ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಮೈ ನವಿರೇಳಿಸಿದ ಶ್ರೀಕೃಷ್ಣ ಲೀಲೋತ್ಸವ

0

ಕಾಣಿಯೂರು : ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶ್ರೀ ಕೃಷ್ಣಲೀಲೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಗವಂತ ಶ್ರೀಕೃಷ್ಣನ ಸಂದೇಶಗಳು ಮತ್ತು ಉಪದೇಶಗಳು ಮೌಲ್ಯಯುತವಾಗಿದ್ದು ಅಬಾಲವೃದ್ಧರು ತಮ್ಮ ಜೀವನದಲ್ಲಿ ಪಾಲಿಸುವಂತದ್ದಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸರಕಾರಿ ಪದವಿಪೂರ್ವ ಕಾಲೇಜು ಕಾಣಿಯೂರಿನ ವಿಜ್ಞಾನ ಶಿಕ್ಷಕಿ ಪ್ರಮೋದಿನಿ ಶ್ರೀಕೃಷ್ಣನ ಕಥೆಗಳನ್ನು ಮಕ್ಕಳಿಗೆ ಸವಿಸ್ತಾರವಾಗಿ ವಿವರಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು ಮಾತನಾಡಿ, ಕೃಷ್ಣನ ಗೀತೋಪದೇಶ ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿದ್ದು ಅದನ್ನು ಮಕ್ಕಳು ಬಾಲ್ಯದಲ್ಲಿಯೇ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು. ವೇದಿಕೆಯಲ್ಲಿ ಸಂಚಾಲಕರ ಮಾತೃಶ್ರೀ ಲಕ್ಷ್ಮಿ ಕರಿಯಪ್ಪ ರೈ ಮಾದೋಡಿ , ಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ. ಎಮ್ ಬಿ, ಚಾರ್ವಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಧನಂಜಯ ಕೇನಾಜೆ, ಹಿರಿಯ ಶಿಕ್ಷಕಿಯರಾದ ಹೇಮಾ ನಾಗೇಶ್ ರೈ , ವಿನಯ ವಿ ಶೆಟ್ಟಿ, ಅನಿತಾ ಜೆ ರೈ ಮತ್ತು ಪುಟಾಣಿ ಕೃಷ್ಣವೇಷಧಾರಿಗಳು ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಯಶಸ್ವಿ ಕೆ, ರಂಜನ್ ವಿ ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಸರಸ್ವತಿ ಎಂ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ವೀಣಲತಾ ಸಿ. ಕೆ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಆಕರ್ಷಣೆ:
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮಡಿಲು ತುಂಬಿಸುವುದು , ಸುಬ್ರಮಣ್ಯ ಕಲ್ಪಡ ಮತ್ತು ಶೃತಿ ದಂಪತಿಗಳ ಆರು ತಿಂಗಳ ಮಗು ಕೃಷ್ಣ ವೇಷಧಾರಿ ಲಿಯಾಂಶ್ ನನ್ನು ತೊಟ್ಟಿಲಿಗೆ ಹಾಕುವ ಕಾರ್ಯಕ್ರಮ ವೇದಿಕೆಯಲ್ಲಿ ಹೆಚ್ಚಿನ ಮೆರಗನ್ನು ನೀಡಿತು. ಶ್ರೀಕೃಷ್ಣರಾಧೆಯರ ನೃತ್ಯ , ಕಾಳಿಂಗ ಮರ್ಧನ ,ಕುಣಿತ ಭಜನೆ, ಮೊಸರು ಕುಡಿಕೆ ಪ್ರೇಕ್ಷಕರ ಮನರಂಜಿಸಿದವು.

LEAVE A REPLY

Please enter your comment!
Please enter your name here