ಜೆಸಿಐ ವಿಟ್ಲ ಘಟಕದಿಂದ ಮಹಿಳಾ ಮಂಡಲ ಅಂಗನವಾಡಿ ಕೇಂದ್ರಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಕೊಡುಗೆ

0

ವಿಟ್ಲ: ಜೆಸಿಐ ಸಪ್ತಾಹ 2023ರ ಎರಡನೇ ದಿನದ ಕಾರ್ಯಕ್ರಮದ ಪ್ರಯುಕ್ತ ಮಹಿಳಾ ಮಂಡಲ ಹಾಗೂ ಅಂಗನವಾಡಿ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ನೀಡುವ ಕಾರ್ಯಕ್ರಮವನ್ನು ಜೆಸಿಐ ಪೂರ್ವಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಘಟಕದ ಪೂರ್ವಾಧ್ಯಕ್ಷರಾದ ಹಾಜಿ ಹಸನ್ ವಿಟ್ಲ ರವರು ನೀರಿನ ಮಹತ್ವದ ಬಗ್ಗೆ ತಿಳಿಸಿದರು. ಘಟಕಾಧ್ಯಕ್ಷರಾದ ಪರಮೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸರೋಜಿನಿ ನಾಗೇಶ್, ಅಂಗನವಾಡಿ ಶಿಕ್ಷಕಿ ಮೂಕಾಂಬಿಕಾ, ಘಟಕದ ಕಾರ್ಯದರ್ಶಿ ದೀಕ್ಷಿತ್ , ಸಪ್ತಾಹದ ನಿರ್ದೇಶಕರಾದ ರಿತೆಷ್ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here