ರೂ.27.53 ಕೋಟಿ ವ್ಯವಹಾರ, 12.96ಲಕ್ಷ ರೂ.ಲಾಭ, ಶೇ.9 ಡಿವಿಡೆಂಡ್ ಘೋಷಣೆ
ಪುತ್ತೂರು: ವೀರ ಮಾಚಿದೇವ ವಿವಿಧೋದ್ದೇಶ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ ರೂ.27.53 ಕೋಟಿ ವ್ಯವಹಾರ ನಡೆಸಿ ರೂ.12,96,687 ಲಾಭಗಳಿಸಿದೆ. ಲಾಭಾಂಶದಲ್ಲಿ ಸದಸ್ಯರಿಗೆ ಶೇ.9 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಇಂದುಶೇಖರ್ ಪಿ.ಬಿ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಸಂಘದ 11ನೇ ಮಹಾಸಭೆಯು ಸೆ.10ರಂದು ಮಹಿಳಾ ವಿವಿಧೋzಶ ಸಹಕಾರಿ ಸಂಘದ ಸಹಕಾರ ಜ್ಯೋತಿ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ವರದಿ ವರ್ಷದಲ್ಲಿ 3,795 ಸದಸ್ಯರಿದ್ದಾರೆ. ರೂ.42,86,540 ಪಾಲು ಬಂಡವಾಳ ಹಾಗೂ ರೂ.6,23,71,535.11 ಠೇವಣಾತಿ ಹೊಂದಿದೆ. ರೂ.5,48,26,792 ನ್ನು ಸದಸ್ಯರಿಗೆ ವಿವಿಧ ರೂಪದಲ್ಲಿ ಸಾಲ ವಿತರಿಸಲಾಗಿದೆ. ರೂ.1,79,35,909.49ನ್ನು ವಿವಿಧ ಬ್ಯಾಂಕುಗಳಲ್ಲಿ ವಿನಿಯೋಗಿಸಲಾಗಿದೆ. ರೂ.9,51,223.07 ಚರ ಸೊತ್ತುಗಳನ್ನು ಹೊಂದಿದ್ದು ಸಂಘವು ಒಟ್ಟು ರೂ.12,96,687 ಲಾಭಗಳಿಸಿದೆ ಎಂದರು. ವರದಿ ವರ್ಷದಲ್ಲಿ ಸಾಲ ವಸೂಲಾತಿಯಲ್ಲಿ ಶೇ.80, ಪಾಲು ಬಂಡವಾಳ ಶೇ.14, ಠೇವಣಾತಿಗಳು ಶೇ.22, ಸಾಲಗಳು ಶೇ.40 ಹಾಗೂ ಲಾಭಾಂಶಗಳಿಕೆಯಲ್ಲಿ ಶೇ.55 ರಷ್ಟು ಸಾಧನೆ ಮಾಡಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು ಎ ಶ್ರೇಣಿಯನ್ನು ಪಡೆದುಕೊಂಡಿದೆ. ಲಾಭಾಂಶವನ್ನು ಉಪನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದು ಅಧ್ಯಕ್ಷ ಇಂದುಶೇಖರ್ ಪಿ.ಬಿ.ತಿಳಿಸಿದರು.
ಸಂಘದ ಉಪಾಧ್ಯಕ್ಷ ಪಿ.ಎನ್ ಸುಭಾಷ್‌ಚಂದ್ರ, ನಿರ್ದೇಶಕರಾದ ಸುಬ್ಬಣ್ಣ ನೂಜಿ, ಬಾಬು ಎಚ್., ರಘುನಾಥ ನೆಲ್ಯಾಡಿ, ಸುರೇಶ್ ಬೈಂದೂರು, ಜಯಂತ ಮಡಿವಾಳ ಮುಂಡಾಜೆ, ಶೋಭಾ ಸೀತಾರಾಮ ಪದ್ಮುಂಜ, ಡಾ.ಯಾದವಿ ಜಯಕುಮಾರ್ ಪುತ್ತೂರು, ಜಯಂತ ಬೇಕಲ್ ಹಾಗೂ ಈಶ್ವರ ಡಿ.ವಿಟ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ವೇತನ ವಿತರಣೆ;
ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯಲ್ಲಿ ಉತ್ತೀರ್ಣರಾದ ಸಮಾಜದ 15 ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಾನಿಧ್ಯ ಹಾಗೂ ವರ್ಷಾ ಪ್ರಾರ್ಥಿಸಿದರು. ಅಧ್ಯಕ್ಷ ಇಂದುಶೇಖರ್ ಪಿ.ಬಿ ಸ್ವಾಗತಿಸಿದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಿಶಾಂತ್ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಉಜಿರೆ ಶಾಖಾ ವ್ಯವಸ್ಥಾಪಕ ಯೋಗೀಶ್ ಕಾರ್ಯಕ್ರಮ ನಿರೂಪಿಸಿ, ಕಲ್ಲಡ್ಕ ಶಾಖಾ ವ್ಯವಸ್ಥಾಪಕ ಚೇತನ್ ವಂದಿಸಿದರು.