ಬೈಲು ಮುಂತಾದವರು ಉಪಸ್ಥಿತರಿದ್ದರು.
ದುಗ್ಗಪ್ಪ ಗೌಡ ಅಂತಿಬೆಟ್ಟು ಸ್ವಾಗತಿಸಿ, ಗಣೇಶ್ ಕರ್ಕೇರ ವಂದಿಸಿದರು. ಲೋಕೇಶ್ ಪಂಜೋಡಿ ನಿರೂಪಿಸಿದರು.