ಎನ್ಆರ್ಐಗೆ ಪ್ರಾತಿನಿಧ್ಯ ನೀಡಲು ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಮನವಿ
ಪುತ್ತೂರು: ದುಬೈ ಪ್ರವಾಸದಲ್ಲಿದ್ದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ಪುತ್ತೂರಿನ ಉದ್ಯಮಿಗಳು ದುಬೈ ತಾಜ್ ಹೋಟೆಲ್ನಲ್ಲಿ ಭೇಟಿಯಾದರು. ಲತೀಫ್ ತಿಂಗಳಾಡಿ, ರಹಿಮಾನ್ ಸಜಿಪ, ಶಾಫಿ, ಶಿವಕುಮಾರ್ ಮೊದಲಾದವರು ಮಾತುಕತೆ ನಡೆಸಿ ಎನ್ಆರ್ಐಗೆ ಉತ್ತಮ ಪ್ರಾತಿನಿಧ್ಯ ನೀಡಲು ಮುಂಬರುವ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಖಂಡಿತ ಧ್ವನಿ ಎತ್ತುವುದಾಗಿ ಶಾಸಕರು ಭರವಸೆ ನೀಡಿದರು.