ಪುತ್ತೂರು ಬಾಟ ಶೋರೂಮ್‌ನಲ್ಲಿ 3 ನೇ ಆನಿವರ್ಷರಿ ಸೇಲ್ ಧಮಾಕ

0

ವಿಶೇಷ ರಿಯಾಯಿತಿ, ಆಕರ್ಷಕ ಗಿಪ್ಟ್‌ಗಳು- ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ನಾಳೆ (ಸೆ.18) ಕಡೇ ದಿನ

ಪುತ್ತೂರು: ಬೊಳುವಾರು ಮಹಾವೀರ್ ಮಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಟ ಶೋರೂಮ್ ಯಶಸ್ವಿ 3 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ತನ್ನೆಲ್ಲಾ ಗ್ರಾಹಕರಿಗೆ ಆನಿವರ್ಷರಿ ಸೇಲ್ ಮೂಲಕ ವಿಶೇಷ ಆಫರ್‌ನೊಂದಿಗೆ ಆಕರ್ಷಕ ಗಿಪ್ಟ್‌ಗಳನ್ನು ನೀಡುತ್ತಿದೆ. ಬಾಟ ಶೋರೂಮ್‌ನಿಂದ ಖರೀದಿಸುವ ಎಲ್ಲಾ ತರದ ಬ್ರ್ಯಾಂಡೆಡ್ ಶೂಗಳು, ಪಾದರಕ್ಷೆಗಳ ಮೇಲೆ ಶೇ.20 ರಿಂದ 50 ರ ತನಕ ವಿಶೇಷ ರಿಯಾಯಿತಿ ಅಲ್ಲದೆ ಖರೀದಿದಾರರಿಗೆ ಆಕರ್ಷಕ ಗಿಪ್ಟ್‌ಗಳು ಲಭ್ಯವಿದೆ. ಈ ಆನ್ಯಿವರ್ಷರಿ ಸೇಲ್ ಸೆ.16 ರಿಂದ ಆರಂಭಗೊಂಡಿದ್ದು ಸೆ.19 ಕೊನೇಯ ದಿನವಾಗಿದೆ. ಹಾಗಾದರೆ ಇನ್ನೇಕೆ ತಡ ಎಷ್ಟೋ ದಿನಗಳಿಂದ ಕಾಲಿಗೆ ಬಾಟ ಶೂ, ಪಾದರಕ್ಷೆಗಳನ್ನು ಧರಿಸಬೇಕೆಂಬ ನಿಮ್ಮ ಆಸೆಯನ್ನು ಇಂದೇ ಪೂರೈಸಿಕೊಳ್ಳಿರಿ. ಈ ವಿಶೇಷ ಆಫರ್‌ನಲ್ಲಿ ರೂ.799 ಕ್ಕಿಂತ ಹೆಚ್ಚು ಬೆಲೆಯ ಶೂ,ಪಾದರಕ್ಷೆಗಳನ್ನು ಖರೀದಿಸಿದರೆ ಆಕರ್ಷಕ ಉಡುಗೊರೆಗಳನ್ನು ಪಡೆಯಬಹುದಾಗಿದೆ. ಇದಲ್ಲದೆ ನೀವು ಖರೀದಿಸುವ ಪಾದರಕ್ಷೆ,ಶೂಗಳ ಬೆಲೆ ಹೆಚ್ಚಾದಂತೆ ಇನ್ನಷ್ಟು ಮೌಲ್ಯದ ಗಿಪ್ಟ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ರೂ.1 ಸಾವಿರ ದರಕ್ಕಿಂತ ಹೆಚ್ಚು ಬೆಲೆಯ ಪಾದರಕ್ಷೆ, ಶೂ ಖರೀದಿಸುವ ಪ್ರತಿಯೊಬ್ಬರಿಗೂ ಕ್ಯಾಶ್‌ಬ್ಯಾಕ್ ವೋಚರ್ ಸಿಗಲಿದೆ. ಈ ವೋಚರ್ ಅನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಖರೀದಿ ಮೇಲೆ ವಿಶೇಷ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೂ. 899 ಬೆಲೆಯ ಶೂ ಅಥವಾ 2 ಜೊತೆ ಶೂ ಖರೀದಿಸುವ ಪ್ರತಿಯೊಬ್ಬರಿಗೂ ರೂ.299 ಬೆಲೆಯ ಪೆನ್ಸಿಲ್ ಬಾಕ್ಸ್ ಅನ್ನು ಉಚಿತವಾಗಿ ನೀಡಲಾಗುತ್ತದೆ.


ಬಾಟ ಶೂಗಳು ಎಂದಿಗೂ ಮಕ್ಕಳಿಗಾಗಲಿ, ದೊಡ್ಡವರಿಗಾಗಲಿ ಅಲರ್ಜಿ, ತುರಿಕೆ ಇತ್ಯಾದಿಗಳನ್ನು ಉಂಟು ಮಾಡುವುದಿಲ್ಲ ಏಕೆಂದರೆ ಇದರಲ್ಲಿ ಆಟಿ ಬ್ಯಾಕ್ಟಿರಿಯಾ ಪ್ರೋಟೆಕ್ಷನ್ ಇರಲಿದೆ. ಸಂಪೂರ್ಣ ಹವಾ ನಿಯಂತ್ರಿತವಾಗಿರುವ ಬಾಟ ಶೋರೂಮ್‌ನಲ್ಲಿ ಇಂಟರ್‌ನ್ಯಾಷನಲ್ ಬ್ರ್ಯಾಂಡೆಡ್ ಕಂಪೆನಿಗಳಾದ ಹಷ್ ಪಪ್ಪಿಸ್, ಬಬ್ಬಲ್ ಗಮ್ಮರ‍್ಸ್, ಡಿಸ್ನಿಯ ಶೂಗಳು ಲಭ್ಯವಿದೆ.
ಈ ಆನಿವರ್ಷರಿ ಸೇಲ್‌ನ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ
ಬಾಟ ಶೋರೂಮ್ ತನ್ನ 3 ನೇ ಆನಿವರ್ಷರಿ ಪ್ರಯುಕ್ತ ಹಮ್ಮಿಕೊಂಡಿದ್ದ ಸೇಲ್ ಧಮಾಕಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗ್ರಾಹಕರು ತಮ್ಮಿಷ್ಠದ ಬಾಟ ಶೂ,ಪಾದರಕ್ಷೆಗಳನ್ನು ಖರೀದಿಸಲು ಶೋರೂಮ್‌ಗೆ ಬರುತ್ತಿದ್ದಾರೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು ಎಲ್ಲಾ ಗ್ರಾಹಕರಿಗೆ ಸಂಸ್ಥೆಯ ಮಾಲಕರು ಕೃತಜ್ಞತೆಗಳನ್ನು ಅರ್ಪಿಸುವ ಮೂಲಕ ಮುಂದೆಯೂ ಗ್ರಾಹಕರ ಸಂಪೂರ್ಣ ಸಹಕಾರವನ್ನು ಬಯಸುತ್ತಿದ್ದಾರೆ.

LEAVE A REPLY

Please enter your comment!
Please enter your name here