ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕರವರಿಗೆ ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ

0

ಪುತ್ತೂರು: ಕಡಬ ಓಂತ್ರಡ್ಕ ಶಾಲಾ ಆಂಗ್ಲಭಾಷಾ ಪದವೀಧರ ಶಿಕ್ಷಕ, ಶೈಕ್ಷಣಿಕ ಚಿಂತಕ, ಅಂಕಣಕಾರ ದಿಲೀಪ್ ಕುಮಾರ್ ಸಂಪಡ್ಕರವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ(ಹೆಚ್. ಶಿವರಾಮೇಗೌಡ ಸಾರಥ್ಯದ) ಶೈಕ್ಷಣಿಕ ವಿಭಾಗದ ರಾಜ್ಯ ಘಟಕವು 2023ನೇ ಸಾಲಿನ ರಾಜ್ಯಮಟ್ಟದ ಕರ್ನಾಟಕ ರಕ್ಷಣಾ ರಾಜ್ಯ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದಿಲೀಪ್ ಕುಮಾರ್‌ರವರ ಶಿಕ್ಷಣ, ಸಂಘಟನೆ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್‌ನ ಅಕ್ಕಮಹಾದೇವಿ ವೇದಿಕೆಯಲ್ಲಿ ಸೆ.10ರಂದು ನಡೆದ ಸಮಾರಂಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಎಚ್. ರಾಮೇಗೌಡ, ಶೈಕ್ಷಣಿಕ ವಿಭಾಗದ ರಾಜ್ಯಾಧ್ಯಕ್ಷ ಸುರೇಂದ್ರ ನಾಡ ಮತ್ತು ಶೈಕ್ಷಣಿಕ ವಿಭಾಗದ ಕಾರ್ಯದರ್ಶಿ ಡಾ.ಮಲಕಪ್ಪ ಮಹೇಶ್‌ರವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕಡಬ ತಾಲೂಕಿನ ಹೊಸಮಠ ನಿವಾಸಿಯಾದ ಇವರು ಓಂತ್ರಡ್ಕ ಪ್ರಾಥಮಿಕ ಶಾಲೆಯಲ್ಲಿ 7 ವರ್ಷಗಳಿಂದ ಪದವೀಧರ ಪ್ರಾಥಮಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಒಂಭತ್ತು ವರ್ಷಗಳ ಕಾಲ ಬೆಂಗಳೂರಿನ ಪ್ರತಿಷ್ಠಿತ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಶೈಕ್ಷಣಿಕ ಕೋ-ಆರ್ಡಿನೇಟರ್, ಪ್ರಾಂಶುಪಾಲರಾಗಿ ಸಹ ಕಾರ್ಯನಿರ್ವಹಿಸಿದ್ದು ಒಟ್ಟು 16 ವರ್ಷಗಳ ಸೇವಾನುಭವನ್ನು ಹೊಂದಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಹಲವು ತರಬೇತಿಗಳಿಗೆ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಶಿಕ್ಷಕರಿಗೆ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಕಲಿಕಾ ಚೇತರಿಕೆಯ ೮ನೇ ತರಗತಿಯ ಇಂಗ್ಲೀಷ್ ಕಲಿಕಾ ಹಾಳೆ ತಯಾರಿಕೆಯ ಸಂಪನ್ಮೂಲ ತಂಡದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿರುತ್ತಾರೆ.

ಇವರ ಹಲವು ಲೇಖನಗಳು ರಾಜ್ಯದ ಹಲವು ಪತ್ರಿಕೆಗಳಲ್ಲಿ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಕೂಡ ಪ್ರಕಟಗೊಂಡಿದೆ. ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಸಮ್ಮೆಳನಗಳಲ್ಲಿ ಕೂಡ ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಿರುತ್ತಾರೆ. ಕೆಲವು ಪದವಿ ಮಟ್ಟದ ಪಠ್ಯಪುಸ್ತಕಗಳಿಗೆ ಪಾಠಗಳನ್ನು ಬರೆದಿರುವ ಅನುಭವ ಇವರಿಗಿದೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ.ಎ ಅರ್ಥಶಾಸ್ತ್ರದಲ್ಲಿ ಏಳನೆಯ ರ್‍ಯಾಂಕ್ ಗಳಿಸಿರುವ ಇವರು ಅಳಗಪ್ಪ ವಿಶ್ವವಿದ್ಯಾನಿಲಯಿಂದ ಎಂ.ಎ (ಇಂಗ್ಲೀಷ್), ಕುವೆಂಪು ವಿಶ್ವವಿದ್ಯಾನಿಲಯಿಂದ ಎಂ.ಎ (ಇತಿಹಾಸ), ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಿಂದ ಎಂ.ಇಡಿ (ಶಿಕ್ಷಣ)ಮತ್ತು ಮೈಸ್‌ನಿಂದ ಡಿ.ಸಿ.ಎ ಪದವಿಗಳನ್ನು ಪಡೆದಿರುತ್ತಾರೆ. ಇವರು ರಂಗಭೂಮಿ ಕಲಾವಿದರಾಗಿ, ಹಲವಾರು ರಂಗಪ್ರದರ್ಶನಗಳಲ್ಲಿ ಹೆಸರು ಮಾಡಿದ್ದಾರೆ.
ಇವರು ಪತ್ನಿ ಸಕಲೇಶಪುರ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಿಯಾಗಿ ಸೇವೆ ಸಲ್ಲಿಸುತ್ತಿರುವ ೨೦೧೨ನೇ ಸಾಲಿನ ಕೆ.ಇ.ಎಸ್ ಅಧಿಕಾರಿಯಾಗಿರುವ ವೆಂಕಟಮ್ಮ, ಪುತ್ರರಾದ ಚಂದನ್ ಕುಮಾರ್ ಎಸ್ ಮತ್ತು ಸಿದ್ದಾರ್ಥ್ ಎಸ್.ರವರೊಂದಿಗೆ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here