ಪಾನಮತ್ತನಾಗಿ ಬೈಕ್‌ ಚಲಾವಣೆ – ಉರುಳಿ ಬಿದ್ದ ಬೈಕ್ – ಕಲ್ಲರ್ಪೆಯಲ್ಲಿ ಘಟನೆ

0

ಪುತ್ತೂರು: ಪಾನಮತ್ತನಾಗಿ ಪುತ್ತೂರಿನಿಂದ ಮರಿಕೆಯ ತನ್ನ ಮನೆಗೆ ಬೈಕ್‌ ನಲ್ಲಿ ಪ್ರಯಾಣಿಸುತ್ತಿದ್ದ ಆನಂದ್‌ ಎಂಬವರು ನಿಯಂತ್ರಣ ತಪ್ಪಿ ಬೈಕ್‌ ಸಮೇತ ಉರುಳಿ ಬಿದ್ದ ಘಟನೆ ಸಂಪ್ಯದ ಕಲ್ಲರ್ಪೆ ಬಳಿ ನಡೆದಿದೆ. ಪಾನಮತ್ತನಾಗಿ ಬೈಕ್‌ ಚಲಾಯಿಸಿದ ಆನಂದ್‌ ಮುಖ್ಯ ರಸ್ತೆಯಿಂದ ಕೆಳಗಿನ ರಸ್ತೆಗೆ ಬೈಕ್‌ ಸಮೇತ ಉರುಳಿ ಬಿದ್ದಿದ್ದು, ಕಾಲಿಗೆ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here