ಬೆಳ್ಳಾರೆ: ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಆಡಳಿತ ಮಂಡಳಿಯ 11 ಮಂದಿ ನಿರ್ದೇಶಕ ಸ್ಥಾನಕ್ಕೆ ಸೆ.9ರಂದು ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಿದೆ. ಚುನಾವಣೆಗೆ 22 ಮಂದಿ ನಾಮಪತ್ರ ಸಲ್ಲಿಸಿದ್ದರು.
ಒಂದು ತಂಡದಿಂದ ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು.ಎ, ಅಬ್ದುಲ್ ರಹಿಮಾನ್ ಕೆ, ಅಬ್ದುಲ್ ರಶೀದ್ ಟಿ, ಅಬೂಭಕ್ಕರ್ ಯು ಹೆಚ್(ಮಂಗಳ)ಅಜರುದ್ದೀನ್ ಯು, ಹಮೀದ್ ಹೆಚ್ ಎಂ, ಹನೀಫ್ ಎನ್, ಹಸೈನಾರ್ ಬಿ, ಹುಸೈನ್ ಸಾಹೇಬ್, ಇಸ್ಮಾಯಿಲ್ ಬಿ ಯವರು ಇನ್ನೊಂದು ತಂಡದಿಂದ ಅಬ್ದುಲ್ ಬಶೀರ್, ಅಬ್ದುಲ್ ರಹಿಮಾನ್, ಅಬ್ದುಲ್ ರಹಿಮಾನ್ ಬಿ ಯು, ಅಬ್ದುಲ್ ರಜಾಕ್, ಅಶ್ರಫ್ ಎನ್, ಹಮೀದ್ ಕೆ ಎಂ(ಅಲ್ಪಾ), ಹಸೈನಾರ್ ಕೆ, ಮಹಮ್ಮದ್ ಅತಾವುಲ್ಲಾ, ಮಹಮ್ಮದ್ ಕೆ ಎಂ, ಮಹಮ್ಮದ್ ಮುಸ್ತಫಾ, ಸುಲೈಮಾನ್ ರವರು ಸ್ಪರ್ಧಿಸಿದ್ದರು.
ಸೆ.9ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಚುನಾವಣೆ ನಡೆಯಿತು. ಬಳಿಕ ಪೊಲೀಸ್ ಬಂದೋಬಸ್ತಿನೊಂದಿಗೆ ವಕ್ಫ್ ಅಧಿಕಾರಿಗಳು ಮತ ಎಣಿಕೆ ಪ್ರಕ್ರಿಯೆ ನಡೆಸಿ ರಾತ್ರಿ 8 ಗಂಟೆಗೆ ಮತ ಎಣಿಕೆ ಕಾರ್ಯ ಮುಕ್ತಾಯವಾಯಿತು. ನಿರ್ದೇಶಕರಾಗಿ ಅಬೂಬಕ್ಕರ್ ಯು. ಹೆಚ್, ಅಬ್ದುಲ್ ಖಾದರ್ ಬಾಯಂಬಾಡಿ, ಅಬ್ದುಲ್ ನಾಸೀರ್ ಯು ಎ, ಅಬ್ದುಲ್ ರಹಿಮಾನ್ ಕೆ, ಹಮೀದ್ ಹೆಚ್.ಎಂ, ಅಜರುದ್ದೀನ್, ಹನೀಫ್ ಎನ್, ಇಸ್ಮಾಯಿಲ್ ಬಿ, ಅಬ್ದುಲ್ ಬಶೀರ್, ಹಸೈನಾರ್ ಬಿ, ಹಮೀದ್ ಕೆ ಎಂ ಆಯ್ಕೆಯಾದರು.
11 ಸ್ಥಾನಗಳಿಗಾಗಿ 22 ಮಂದಿ ಕಣದಲ್ಲಿದ್ದರು. ಚುನಾವಣೆಯಲ್ಲಿ ಜಮಾಅತಿನ 460 ಸದಸ್ಯರಲ್ಲಿ 411 ಮಂದಿ ಮತ ಚಲಾಯಿಸಿದ್ದರು. ಅಬೂಬಕ್ಕರ್ ಯು. ಹೆಚ್ 255 ಮತ, ಅಬ್ದುಲ್ ಖಾದರ್ ಬಾಯಂಬಾಡಿ 241, ಅಬ್ದುಲ್ ನಾಸೀರ್ ಯು ಎ 228, ಅಬ್ದುಲ್ ರಹಿಮಾನ್ ಕೆ 224, ಹಮೀದ್ ಹೆಚ್ ಎಂ 222, ಅಜರುದ್ದೀನ್ 217, ಹನೀಫ್ ಎನ್ 208, ಇಸ್ಮಾಯಿಲ್ ಬಿ 204, ಅಬ್ದುಲ್ ಬಶೀರ್ 202, ಹಸೈನಾರ್ ಬಿ 199, ಹಮೀದ್ ಕೆ.ಎಂ. 196 ಮತ ಗಳಿಸಿ ವಿಜಯಿಯಾದರು.
ಹುಸೈನ್ ಸಾಹೇಬ್ 196, ಹಸೈನಾರ್ ಕೆ 195, ಅಬ್ದುಲ್ ರಶೀದ್ 195, ಅಬ್ದುಲ್ ರಹಿಮಾನ್ 183, ಮಹಮ್ಮದ್ ಅತ್ತಾವುಲ್ಲಾ 172, ಅಬ್ದುಲ್ ರಜಾಕ್ 172, ಅಶ್ರಫ್ ಎನ್169, ಮಹಮ್ಮದ್ ಮುಸ್ತಫಾ ಎಂ 168, ಮಹಮ್ಮದ್ ಕೆ ಎಂ 166, ಅಬ್ದುಲ್ ರಹಿಮಾನ್ ಬಿ.ಯು164, ಸುಲೈಮಾನ್ 163 ಮತಗಳನ್ನು ಪಡೆದರು. ಚುನಾವಣಾಧಿಕಾರಿಯಾಗಿ ದ.ಕ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿ ಅಬೂಬಕ್ಕರ್ ಆಯ್ಕೆ ಪ್ರಕ್ರಿಯೆ ನಡೆಸಿದರು.
ಸಮಾನ ಮತ ಟಾಸ್‌ನಲ್ಲಿ ಆಯ್ಕೆ:
ಹಮೀದ್ ಕೆ.ಎಂ. ಹಾಗೂ ಹುಸೈನ್ ಸಾಹೇಬ್ ಅವರು 196 ಮತಗಳನ್ನು ಪಡೆದುಕೊಂಡಿದ್ದು, ಚುನಾವಣಾಧಿಕಾರಿ ಟಾಸ್ ಮೂಲಕ ನಿರ್ದೇಶಕರನ್ನು ಆಯ್ಕೆಮಾಡಿದರು. ಹಮೀದ್ ಕೆ.ಎಂ. ಅವರು ಟಾಸ್ ಗೆದ್ದು ನಿರ್ದೇಶಕರಾಗಿ ಆಯ್ಕೆಯಾದರು.
ಮರು ಎಣಿಕೆಗೆ ಸಿಗದ ಅವಕಾಶ-ಅಸಮಾಧಾನ:
ಚುನಾವಣೆಯಲ್ಲಿ ಪಡೆದ ಮತಗಳ ಮರು ಎಣಿಕೆ ನಡೆಸುವಂತೆ 195 ಮತಗಳನ್ನು ಪಡೆದ ಅಭ್ಯರ್ಥಿ ಅಬ್ದುಲ್ ರಶೀದ್ ಅವರು ಚುನಾವಣಾಧಿಕಾರಿಗಳಲ್ಲಿ ಮನವಿ ಸಲ್ಲಿಸಿದರು. ಆದರೆ ಚುನಾವಣಾಧಿಕಾರಿಗಳು ಮರು ಎಣಿಕೆಗೆ ಅವಕಾಶ ನೀಡಲಿಲ್ಲ ಎಂದು ಅಬ್ದುಲ್ ರಶೀದ್ ಅವರು ಅಸಮಾಧಾನ ಹೊರಹಾಕಿದ್ದಾರೆ.