ಸೆ.27: ಒಳಮೊಗ್ರು ಗ್ರಾಮಸಭೆ -ಸೆ.15 ರಿಂದ ವಾರ್ಡ್ ಸಭೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ 2023-24 ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಸೆ.27 ರಂದು ಬೆಳಿಗ್ಗೆ ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ವಲಯ ಅರಣ್ಯಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ನಡೆಸಿಕೊಡಲಿದ್ದಾರೆ. ವಾರ್ಡ್‌ಸಭೆಯು ಸೆ.15 ರಿಂದ ನಡೆಯಲಿದೆ.ವಾರ್ಡ್ 1 ರ ವಾರ್ಡ್‌ಸಭೆಯು ಸದಸ್ಯ ಅಬ್ದುಲ್ ಸಿರಾಜುದ್ದೀನ್‌ರವರ ಅಧ್ಯಕ್ಷತೆಯಲ್ಲಿ ಸೆ.15 ರಂದು ಅಪರಾಹ್ನ ಪರ್ಪುಂಜ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ವಾರ್ಡ್ 2 ವಾರ್ಡ್‌ಸಭೆಯು ಸದಸ್ಯ ಶೀನಪ್ಪ ನಾಯ್ಕರ ಅಧ್ಯಕ್ಷತೆಯಲ್ಲಿ ಸೆ.15 ರ ಬೆಳಿಗ್ಗೆ ಮಹಮ್ಮಾಯಿ ಮರಾಠಿ ಸಭಾ ಭವನದಲ್ಲಿ ನಡೆಯಲಿದೆ.

ವಾರ್ಡ್ 2 ಸಭೆಯು ಸದಸ್ಯೆ ರೇಖಾರವರ ಅಧ್ಯಕ್ಷತೆಯಲ್ಲಿ ಸೆ.20 ರಂದು ಅಪರಾಹ್ನ ಕೈಕಾರ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ವಾರ್ಡ್ 4 ರ ಸಭೆಯು ಸದಸ್ಯೆ ನಳಿನಾಕ್ಷಿರವರ ಅಧ್ಯಕ್ಷತೆಯಲ್ಲಿ ಸೆ.20 ರಂದು ಬೆಳಿಗ್ಗೆ ಅಜ್ಜಿಕಲ್ಲು ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ. ವಾರ್ಡ್ ಸಭೆಗೆ ಹಾಗೂ ಗ್ರಾಮಸಭೆಗೆ ಗ್ರಾಮದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಗ್ರಾಮದ ಅಭಿವೃದ್ಧಿಯ ಬಗ್ಗೆ ಸೂಕ್ತ ಸಲಹೆ ಸೂಚನೆಗಳೊಂದಿಗೆ ತಮ್ಮ ವಾರ್ಡ್‌ನ ಬೇಡಿಕೆಗಳ ಅರ್ಜಿಗಳನ್ನು ನೀಡುವಂತೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪ್ರಭಾರ ಅಭಿವೃದ್ಧಿ ಅಧಿಕಾರಿ ನಮಿತಾ ಕೆ, ಕಾರ್ಯದರ್ಶಿ ಜಯಂತಿ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಪ್ರಕಟಣೆ ತಿಳಿಸಿದೆ. ಪಂಚಾಯತ್‌ಗೆ ಸಲ್ಲತಕ್ಕ ವ್ಯಾಪಾರ ಪರವಾನಿಗೆ ಶುಲ್ಕ, ಕಟ್ಟಡ ತೆರಿಗೆ, ನೀರಿನ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸಿ ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here