ಸೆ.19 -ಸೆ.21 : ಸವಣೂರಿನಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ

0

ಸವಣೂರು : ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ ವತಿಯಿಮದ 41ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಸೆ.19ರಿಂದ ಸೆ.21ರವರೆಗೆ ಸವಣೂರಿನ ವಿನಾಯಕ ಸಭಾಭವನದಲ್ಲಿ ನಡೆಯಲಿದೆ.


ಸೆ.19ರಂದು ಬೆಳಿಗ್ಗೆ 8.30ಕ್ಕೆ ಪುರೋಹಿತ ಅನಂತರಾಮ ಉಪಾದ್ಯಾಯರ ನೇತೃತ್ವದಲ್ಲಿ ಗಣೇಶ ಬಿಂಬ ಪ್ರತಿಷ್ಠಾಪನೆ ಮತ್ತು ಧ್ವಜಾರೋಹಣ ಹಾಗೂ 12 ತೆಂಗಿನಕಾಯಿಯ ಗಣಪತಿ ಹೋಮ ಬಳಿಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ,ಭಕ್ತಿ ರಸಮಮಂಜರಿ ,ಮಕ್ಕಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಭಕ್ತಿ ರಸಮಂಜರಿ,ಯಕ್ಷಗಾನ ತಾಳಮದ್ದಳೆ-ಚೂಡಾಮಣಿ ,ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು,ಭರತನಾಟ್ಯ ,ರಾತ್ರಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.


ಸೆ.20ರಂದು ಬೆಳಿಗ್ಗೆ ಉಷಾ ಪೂಜೆ,ಗಣಪತಿ ಹೋಮ,ಭಜನಾ ಕಾರ್ಯಕ್ರಮ, ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ,ಮಹಾಪೂಜೆ ನಡೆದು ಪ್ರಸಾದ ವಿತರಣೆ ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ಭಜನಾ ಕಾರ್ಯಕ್ರಮ, ದೀಪಾರಾಧನೆ ,ಸಾಂಸ್ಕೃತಿಕ ಸಂಭ್ರಮ ,ಭರತ ನಾಟ್ಯ , ರಾತ್ರಿ ಮಹಾಪೂಜೆ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ.


ಸೆ,21ರಂದು ಬೆಳಿಗ್ಗೆ ಉಷೆ ಪೂಜೆ,ಗಣಪತಿ ಹೋಮ,ಭಜನಾ ಕಾರ್ಯಕ್ರಮ ,ಕುಣಿತ ಭಜನೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು ವಹಿಸುವರು.ಜೆ.ಇ.ಹೆಲ್ತ್‌ ಕೇರ್‌ ಸೀನಿಯರ್‌ ಪ್ರಾಜೆಕ್ಟ್‌ ಮ್ಯಾನೇಜರ್‌ ,ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಡಾ.ಹರಿಕೃಷ್ಣ ರೈ ಧಾರ್ಮಿಕ ಉಪನ್ಯಾಸ ನೀಡುವರು.ಅತಿಥಿಗಳಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ , ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಂಬಿಲ ಪಾಲ್ಗೊಳ್ಳುವರು.ಬಳಿಕ ಮಹಾಪೂಜೆ ನಡೆದು ,ಮಂಗಳಾರತಿ ,ಪ್ರಸಾದ ವಿತರಣೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ನಡೆಯಲಿದೆ.
ಸಂಜೆ 3 ಗಂಟೆಯಿಂದ ಶ್ರೀಗಣಪತಿ ವಿಗ್ರಹದ ಮೆರವಣಿಗೆ ನಡೆದು ಸರ್ವೆ ಗೌರಿ ಹೊಳೆಯಲ್ಲಿ ಜಲಸ್ತಂಬನ ನಡೆಯಲಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಕೆ,ಸೀತಾರಾಮ ರೈ ಸವಣೂರು, ಅಧ್ಯಕ್ಷ ಶಿವರಾಮ ಗೌಡ ಮೆದು,ಕಾರ್ಯದರ್ಶಿ ಸುಧಾಕರ ರೈ ದೇವಸ್ಯ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here