ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಇತಿಹಾಸವನ್ನು ಒಳಗೊಂಡ ‘ಅಪ್ಪೆನ ಮಟ್ಟೆ ಲ್’ ತುಳು ಭಕ್ತಿ ಗೀತೆಯನ್ನು ಶ್ರಿ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಕೃಷ್ಣಪ್ಪ ಕುಕ್ಕಾಜೆ, ದಯಾನಂದ ಅಮೀನ್ ಬಾಯಾರು, ಸಾಹಿತಿ ದೀಕ್ಷಿತ್ ಮಾಣಿಲ, ಗಾಯಕಿ ಸುಮಿತ್ರಾ ಬಾಯಂಬಾಡಿ ಮೊದಲಾದವರು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಭಕ್ತಿಗೀತೆನ್ನು ಹಾಡಿದ ಗಾಯಕಿ ಮತ್ತು ಸಾಹಿತ್ಯ ನೀಡಿದ ಕಲಾವಿದರನ್ನು ಗೌರವಿಸಲಾಯಿತು.
ಶ್ರೀ ಕ್ಷೇತ್ರ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರ ಶುಭಾಶಿರ್ವಾದಲ್ಲಿ ಮೂಡಿಬಂದ ಈ ಭಕ್ತಿಗೀತೆ ದಯಾ ಕ್ರಿಯೇಷನ್ ಮೂಲಕ ಹೊರ ಹೊಮ್ಮಿದೆ. ಭಕ್ತಿಗೀತೆಯನ್ನು ಗೋಪಾಲ ಶೆಟ್ಟಿ ಮಿಯಪದವು ಗುತ್ತು, ನರೇಂದ್ರ ಶೆಟ್ಟಿ ಕರ್ನಿರೆ ಮಗಂದಾಡಿ ಕಟಪಾಡಿ, ರವೀಂದ್ರನಾಥ ಎಲ್. ಕರ್ಕೇರ ಸಸಿಹಿತ್ಲು ಇವರು ನಿರ್ಮಿಸಿದ್ದಾರೆ. ದೀಕ್ಷಿತ್ ಮಾಣಿಲ ಸಾಹಿತ್ಯ ನೀಡಿದ್ದು, ಗಾಯಕರಾಗಿ ಸುಮಿತ್ರಾ ಬಾಯಂಬಾಡಿ ಸಹಕರಿಸಿದ್ದು, ಸಾನ್ವಿ ಗುರುಪುರ ಅಭಿನಯಿಸಿದ್ದಾರೆ. ಸುದರ್ಶನ್ ತಾರಿದಳ ಛಾಯಾಗ್ರಹಣ ಮತ್ತು ಸಂಕಲನ ನೀಡಿದ್ದು,ದಯಾನಂದ ಅಮೀನ್ ಬಾಯಾರು ಸಮಗ್ರ ನಿರ್ವಹಣೆಯಲ್ಲಿ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ‘ಅಪ್ಪೆನ ಮಟ್ಟೆ ಲ್’ ತುಳು ಭಕ್ತಿ ಗೀತೆಯನ್ನು ದಯಾ ಕ್ರಿಯೇಷನ್ ನ ಯೂಟ್ಯೂಬ್ ಚಾನಲ್ ನಲ್ಲಿ ಆಲಿಸಬಹುದಾಗಿದೆ.