ಉಪ್ಪಿನಂಗಡಿ: ಇಲ್ಲಿನ ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿ ಪೋಷಕಗರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಪರೀಕ್ಷೆಗಳನ್ನು ಎದುರಿಸುವಲ್ಲಿ ವಿದ್ಯಾರ್ಥಿಗಳ ತಯಾರಿ ಮತ್ತು ಪೋಷಕರ ಪಾತ್ರದ ಕುರಿತಂತೆ ವಿಶೆಷ ಮಾಹಿತಿಗಳನ್ನು ಅತಿಥಿಗಳು ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿಜಿ ಭಟ್ ಪೋಷಕರು ಎದುರಿಸುವ ಸಹಜ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಹಾಗೂ ಶಿಕ್ಷಕ-ಪೋಷಕರ ನಡುವಿನ ಸಂಬಂಧದ ಕುರಿತು ವಿವರಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಛೇರಿ ಸಂಯೋಜಕ ಹರಿಪ್ರಸಾದ್ ಡಿ, ಸಿಇಟಿ ಸೀಟು ಹಂಚುವಿಕೆ, ಅಗತ್ಯ ದಾಖಲೆಗಳು ಮತ್ತು ಅಗತ್ಯ ಮಾನದಂಡಗಳ ಕುರಿತು ಮಾಹಿತಿ ನೀಡಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಹಿರಿಯ ಕಛೇರಿ ಸಹಾಯಕರಾದ ಶ್ರೀನಿವಾಸ್ ಎಂ ಮಾತನಾಡಿ ಉನ್ನತ ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾದ ಸರ್ಕಾರ ಮತ್ತು ಸರ್ಕಾರೇತರ ವಿದ್ಯಾರ್ಥಿವೇತನಗಳ ಕುರಿತು ವಿವರಿಸಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಹರೀಶ ಶಾಸ್ತ್ರಿ, ಯೆನೆಪೋಯ ಪದವಿಪೂರ್ವ ಕಾಲೇಜಿನ ರಾಸಾಯನಶಾಸ್ತ್ರ ಉಪನ್ಯಾಸಕ ರಾಕೇಶ್ ಕೆಪಿ
ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಗಣಿತಶಾಸ್ರ ಪ್ರಾಧ್ಯಾಪಕ ಪ್ರಶಾಂತ್ ರಾವ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.ಸಂಸ್ಥೆಯ ಸಂಚಾಲಕ ಯುಜಿ ರಾಧ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ, ವಿದ್ಯಾರ್ಥಿಗಳಿಗೆ ವಿಶೇಷ ಡಿಪಿಪಿ(ಪರೀಕ್ಷಾ ಸಾಮಾಗ್ರಿ) ಗಳನ್ನು ಬಿಡುಗಡೆಗೊಳಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಗುರುಮೂರ್ತಿ, ಉಪಾಧ್ಯಕ್ಷೆ ಗೀತಾಲಕ್ಷ್ಮಿವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಎಚ್ಕೆ ಪ್ರಕಾಶ್ ಸ್ವಾಗತಿಸಿ , ಗಣಿತಶಾಸ್ತ್ರ ಉಪನ್ಯಾಸಕಿ ಚಂದ್ರಿಕ ವಂದಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಸುಂದರಿ ಕಾರ್ಯಕ್ರಮನ್ನು ನಿರೂಪಿಸಿದರು.