ಪುತ್ತೂರು : ಹಿರಿಯ ನಾಟಿ ವೈದ್ಯೆ ಪೆರಿಯತ್ತೋಡಿ ಅಣ್ಣು ಪೂಜಾರಿಯವರ ಪತ್ನಿ ಲಕ್ಷ್ಮೀ ಪೆರಿಯತ್ತೋಡಿ ( 95 ವರ್ಷ ) ಯವರು ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.
ಸರ್ಪಸುತ್ತು ಸೇರಿದಂತೆ ಹಲವಾರು ಖಾಯಿಲೆಗಳಿಗೆ ನಾಟಿ ಚಿಕಿತ್ಸೆ, ಔಷಧಿ ನೀಡುವ ಮೂಲಕ ಲಕ್ಷ್ಮೀ ಯವರು ಚಿರಪರಿಚಿತರಾಗಿದ್ದರು.
ಮೃತರು ಪುತ್ರಿಯರಾದ ಬೇಬಿ, ಸುಶೀಲ, ಸೀತಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.