ತಿಂಗಳಾಡಿ ರೋಟರಾಕ್ಟ್‌ ಕ್ಲಬ್ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ತಿಂಗಳಾಡಿ ರೋಟರಾಕ್ಟ್‌ ಕ್ಲಬ್ ಇದರ 2023-24ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ಹರ್ಷಿತ್ ರೈ ಕೆ., ಕಾರ್ಯದರ್ಶಿಯಾಗಿ ಹರೀಶ್ ರೈ ಎಂ, ಜತೆಕಾರ್ಯದರ್ಶಿ ಯಾಗಿ ಕಿರಣ್ ರೈ., ಮತ್ತು ಸಭಾಪತಿಯಾಗಿ ಶಶಿಧರ್ ರೈ ಆಯ್ಕೆಯಾಗಿದ್ದಾರೆ. ಇದರ ಪದಗ್ರಹಣ ಸಮಾರಂಭ ಸೆ.17 ರಂದು ಸಂಜೆ 6:30ಕ್ಕೆ ತಿಂಗಳಾಡಿಯ ಪಂಚಾಯತ್‌ ಸಭಾಂಗಣದಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ರೋಟರಿ ಪುತ್ತೂರು ಪೂರ್ವ ಇದರ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಅತಿಥಿಯಾಗಿ ಪುರಂದರ ರೈ ಎಂ, ರತ್ನಾಕರ್ ರೈ ಜಿ., ಜಿಲ್ಲಾ ಪ್ರತಿನಿಧಿ ರಾಹುಲ್ ಆಚಾರ್ಯ, ವಲಯ ಪ್ರತಿನಿಧಿ ನವೀನ್ ಚಂದ್ರ ಭಾಗವಹಿಸಲಿದ್ದಾರೆ.

ಕ್ಲಬ್ ಸಲಹೆಗಾರರಾಗಿ ಅನೀಶ್ ಶೆಟ್ಟಿ, ಕ್ಲಬ್ ಸರ್ವಿಸ್‌ ನಿರ್ದೇಶಕರಾಗಿ ಕೃತಿಕ್ ರೈ, ಸಮುದಾಯ ಸೇವಾ ವಿಭಾಗದ ನಿರ್ದೇಶಕರಾಗಿ ಪ್ರೀತಮ್ ಶೆಟ್ಟಿ , ವೃತ್ತಿ ಸೇವಾ ವಿಭಾಗದ ನಿರ್ದೇಶಕರಾಗಿ ಮನ್ವಿತ್ ರೈ , ಅಂತಾರಾಷ್ಟ್ರೀಯ ಸೇವಾ ವಿಭಾಗದ ನಿರ್ದೇಶಕರಾಗಿ ಅಕ್ಷತ್ ರೈ ಸಿ, ಕೋಶಾಧಿಕಾರಿಯಾಗಿ ಧನುಷ್ ರೈ , ಕ್ರೀಡಾ ಕಾರ್ಯದರ್ಶಿಯಾಗಿ ಸ್ನೇಹಿತ್ ರೈ, ಯುವಜನ ಸೇವಾ ನಿರ್ದೇಶಕರಾಗಿ ಅಮೋಘ ರಾವ್, ಸಾಂಸ್ಕೃತಿಕ ಸೇವಾ ನಿರ್ದೇಶಕರಾಗಿ ಶಶಾಂಕ್ ರೈ ಸಿ ಆಯ್ಕೆಯಾಗಿರುತ್ತಾರೆ. ಪ್ರಥ್ವಿನ್ ರೈ ಕೆ. ನಿಕಟಪೂರ್ವ ಅಧ್ಯಕ್ಷರಾಗಿರತ್ತಾರೆ.

ರೋಟರಿ ಪುತ್ತೂರು ಪೂರ್ವ ಪ್ರಾಯೋಜಿತ ಸಂಸ್ಥೆಯಾಗಿ ರತ್ನಾಕರ್ ರೈ ಜಿ. ಅವರು ಸ್ಥಾಪಕ ಅಧ್ಯಕ್ಷರಾಗಿ ರೋಟರಾಕ್ಟ್ ತಿಂಗಳಾಡಿ ಸುಮಾರು 22 ಅಧ್ಯಕ್ಷರುಗಳನ್ನು ಕಂಡಿದೆ. ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದೆ.

LEAVE A REPLY

Please enter your comment!
Please enter your name here