ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ವಿವೇಕಾನಂದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂದರ್ಶನ

0

ಪುತ್ತೂರು: ಕೃಷಿಯಲ್ಲಿ ಯಾಂತ್ರೀಕರಣದ ವಿಶೇಷ ಅಧ್ಯಯನ ಮತ್ತು ಅನುಭವದ ಉದ್ದೇಶಕ್ಕಾಗಿ ಕೃಷಿ ಪ್ರವಾಸೋದ್ಯಮದ ದ್ಯೋತಕವಾಗಿ ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ 10 ವಿದ್ಯಾರ್ಥಿಗಳ ತಂಡ ಭೇಟಿ ನೀಡಿ ಅಧ್ಯಯನ ನಡೆಸಿದರು. ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಯೊಂದಿಗೆ ಅದರ ಬಳಕೆ ಮತ್ತು ಲಾಭಗಳ ಬಗ್ಗೆ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಸ್ ರೈಯವರ ಜೊತೆ ಸಂವಾದ ನಡೆಸಿದರು.

ವೈಜ್ಞಾನಿಕ ರಬ್ಬರ್ ಶೀಟ್ ತಯಾರಿಕಾ ಯಂತ್ರ, ವೈಜ್ಞಾನಿಕ ಹೊಗೆಮನೆ, ಡ್ರೋನ್ ಮೂಲಕ ರಬ್ಬರ್ ಗೆ ಔಷಧಿ ಸಿಂಪರಣೆ, ಅಡಿಕೆಗೆ ಯಾಂತ್ರಿಕ ಬೋರ್ಡೋ ಸಿಂಪರಣೆ, ಫೀಡ್ ಕಟ್ಟರ್, ಹಾಲು ಕರೆಯುವ‌ ಯಂತ್ರ, ತಳ್ಳುಗಾಡಿ, ಅಡುಗೆ ಮನೆಯಲ್ಲಿ ವೈಜ್ಞಾನಿಕ ಅಸ್ತ್ರಒಲೆ, ಡ್ರೆಯ್ಯರ್, ಸಿಸಿ ಕ್ಯಾಮೆರಾ ಅಳವಡಿಕೆ, ಕೃಷಿ ಜಮೀನಿಗೆ ಬೇಕಾದ ನೀರಾವರಿ ವ್ಯವಸ್ಥೆ, ಹನಿ ನೀರಾವರಿ, ಸ್ಪ್ರಿಂಕ್ಲರ್, ಬಬ್ಲರ್ ಮೂಲಕ ನೀರುಣಿಸುವಿಕೆ, ಸಾವಯವ ಸ್ಲರಿ ಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರ ಸೇರಿದಂತೆ ಕೃಷಿ, ಹೈನುಗಾರಿಕೆ, ಕೋಳಿ ಸಾಕಾಣಿಕೆಯಲ್ಲಿ ಯಂತ್ರಗಳ ಬಳಕೆಯ ಪ್ರಾತ್ಯಕ್ಷಿಕೆಯನ್ನು ಇದೇ ವೇಳೆ ಮಾಡಲಾಯಿತು.

ಪಾಲಿಟೆಕ್ನಿಕ್ ಅಟೋಮೊಬೈಲ್ ವಿದ್ಯಾರ್ಥಿಗಳಾದ ಪ್ರಮೋದ್ ಕೆ. , ರಿತಿನ್ ಆಳ್ವ, ಗೌತಮ್ ಡಿ.,  ಸುಭಾಷ್ ಶೆಣೈ, ಮನೀಷ್ ಕೆ., ಅಫನಾನ್, ಅಹ್ಮದ್ ಷರೀಫ್, ರಿಶಿ ಕುಮಾರ್, ಅಭಿಜಿತ್ ಮಾರ್ಟಿನ್, ಮಂಜುನಾಥ ಜಿ. ಸಂದರ್ಶನ ತಂಡದಲ್ಲಿದ್ದರು.

LEAVE A REPLY

Please enter your comment!
Please enter your name here