ಉಪ್ಪಿನಂಗಡಿ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ರಿಕ್ಷಾ ಪಲ್ಟಿ-8 ವಿದ್ಯಾರ್ಥಿಗಳಿಗೆ ಗಾಯ

0

ಉಪ್ಪಿನಂಗಡಿ: ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಅಟೋ ರಿಕ್ಷಾವೊಂದು ಮಗುಚಿ ಬಿದ್ದು ಒಂಬತ್ತು ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಬಳಿ ಸೆ.11ರಂದು ಬೆಳಗ್ಗೆ ನಡೆದಿದೆ.


ಕಲ್ಲೇರಿ ಆಸುಪಾಸಿನಿಂದ ಮೂಡಡ್ಕದ ಅಲ್ ಮದೀನಾತುಲ್ ಮುನಾವರ ಆಂಗ್ಲ ಮಾಧ್ಯಮ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದ ಅಟೋ ರಿಕ್ಷಾಕ್ಕೆ ಮೂರುಗೋಳಿ ಬಳಿ ದ್ವಿಚಕ್ರ ವಾಹನವೊಂದು ಅಡ್ಡ ಬಂದಿದ್ದು, ಈ ಸಂದರ್ಭ ಚಾಲಕನ ನಿಯಂತ್ರಣ ಕಳೆದುಕೊಂಡ ಅಟೋ ರಿಕ್ಷಾ ಮಗುಚಿ ಬಿದ್ದಿದೆ. ಘಟನೆಯಿಂದ ರಿಕ್ಷಾದಲ್ಲಿದ್ದ ಶಾಹಿನ್, ಮುಹಮ್ಮದ್ ಶಹೀರ್, ರಿಫಾ ಫಾತಿಮಾ, ಸಿಹಾಲ್, ಅಮೀನ್, ನಾಫೀರ್, ಮಿಷೂರ್ ಸೇರಿದಂತೆ ಒಂಬತ್ತು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.

LEAVE A REPLY

Please enter your comment!
Please enter your name here