ಸೆ.18-19 : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮತ್ತು ಶ್ರೀ ದುರ್ಗಾಪೂಜೆ ಸೆ.18 ಮತ್ತು ಸೆ.19ರಂದು ಕ್ಷೇತ್ರದ ತಂತ್ರಿ ಕೆಮ್ಮಿಂಜೆ ಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ಆಶೀರ್ವಾದಗಳೊಂದಿಗೆ ನಡೆಯಲಿದೆ.ಸೆ.18ರಂದು ಬೆಳಿಗ್ಗೆ10ಕ್ಕೆ ಹಸಿರು ಹೊರೆಕಾಣಿಕೆ, ಸಂಜೆ 6.30ಕ್ಕೆ ಶ್ರೀ ದುರ್ಗಾಪೂಜೆ ,ಅನ್ನಸಂತರ್ಪಣೆ,, ರಾತ್ರಿ 8ರಿಂದ ವಿ.ಜೆ.ವಿಖ್ಯಾತ್ ಸುಳ್ಯ ಸಾರಥ್ಯದಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಯುವತಿಯರು ಹಾಗೂ ದಂಪತಿಗಳಿಗೆ ವಿಶೇಷ ಮನೋರಂಜನಾ ಆಟಗಳು ಹಾಗೂ ಉಡುಗೊರೆಯೊಂದಿಗೆ ಕುಟುಂಬೋತ್ಸವ ನಡೆಯಲಿದೆ.

ಸೆ.19ರಂದು ಬೆಳಿಗ್ಗೆ 8.30ಕ್ಕೆ ಗಣಪತಿ ವಿಗ್ರಹ ಪ್ರತಿಷ್ಟೆ,ಬಳಿಕ ಆಟೋಟ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 10ರಿಂದ ಗಣಪತಿ ಹವನ,ಭಜನಾಮೃತ,ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ,ಅನ್ನಸಂತರ್ಪಣೆ, ಪುತ್ತೂರು ತೆಂಕಿಲ ಧೀಶಕ್ತಿ ಮಹಿಳಾ ಯಕ್ಷ ಬಳಗ ಇವರಿಂದ ಶ್ರೀರಾಮ ದರ್ಶನ ತಾಳಮದ್ದಳೆ ನಡೆಯಲಿದೆ.ಸಂಜೆ 4 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸುವರು.
ಅತಿಥಿಗಳಾಗಿ ಮುಂಡೂರು ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ ಎನ್.ಎಸ್.ಡಿ. ಸರ್ವೆದೋಳಗುತ್ತು, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಮೊಕ್ತೇಸರ ಮೋಹನ್ ರೈ ಓಲೆಮುಂಡೋವು,ಆನಂದ ಪೂಜಾರಿ ಸರ್ವೆದೋಳಗುತ್ತು,ಉದ್ಯಮಿ ವಿಜಯ ಕುಮಾರ್ ರೈ ಸರ್ವೆ ಪಾಲ್ಗೊಳ್ಳುವರು.

ಸಂಜೆ ಶೋಭಾಯಾತ್ರೆ ಹೊರಟು ಸರ್ವೆ ಗೌರಿ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ.ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಪ್ರಸಾದ್ ರೈ ಸೊರಕೆ,ಶ್ರೀ ಗಣೇಶೋತ್ಸವ ಸಮಿತಿಯ ಸಂಚಾಲಕ ಶಿವನಾಥ ರೈ ಮೇಗಿನಗುತ್ತು,ಅಧ್ಯಕ್ಷ ವಿನಯ ಕುಮಾರ್ ರೈ ಸರ್ವೆ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here