ಆಲಂಕಾರು: ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದಲ್ಲಿ 22 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19 ರಿಂದ 20ರ ತನಕ ನಡೆಯಲಿದೆ. ಸೆ.19ರಂದು ಮಂಗಳವಾರ ಬೆಳಗ್ಗೆ ಗಂಟೆ 8 ರಿಂದ ಶ್ರೀ ಗಣೇಶ ಪ್ರತಿಷ್ಠೆ ನಂತರ ತುಳುನಾಡಿನ ಪಾರಂಪರಿಕ ವಸ್ತುಗಳ ವಸ್ತು ಪ್ರದರ್ಶನ
ಮನವಳಿಕೆ ವಸ್ತು ಸಂಗ್ರಹಾಲಯ ವನ್ನು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕರಾದ ಬಿ. ಜಯಕರ ರೈ ಉದ್ಘಾಟನೆಯನ್ನು ನೇರವೆರಿಸಿದ ನಂತರ 9 ರಿಂದ ಮಾತೃಶ್ರೀ ಭಜನಾ ಮಂಡಳಿ, ಕೊಂಡಾಡಿಕೊಪ್ಪ, ಪಾಂಡುರಂಗ ಭಜನಾ ಮಂಡಳಿ, ಮನವಳಿಕೆ ಇವರಿಂದ ಭಜನೆ ನಡೆದು ಗಣಪತಿ ಹೋಮ ನಂತರ ಶ್ರೀ ಆದಿಶಕ್ತಿ ಭಜನಾ ಮಂಡಳಿ, ಶರವೂರು ಭಜನೆ ನಡೆದು ಮಹಾಪೂಜೆ, ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ನಂತರ ಶ್ರೀ ಹರಿ ಭಜನಾ ಮಂಡಳಿ, ಗಾಣಂತಿಯವರಿಂದ ಭಜನೆ ಕಾರ್ಯಕ್ರಮ ನಂತರ ವಿದ್ವಾನ್ ಶ್ರೀ ಕಾಂಚನ ಎ. ಈಶ್ವರ ಭಟ್ ಇವರ ಶಿಷ್ಯರಿಂದ ಹಾಡುಗಾರಿಕೆ ವಿದುಷಿ ಶ್ರೀಮತಿ ವಿದ್ಯಾ ಸರಸ್ವತಿ ಕೊಳಲು ವಾದನ ಶ್ರೀಪತಿ ರಾವ್, ಹೆಚ್ ಪಿಟೀಲು ವಾದನ ಧನ್ಯ, ಮೃದಂಗ ಚರಣ ಆಮೈಕಟ್ಟೆ ಇವರಿಂದ ಸಂಗೀತ ಕಾರ್ಯಕ್ರಮ ನಡೆದು ಸಂಜೆ ಸಾಂಸ್ಕೃತಿಕ ವೈವಿಧ್ಯ, ದುರ್ಗಾಂಬಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆದು ನಂತರ
ಭರತನಾಟ್ಯ ವಿದ್ವಾನ್ ರಾಘವೇಂದ್ರ ಇವರ ಶಿಷ್ಯರಿಂದ ನಂತರ ಭರತನಾಟ್ಯ ವಿದುಷಿ ಪ್ರಮೀಳಾ ಲೋಕೇಶ್ ಇವರ ಶಿಷ್ಯರಿಂದ ನಡೆದು ರಾತ್ರಿ ಮಯೂರ ಸಾಂಸ್ಕೃತಿಕ ಕಲಾಕೇಂದ್ರ, ಅಲಂಕಾರು ಇದರ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವ ಯಕ್ಷಗಾನ ’ಏಕಾದಶಿ ದೇವಿಮಹಾತ್ಮೆ ಮೋಹನ್ ಶರವೂರು ಇವರ ಸಂಯೋಜನೆಯಲ್ಲಿ ನಡೆಯಲಿದೆ.


ರಾತ್ರಿ ಮಹಾಪೂಜೆಯಾಗಿ ಪ್ರಸಾದ ವಿತರಣೆ ನೇರವೆರಿದ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸೆ.20 ಬುಧವಾರ ಬೆಳಗ್ಗೆ ಗಂಟೆ 5:00 ರಿಂದ 6;00 ರ ತನಕ ಶ್ರೀ ಪತಂಜಲಿ ಯೋಗ ಶಿಕ್ಚಣ ಸಮಿತಿಯ ಯೋಗ ಬಂಧುಗಳಿಂದ ಗಣಪತಿ ನಮಸ್ಕಾರ ನಡೆದು 8:೦೦ರಿಂದ ಶ್ರೀ ಗಣಪತಿ ಹೋಮ ನಂತರ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಹಳೆನೇರೆಂಕಿಯವರಿಂದ ಭಜನೆ ನಡೆಯಲಿದೆ. ನಂತರ ಶ್ರೀ ದುರ್ಗಾಂಬಾ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದವರು ನಿರ್ಮಿಸಿದ ಮುಖ್ಯದ್ವಾರ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಯನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ನೇರವೆರಿಸಿದ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ದಯಾನಂದ ರೈ ಮನವಳಿಕೆಗುತ್ತು ಸಭಾಧ್ಯಕ್ಷತೆ ವಹಿಸಲಿದ್ದು, ಧಾರ್ಮಿಕ ಉಪನ್ಯಾಸವನ್ನು ಅಶೋಕ್ ಕುಮಾರ್ ಬಿ., ನಿವೃತ್ತ ಪ್ರಬಂಧಕರು ಯುನೈಟೆಡ್ ಇಂಡಿಯನ್ ಇನ್ಸೂರೆನ್ಸ್ ಕಂ. ಲಿ ಇವರು ನೀಡಲಿದ್ದು, ಆಲಂಕಾರು ಗ್ರಾ.ಪಂ ಅಧ್ಯಕ್ಷರಾದ ಸುಶೀಲ ಕೊಂಡಾಡಿ, ಶ್ರೀ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ, ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು, ಕಡಬ ತಾಲೂಕಿನ ಮಾಜಿ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಮಾರಂಗ,ದುರ್ಗಾಂಬಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮನೋಹರ್ ಎಣ್ಣೆತ್ತೋಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನ ನಂತರ ಶ್ರೀ ಆದಿಶಕ್ತಿ ಮಹಿಳಾ ಭಜನಾ ಮಂಡಳಿ, ಶರವೂರು ಇವರಿಂದ ಭಜನೆ ನಡೆದು ಸಂಜೆ ಮಹಾಪೂಜೆ ಸಂಜೆಯಾಗಿ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆ ಆಲಂಕಾರಿನಿಂದ ಕುಂತೂರುವರೆಗೆ ನಡೆದು ಕುಂತೂರಿನಲ್ಲಿ ಶ್ರೀ ಗಣೇಶ ವಿಗ್ರಹದ ಜಲಸ್ತಂಭನ ನಡೆಯಲಿದೆ.
ಸೆ.19 ರಂದು ಮಂಗಳವಾರದಂದು ಆಹ್ವಾನಿತ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ಸ್ಥಳದಲ್ಲಿಯೇ ಬಹುಮಾನ ವಿತರಿಸಲಾಗುವುದು. ಅಪರಾಹ್ನ ಗಂಟೆ 2 ಗಂಟೆಯಿಂದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಹಗ್ಗಜಗ್ಗಾಟ ಸ್ಪರ್ಧೆ ಜರಗಲಿದೆ. ಶೋಭಾಯಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ಹಣ್ಣುಕಾಯಿ ಮಾಡಿಸುವ ಅವಕಾಶವಿರುತ್ತದೆ ಶ್ರೀ ದೇವರ ಅಲಂಕಾರಕ್ಕಾಗಿ ಹೂ ಮಾಲೆಯನ್ನು ಸಿದ್ಧಪಡಿಸಿ ನೀಡಬಹುದು ಹಾಗು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಧಿಗಳು ಅಗಮಿಸಿ ತನು,ಮನ,ಧನಗಳಿಂದ ಸಹಕರಿಸಿ ಮಹಾಗಣಪತಿ ದೇವರ ಕೃಪೆಗೆ ಪಾತ್ರರಾಗುವಂತೆ ದುರ್ಗಾಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಕಾರ್ಯದರ್ಶಿ ಪಿ. ಈಶ್ವರ ಗೌಡ ಪಜ್ಜಡ್ಕ ಮತ್ತು ಆಡಳಿತ ಮಂಡಳಿ ಸದಸ್ಯರು ಶಿಕ್ಷಕ ಮತ್ತು ರಕ್ಷಕ ಸಮಿತಿಯ ಅಧ್ಯಕ್ಷರಾದ ಶ್ರೀನಾಥ ಗೌಡ ಕೇವಳ,ಪ್ರಾಂಶುಪಾಲರಾದ ನವೀನ್ ಕುಮಾರ್ ಕೆ., ಮುಖ್ಯ ಗುರುಗಳಾದ ಶ್ರೀಪತಿ ರಾವ್ ಹೆಚ್ ಹಾಗು ಭೋಧಕ ಭೋಧಕೇತರ ವರ್ಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುತ್ತೂರಿನ ಮಾಜಿ ಶಾಸಕಿ ಶಶಕುಂತಳಾ ಶೆಟ್ಟಿ ಭೇಟಿ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ 22 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವಕ್ಕೆ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅಗಮಿಸಿ ಶ್ರೀ ಮಹಾಗಣಪತಿ ದೇವರ ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here