ಬಿಶಾರ ಹೆಲ್ಪಿಂಗ್ ಹ್ಯಾಂಡ್ಸ್ ಕೋಲ್ಪೆಯ ನೂತನ ಸಮಿತಿ -ಅಧ್ಯಕ್ಷ: ತೌಫೀಕ್ ಎಂ.ಕೆ., ಕಾರ್ಯದರ್ಶಿ: ಶಮೀರ್ ಅರ್ಶದಿ, ಕೋಶಾಧಿಕಾರಿ: ಕೆ.ಇಕ್ಬಾಲ್

0

ನೆಲ್ಯಾಡಿ: ಬಡವರ ಪಾಲಿಗೆ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿರುವ ’ಬಿಶಾರ ಹೆಲ್ಪಿಂಗ್ ಹ್ಯಾಂಡ್ಸ್’ ಕೋಲ್ಪೆ ನೆಲ್ಯಾಡಿ ಇದರ ವಾರ್ಷಿಕ ಮಹಾಸಭೆ ಸೆ.10ರಂದು ಕೋಲ್ಪೆ ಮಸೀದಿಗುಡ್ಡೆಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಇಸ್ಮಾಯಿಲ್ ಸಾಹೇಬ್‌ರವರು ವಹಿಸಿದ್ದರು. ಈ ವೇಳೆ ಸಂಘದ ನೂತನ ಸಮಿತಿ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ರಫೀಕ್, ಅಧ್ಯಕ್ಷರಾಗಿ ತೌಫೀಕ್ ಎಂ.ಕೆ., ಉಪಾಧ್ಯಕ್ಷರಾಗಿ ಷಾಹಿನ್ ಷಾ, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಅರ್ಶದಿ, ಜೊತೆ ಕಾರ್ಯದರ್ಶಿಗಳಾಗಿ ಸಫ್ವಾನ್, ಉಮರುಲ್ ಫಾರೂಕ್, ಕೋಶಾಧಿಕಾರಿಯಾಗಿ ಕೆ.ಇಕ್ಬಾಲ್(ಇಕ್ಕು), ಲೆಕ್ಕ ಪರಿಶೋಧಕರಾಗಿ ರಫೀಕ್ ಕೆ.ಎಂ., ಸಲಹೆಗಾರರಾಗಿ ಜಾಬಿರ್ ಕೋಲ್ಪೆ ಹಾಗೂ ಶಿಕ್ಷಣ, ಮೆಡಿಕಲ್,ಕ್ರೀಡೆ ಮತ್ತು ಮಾಧ್ಯಮ ಉಸ್ತುವಾರಿಗಳಾಗಿ ನವಾಝ್ ಮಾಸ್ಟರ್, ಇರ್ಫಾನ್, ಇಲ್ಯಾಸ್, ಮರ್ಝಾಕ್‌ರವರನ್ನು ನೇಮಕ ಮಾಡಲಾಯಿತು.


ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಕೆಎಸ್‌ಎಸ್‌ಎಫ್ ದ.ಕ.ಜಿಲ್ಲಾ ಈಸ್ಟ್ ಪ್ರಧಾನ ಕಾರ್ಯದರ್ಶಿ, ಯುವ ವಾಗ್ಮಿ ಹಾರಿಸ್ ಕೌಸರಿಯವರು, ಸಾಮಾಜಿಕ, ಧಾರ್ಮಿಕ, ಉತ್ತಮ ಕಾರ್ಯಚಟುವಟಿಕೆಗಳ ಮೂಲಕ ಸಂಘಟನೆಯು ಬಡವರ ಪಾಲಿಗೆ ಆಶಾಕಿರಣವಾಗಬೇಕು. ಮಾದಕ ವ್ಯಸನದ ಬಗ್ಗೆ ಜನ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದು ಹೇಳಿದರು. ಜಾಬಿರ್ ಕೋಲ್ಪೆ, ಮೂಸಾನ್ ಕೊಳಂಬೆ, ರಫೀಕ್ ಕೆ.ಎಂ., ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಮೀರ್ ಅರ್ಶದಿ ಸ್ವಾಗತಿಸಿ, ಮರ್ಝಾಕ್ ವಂದಿಸಿದರು. ಸಿನಾನ್ ನಿರೂಪಿಸಿದರು. ಸ್ವಲಾತ್‌ನೊಂದಿಗೆ ಸಭೆಯನ್ನು ಮುಕ್ತಾಯಗೊಳಿಸಲಾಯಿತು.

LEAVE A REPLY

Please enter your comment!
Please enter your name here