ಪುತ್ತೂರು: ಬೆಂಗಳೂರಿನ ಜನಸಿರಿ ಫೌಂಡೇಶನ್ ಇದರ ವತಿಯಿಂದ ನೀಡುವಂತಹ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಪುತ್ತೂರಿನ ಹೆಸರಾಂತ ಸ್ಪರ್ಧಾತ್ಮಕ ಪರೀಕ್ಷೆ ಗಳ ತರಬೇತಿ ಸಂಸ್ಥೆ ,ಇಲ್ಲಿನ ಎಪಿಎಂಸಿ ಹಿಂದೂಸ್ಥಾನ್ ಸಂಕೀರ್ಣ ದಲ್ಲಿ ಕಾರ್ಯಚರಿಸುತ್ತಿರುವ ವಿದ್ಯಾಮಾತಾ ಅಕಾಡೆಮಿ ಆಯ್ಕೆಗೊಂಡು, ಸೆ.9ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಪ್ರಶಸ್ತಿಯನ್ನು ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈ ಇವರಿಗೆ ಪ್ರಧಾನ ಮಾಡಲಾಯಿತು.
ಹಲವು ಜನಾಂಗದ ವಿದ್ಯಾರ್ಥಿಗಳಿಗೆ ಸರಕಾರದ ಅನೇಕ ಸವಲತ್ತುಗಳನ್ನು ಒದಗಿಸುವಲ್ಲಿ ಸಂಸ್ಥೆಯು ವಹಿಸಿದ್ದ ಶ್ರಮ, ಸಮಾನ ಶಿಕ್ಷಣ ನೀತಿ ಜಾರಿಗೆ ಬರಬೇಕೆಂಬ ಹೋರಾಟದೊಂದಿಗೆ ವಿದ್ಯಾಮಾತ ಸಂಸ್ಥೆಯು ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳಗಳ ಆಯೋಜನೆ ಮೂಲಕ ಅನೇಕ ಉದ್ಯೋಗಾವಕಾಶಗಳನ್ನು ಕಲ್ಪಿಸಿ ಕೊಟ್ಟಿರುವುದು ಮತ್ತು ವಿದ್ಯಾಮಾತಾ ಅಕಾಡೆಮಿಯ ಮೂಲಕ ನೂರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವಂತೆ ಅವರನ್ನು ಹಣಿಗೊಳಿಸಿ , ಸರಕಾರಿ ಉದ್ಯೋಗ ದೊರಕುವಂತೆ ಪ್ರಾಮಾಣಿಕ ಪ್ರಯತ್ನ , ಅಗ್ನಿಪಥ್ ಯೋಜನೆಯ ಮೂಲಕ 18 ಯುವಕರು ಸೈನ್ಯ ಸೇರಿ, ದೇಶ ಸೇವೆ ಮಾಡಲು ಅವಕಾಶ ಕಲ್ಪಿಸಿ, ಹಲವಾರು ಸರಕಾರಿ ಶಾಲೆಗಳಿಗೆ ವಿದ್ಯಾಮಾತಾದ ಹಲವು ಯೋಜನೆ ಮೂಲಕ ಸಹಾಯ ಇವುಗಳನೆಲ್ಲ ಪರಿಗಣಿಸಿ ಪ್ರಶಸ್ತಿಯ ಆಯ್ಕೆ ಸಮಿತಿಯು ಕೊಡಗು, ದಕ್ಷಿಣ ಕನ್ನಡ, ಉಡುಪಿ ಈ ಮೂರು ಜಿಲ್ಲೆಯಿಂದ ವಿದ್ಯಾಮಾತಾ ಸಂಸ್ಥೆಯ ಭಾಗ್ಯೇಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಾರ್ಯಕ್ರಮದಲ್ಲಿ ಗಜೇಂದ್ರಗಡ ಕಾಲಜ್ಞಾನ ಮಠದ ಬ್ರಹ್ಮ ಸದ್ಗುರು ಶಿವಯೋಗಿ ಶರಣಬಸವ ಮಹಾಸ್ವಾಮಿಗಳು, ಶ್ರೀ ಬೇಲಿ ಮಠ ಮಹಾಸಂಸ್ಥಾಂ ಕಾಟನ್ ಪೇಟೆ ಬೆಂಗಳೂರು ಇಲ್ಲಿನ ಶ್ರೀ ಶ್ರೀ ಪರಮ ಪೂಜ್ಯ ಶ್ರೀ ನಿ . ಪ್ರ. ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು, ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ ರಾಮೋಹಳ್ಳಿ ಬೆಂಗಳೂರು ಇಲ್ಲಿನ ಶ್ರೀ ಡಾ. ಆರೂಢಭಾರತಿ ಸ್ವಾಮೀಜಿ ಇವರುಗಳ ದಿವ್ಯ ಸಾನಿಧ್ಯದಲ್ಲಿ, ನಿವೃತ್ತ ಐಎಎಸ್ ಅಧಿಕಾರಿ ಕೆ ಶಿವರಾಮು, ಕರ್ನಾಟಕ ರಾಜ್ಯ ಪದವೀಧರ ವೇದಿಕೆಯ ರಾಮೋಜಿ ಗೌಡ, ಹಿರಿಯ ಖ್ಯಾತ ಕವಿ ಬಿ ಆರ್ ಲಕ್ಷ್ಮಣ ರಾವ್ ಸೇರಿದಂತೆ ಹಲವಾರು ಅತಿಥಿಗಳ ಉಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಭಾಗ್ಯೇಶ್ ರೈ ಯವರಿಗೆ ಪ್ರದಾನ ಮಾಡಲಾಯಿತು.
ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಗೌರವಿಸಿದ್ದೇವೆ..
ವಿದ್ಯೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ನಾವು ಭಾಗ್ಯೇಶ್ ಅವರಿಗೆ ಪ್ರಶಸ್ತಿಯನ್ನು ನೀಡಿದ್ದೇವೆ. ಸೂಕ್ತ ವ್ಯಕ್ತಿಗೆ ನೀಡುವುದರ ಮೂಲಕ ಪ್ರಶಸ್ತಿಯ ಗೌರವ ಹೆಚ್ಚಿದೆ ಅನ್ನಬಹುದು. ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಲು ತಿಳಿಸಿದಾಗಲೂ ಭಾಗ್ಯೇಶ್ ರೈ ಅವರು ಅರ್ಜಿ ಹಾಕಲು ನಿರಾಕರಿಸಿದರು. ಆದರೆ ವಿದ್ಯಾಮಾತ ಸಂಸ್ಥೆಯ ಮೂಲಕ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಗೌರವಿಸಿದ್ದೇವೆ.
ನಾಗಲೇಖ
ಅಧ್ಯಕ್ಷರು ಜನಸಿರಿ ಫೌಂಡೇಶನ್
ರಾಜ್ಯಮಟ್ಟದ ‘ಶಿಕ್ಷಣ ಸೇವಾ ರತ್ನ’ಪ್ರಶಸ್ತಿ ಬಂದಿರುವುದು ಅತ್ಯಂತ ಖುಷಿ ಕೊಟ್ಟಿದೆ…
“ವಿದ್ಯಾಮಾತಾ ಸಂಸ್ಥೆಯ ಮೂಲಕ ನಾನಾ ರೀತಿಯ ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ರಾಜ್ಯಮಟ್ಟದ ‘ಶಿಕ್ಷಣ ಸೇವಾ ರತ್ನ’ಪ್ರಶಸ್ತಿ ಬಂದಿರುವುದು ಅತ್ಯಂತ ಖುಷಿ ಕೊಟ್ಟಿದೆ. ನನಗೆ ಇಷ್ಟರವರೆಗೆ ಸಹಕಾರ ನೀಡಿದ ವಿದ್ಯಾಮಾತ ಸಂಸ್ಥೆಯ ಎಲ್ಲಾ ಸದಸ್ಯರಿಗೆ, ತರಬೇತುದಾರರಿಗೆ, ಸಿಬ್ಬಂದಿ ವರ್ಗ, ನನ್ನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ಮತ್ತು ನನ್ನನ್ನು ಗುರುತಿಸಿದ ಜನಸಿರಿ ಫೌಂಡೇಶನ್ ಗೆ ನನ್ನ ಅತ್ಯಂತ ಧನ್ಯವಾದಗಳು. ಈಗ ಪಡೆಯುವ ಪ್ರಶಸ್ತಿಗಳನ್ನು ಜನಸಾಮಾನ್ಯರು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಇದೇ ಕಾರಣದಿಂದ ಜನಸೇವೆ ಫೌಂಡೇಶನ್ ರವರು ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು ಕರೆ ಮಾಡಿ ತಿಳಿಸಿದಾಗ ನಾವು ಅರ್ಜಿಯನ್ನು ಹಾಕಿರಲಿಲ್ಲ. ಆದರೂ ನಮ್ಮ ಸಂಸ್ಥೆಯ ಹಿನ್ನಲೆಯ ಬಗ್ಗೆ ತಿಳಿದುಕೊಂಡು ನಮಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯ ಗೌರವವನ್ನು ನಮ್ಮಲ್ಲಿ ತರಬೇತಿ ಪಡೆದು ಆಯ್ಕೆ ಆಗಿ ಸೇನೆಯಲ್ಲಿರುವ ನನ್ನ ಹುಡುಗರಿಗೆ ಸಮರ್ಪಿಸುತ್ತಿದ್ದೇನೆ” .
ಭಾಗ್ಯೇಶ್ ರೈ,
ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ