ವಿಜ್ರಂಭಣೆಯಿಂದ ನಡೆದ ಉರ್ಲಾಂಡಿ ಶ್ರೀ ಸತ್ಯನಾರಾಯಣ ಬಾಲಗೋಕುಲದ ಗೋಕುಲಾಷ್ಟಮಿ

0

ಪುತ್ತೂರು: ಶ್ರೀ ಸತ್ಯನಾರಾಯಣ ಬಾಲಗೋಕುಲ, ಸತ್ಯನಾರಾಯಣ ಕಟ್ಟೆ ಉರ್ಲಾಂಡಿ ವತಿಯಿಂದ ೨ನೇ ವರ್ಷದ ಗೋಕುಲಾಷ್ಟಮಿ ಕಾರ್ಯಕ್ರಮ ಸೆ.೧೦ರಂದು ಉರ್ಲಾಂಡಿಯಲ್ಲಿ ನಡೆಯಿತು. ಯುನಿಟಿ ಸುಪಾರಿಯಿಂದ ಉರ್ಲಾಂಡಿ ಸತ್ಯನಾರಾಯಣ ಕಟ್ಟೆಯವರೆಗೆ ರಾಧಾಕೃಷ್ಣ ವೇಷಧಾರಿ ಪುಟಾಣಿಗಳ ಜೊತೆ ಕುಣಿತ ಭಜನಾ ಮೆರವಣಿಗೆಯನ್ನು ಯುನಿಟಿ ಸುಪಾರಿ ಇಂಡಸ್ಟ್ರೀಸ್‌ನ ಮಾಲಕಿ ಕವಿತಾ ಕೃಷ್ಣಮೂರ್ತಿಯವರಿಗೆ ಭಗವಾನ್ ಧ್ವಜ ಹಸ್ತಾಂತರಿಸುವ ಜತೆಗೆ, ಎ.ಜೆ. ನೈಕ್‌ರವರು ತೆಂಗಿನಕಾಯಿ ಒಡೆಯುವ ಮೂಲಕ ಶೋಭಾಯಾತ್ರೆಯನ್ನು ಉದ್ಘಾಟಿಸಲಾಯಿತು.
ಸಾಮರಸ್ಯ ಸಹ ಸಂಯೋಜಕ್ ಮಂಗಳೂರು ವಿಭಾಗದ ಶಿವಪ್ರಸಾದ್ ಮಲೆಬೆಟ್ಟುರವರು ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಪದ ಟ್ರೇಡರ್ಸ್‌ನ ಶೈಲಾ ರಾಜೇಶ್, ಉರ್ಲಾಂಡಿ ಸತ್ಯನಾರಾಯಣ ಕಟ್ಟೆ ಸಮಿತಿ ಗೌರವಾಧ್ಯಕ್ಷ ಎ.ಜೆ. ನೈಕ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದಿದ್ದು, ಅರ್ಜುನ್ ಫ್ರೆಂಡ್ಸ್ ಕ್ಲಬ್ ಮತ್ತು ಸತ್ಯನಾರಾಯಣ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಹಗ್ಗಜಗ್ಗಾಟ ಮತ್ತು ಅಟ್ಟಿ ಮಡಿಕೆ ನಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು, ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲಾ ರಾಧಾಕೃಷ್ಣ ವೇಷಧಾರಿಗಳಿಗೆ ಸ್ಮರಣಿಕೆ ನೀಡಲಾಯಿತು. ಕುಣಿತ ಭಜನೆ ತರಬೇತುದಾರ ಹರೀಶ್ ವಿ. ನೆರಿಯ, ಆಶಾ ಕಾರ್ಯಕರ್ತೆಯಾದ ಮೀನಾಕ್ಷಿ ರಾಮಚಂದ್ರ, ಬಾಲಗೋಕುಲದ ಪುಟಾಣಿ ಕಿಶನ್‌ರವರನ್ನು ಸನ್ಮಾನಿಸಲಾಯಿತು, ಕು.ರಕ್ಷಿತಾ ಹೆಗ್ಡೆ ಬಾಲಗೋಕುಲದ ಮಕ್ಕಳಿಗೆ ಹನುಮಾನ್ ಚಾಲೀಸ್ ಪುಸ್ತಕವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಗರಸಭಾ ಸದಸ್ಯ ಸಂತೋಷ್‌ಕುಮಾರ್, ರಘುರಾಮ ಹೆಗ್ಡೆ, ನಂದ ಕಿಶೋರ್, ಶೋಭರಾಜ್, ಅಶೋಕ್ ಹೆಗ್ಡೆ, ಹರಿಪ್ರಸಾದ್, ಯೋಗಾನಂದ ರಾವ್, ಮನೋಹರ್, ರಮೇಶ್ ಗೌಡ, ನಿತಿನ್, ಶರತ್, ಸುಜಿತ್, ಪ್ರಮೋದ್ ಹೆಗ್ಡೆ, ವೆಂಕಟೇಶ್ ಹೆಗ್ಡೆ, ಶಿವರಾಂ, ಪುಷ್ಪರಾಜ ಹೆಗ್ಡೆ, ಪ್ರಮೋದ್ ಮಾಡಾವು, ಜಯರಾಮ್, ಪೃಥ್ವಿ, ವಿನಿತ್, ಶೇಖರ, ಮಹೇಶ್, ದೀಕ್ಷಿತ್, ಜಯರಾಮ್ ಗೌಡ, ಚಿದಾನಂದ, ರಾಜೇಶ್ ಹೆಗ್ಡೆ,, ಸುನೀತ್ ನಾಯ್ಕ, ಪ್ರಶಾಂತ್ ಹೆಗ್ಡೆ, ಮಾದ, ಸುಹಾನ್, ವೇದಾಂತ್, ರೇವಂತ್, ಅನುದೀಪ, ಪ್ರಜ್ವಲ್, ಕೊರಗಪ್ಪ, ಪ್ರಸಾದ್, ಶ್ರೇಯಾ, ಶರಣ್ಯ, ರಾಜೇಶ್ವರಿ ಹೆಗ್ಡೆ, ಮೀನಾಕ್ಷಿ, ಪೂರ್ಣಿಮಾ, ಪವಿತ್ರ, ಸರಿತಾ ಅಶೋಕ್, ಸುಮಲತಾ, ಭವ್ಯ, ಸತ್ಯನಾರಾಯಣ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
ಬಾಲಗೋಕುಲದ ಮಕ್ಕಳಾದ ಸಾಕ್ಷಿ, ಸಾನ್ವಿ, ಆರ್ಯ, ಶಿವಪ್ರಸಾದ್, ಸಾಮ್ಯ, ಅನ್ವಿತ ಪ್ರಾರ್ಥಿಸಿದರು. ಪ್ರಖ್ಯಾತ್ ಸ್ವಾಗತಿಸಿ, ಆಶಿಕಾ ಮತ್ತು ಬಾಲಗೋಕುಲದ ಮಾತಾಜಿ ಜಯಶ್ರೀ ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು. ಮಾತಾಜಿ ಚೇತನ ವಿವೇಕ್ ಧನ್ಯವಾದಗೈದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here