ಪುತ್ತೂರು: ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಸಾಮಾಜಿಕ ಜಾಲತಾಣದಲ್ಲಿ ಬರುವ ಸಮಸ್ಯೆಗಳು, ಮಾದಕ ವ್ಯಸನಗಳು, ಪೋಕ್ಸೋ ಕಾಯ್ದೆ ಕುರಿತು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಿಂದ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳಿಗೆ ಮಾಹಿತಿ ಕಾರ್ಯಕ್ರಮ ನಡೆಯುತ್ತಿದ್ದು, ಸೆ.13ರಂದು ಪುತ್ತೂರು ಬೆಳ್ಳಿಪ್ಪಾಡಿ ಗ್ರಾಮದ ಸ್ವಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಲಾಯಿತು.
ಬೆಳ್ಳಿಪ್ಪಾಡಿ ಧರ್ಮಶ್ರೀ ಜ್ಞಾನ ವಿಕಾಸ ಗ್ರಾಮ ಅಭಿವೃದ್ಧಿ ಸ್ವ-ಸಹಾಯ ಸಂಘದ ಸದಸ್ಯೆಯರು ಠಾಣೆಗೆ ಭೇಟಿ ನೀಡಿದ ಮಾಹಿತಿ ಪಡೆದು ಕೊಂಡರು. ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಂ.ಎನ್.ರಾವ್, ಎಸ್.ಐ ಭವಾನಿ ಅವರು ವಿವಿಧ ಮಾಹಿತಿ ನೀಡಿದರು.