ಬಡಗನ್ನೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಪುತ್ತೂರು ಹಾಗೂ ಪಟ್ಟೆ ವಿದ್ಯಾಸಂಸ್ಥೆಗಳ ಸಹಭಾಗಿತ್ವದಲ್ಲಿ ಸವಣೂರು ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದ ಸಮಾರೋಪ ಸಮಾರಂಭವು ಪಟ್ಟೆ ವಿದ್ಯಾ ಸಂಸ್ಥೆಗಳ ನಿರ್ದೇಶಕ ನಹುಷ್ ಪಟ್ಟೆರವರ ಅಧ್ಯಕ್ಷತೆಯಲ್ಲಿ ಸೆ.9ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಪಟ್ಟೆ ವಿದ್ಯಾಸಂಸ್ಥೆಗಳ ನಿರ್ದೇಶಕ ಶಿರೀಷ ಪಿ.ಬಿ, ಮಾತನಾಡಿ ಕ್ರೀಡಾ ಕೂಟದಲ್ಲಿ ಮಕ್ಕಳ ಭಾಗವಹಿಸುವಿಕೆ ಪ್ರಮುಖವಾದದ್ದು ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು, ನಮ್ಮ ಪ್ರಯತ್ನವನ್ನು ಮುಂದುವರಿಸುತ್ತಿರಬೇಕು. ಆಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾ, ಸಂಸ್ಥೆಗಳ ಸಂಚಾಲಕ ನಾರಾಯಣ ಭಟ್ ಪಿ, ಪ್ರಮೋದ್ ಬಳ್ಳಿಕಾನ ರಾಷ್ಟ್ರೀಯ ತ್ರೋಬಾಲ್ ಆಟಗಾರರು ಗ್ಲೋಟಚ್ ಟೆಕ್ನಾಲಜಿ ಮಂಗಳೂರು, ಸವಣೂರು ನೋಡೆಲ್ ಅಧ್ಯಕ್ಷ ಸಹದೇವ, ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಫ್ ಪಿ.ಆರ್, ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಗೋಪಾಲ ಕೃಷ್ಣ ಭಟ್, ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಪಟ್ಟೆ, ಪಡುಮಲೆ ಸ.ಹಿ.ಪ್ರಾ. ಶಾಲಾ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಪಾಟಾಳಿ ಪಟ್ಟೆ, ಶ್ರೀ ಕಷ್ಟ ಹಿ.ಪ್ರಾ.ಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಯಮುನಾ ವೈ.ಕೆ ನಾಯ್ಕ, ಉಪಸ್ಥಿತರಿದ್ದರು. ಪ್ರತಿಭಾ ಪ್ರೌಢಶಾಲಾ ಶಿಕ್ಷಕಿ ಭವಿತಾ ಸ್ವಾಗತಿಸಿದರು
ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಸಹ ಶಿಕ್ಷಕ ರಾಮಚಂದ್ರಪ್ಪ ವಂದಿಸಿದರು, ಪ್ರತಿಭಾ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಬೊಳ್ಲಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರತಿಭಾ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಮನ, ಸಹ ಶಿಕ್ಷಕಿಯಾರದ ಪ್ರೀತಿ, ಜಯಾಶ್ರೀ, ಶ್ರೀ ಕೃಷ್ಣ ಹಿ.ಪ್ರಾ.ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಭಟ್ ಮತ್ತು ಗೌರವ ಶಿಕ್ಷಕಿಯರು ಸಹಕರಿಸಿದರು.
ಟ್ರೋಫಿ ವಿತರಣೆ
ಸವಣೂರು ವಲಯ ಬಾಲಕರ ವಿಭಾಗದಲ್ಲಿ ಸರಸ್ವತಿ ವಿದ್ಯಾ ಮಂದಿರ ನೆರಿಮೊಗ್ರು ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ಸರ್ಕಾರಿ ಪದವಿಪೂರ್ವ ಕಾಲೇಜು ಸವಣೂರು ಪಡೆದು ತಾಲೂಕು ಮಟ್ಟಕೆ ಆಯ್ಕೆಯಾಗಿದೆ.
ಬಾಲಕಿಯರ ವಿಭಾಗದ ತ್ರೋಬಾಲ್ ಪಂದ್ಯಾಟದಲ್ಲಿ ಪಟ್ಟೆ ಪ್ರತಿಭಾ ಪ್ರೌಢಶಾಲೆ ಪ್ರಥಮ ಸ್ಥಾನ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಕಾಣಿಯೂರು ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.
ಬಾಲಕರ ವಿಭಾಗದಲ್ಲಿ ಉತ್ತಮ ಹಿಡಿತಗಾರ ಟ್ರೋಫಿಯನ್ನು ಸರಸ್ವತಿ ವಿದ್ಯಾ ಮಂದಿರ ನರಿಮೊಗ್ರು ತಂಡದ ಅಟಗಾರ ಜಾಸಿಫ್ ಉತ್ತಮ ಹಿಡಿತಗಾರ ಟ್ರೋಫಿಯನ್ನು ಪಡೆದುಕೊಂಡಿದ್ದಾನೆ. ಸರ್ಕಾರಿ ಪದವಿಪೂರ್ವ ಕಾಲೇಜು ಸವಣೂರು ತಂಡದ ಅಟಗಾರ ಸಂತೋಷ್ ಉತ್ತಮ ಎಸೆತಗಾರ ಟ್ರೋಫಿಯನ್ನು ಪಡೆದು ಕೊಂಡಿದ್ದಾನೆ. ಬಾಲಕಿಯರ ವಿಭಾಗದಲ್ಲಿ ಉತ್ತಮ ಹಿಡಿತಗಾರ್ತಿ ಟ್ರೋಫಿಯನ್ನು ಪಟ್ಟೆ ಪ್ರತಿಭಾ ಪ್ರೌಢಶಾಲಾ ತಂಡದ ಆಟಗಾರ್ತಿ ದೀಕ್ಷಾ ಪಡೆದು ಕೊಂಡಿದ್ದಾಳೆ ಹಾಗೂ ಸಾಂದಿಪನಿ ಪದವಿಪೂರ್ವ ಕಾಲೇಜು ಕಾಣಿಯೂರು ತಂಡದ ಆಟಗಾರ್ತಿ ತೃಷಾ ಉತ್ತಮ ಎಸೆತಗಾರ್ತಿ ಟ್ರೋಫಿಯನ್ನು ಪಡೆದುಕೊಂಡಿದ್ದಾಳೆ.
ತೀರ್ಪುಗಾರಾಗಿ ಚಂದ್ರಕಲಾ, ಕೃಷ್ಣ ಪ್ರಸಾದ್, ವಿನೋದಾ, ಶ್ವೇತಾ, ರಾಜೀವಿ, ಲಕ್ಷ್ಮೀ, ಸುಲೋಚನ, ರಾಧಾಕೃಷ್ಣ,ಹೇಮಾ ,ಸುದೀಕ್ಷಾ, ಸಹಕರಿಸಿದರು.