ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಸಾರ್ವಜನಿಕ ಗಣೇಶೋತ್ಸವ

0

ಪುತ್ತೂರು:ವಿಘ್ನ ವಿನಾಯಕನ ಆರಾಧನೆಯ ಜೊತೆಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಮತ್ತು ದೇಶದ ವಿಜ್ಞಾನ, ಆರ್ಥಿಕ, ಸೈನ್ಯದ ಬಲದ ಜೊತೆಗೆ ಈ ಬಾರಿ ವಿಶೇಷವಾಗಿ ನೂತನ ಸಂಸತ್ ಭವನ, ಚಂದ್ರಯಾನ-3, ಆದಿತ್ಯಯಾನ, ನಿರ್ಮಾಣದ ಕೊನೆ ಹಂತದಲ್ಲಿರುವ ಅಯೋಧ್ಯೆ ರಾಮಮಂದಿರ, ಸಂಸತ್‌ನಲ್ಲಿ ಅಳವಡಿಸುವ ಸೈಂಗೋಲಿನ ಪ್ರದರ್ಶನ ಹಾಗು ಏಕರೂಪ ನಾಗರಿಕ ಸಂಹಿತೆ ಮಾಹಿತಿ, ಪ್ರಧಾನಿ ನರೇಂದ್ರ ಮೋದಿಯವರ ಯೋಜನೆ ಕುರಿತ ಮಾಹಿತಿಯೊಂದಿಗೆ ದೇಶ ಭಕ್ತಿಯನ್ನು ಉದ್ದೀಪನಗೊಳಿಸುತ್ತಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 4 ದಿನಗಳ ಕಾಲ ನಡೆಯುವ 57ನೇ ವರ್ಷದ ಗಣೇಶೋತ್ಸವವಕ್ಕೆ ಸೆ.19ರಂದು ಚಾಲನೆ ನೀಡಲಾಯಿತು.


ಬೆಳಿಗ್ಗೆ ಬ್ರಹ್ಮಶ್ರೀ ವೇ.ಮೂ.ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವೇ.ಮೂ ಗುರುತಂತ್ರಿಯವರಿಂದ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠೆ ನಡೆಯಿತು.ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಪೂಜೆಯಲ್ಲಿ ಪಾಲ್ಗೊಂಡರು. ಹಿರಿಯ ಸ್ವಯಂಸೇವಕ ಬೊಳುವಾರಿನಲ್ಲಿರುವ ಹೋಟೇಲ್ ನವದುರ್ಗದ ಮಾಲಕ ಪದ್ಮನಾಭ ಮಲ್ಯ ಅವರು ಧ್ವಜಾರೋಹಣ ಮಾಡಿದರು.ಈ ಸಂದರ್ಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಉಪಸ್ಥಿತರಿದ್ದರು.


ಹಿಂದುತ್ವದ ಅರಿವು ನೀಡುವ ಕಾರ್ಯಕ್ರಮ: ಬೆಳಿಗ್ಗೆ ಶ್ರೀ ದೇವರ ಪ್ರತಿಷ್ಠೆ, ಧ್ವಜಾರೋಹಣ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮಚಂದ್ರ ಕಾಮತ್ ಅವರು ಮಾತನಾಡಿ ಹಿಂದುತ್ವದ ಸಂಘಟನೆಗಾಗಿ ದುಡಿದವರು ಇಲ್ಲಿ ಆರಂಭದಲ್ಲಿ ಚಾಲನೆ ನೀಡುವುದು ಸಂಪ್ರದಾಯ. ಹಾಗಾಗಿ ಇಲ್ಲಿನ ಗಣೇಶೋತ್ಸವ ವಿಭಿನ್ನವಾಗಿ ದೇಶಪ್ರೇಮವನ್ನು ಮೈಗೂಡಿಸಿಕೊಂಡು ನಡೆಯುತ್ತದೆ.ಹಿಂದುತ್ವದ ಅರಿವು ನೀಡುವ ಕಾರ್ಯಕ್ರಮ ಇಲ್ಲಿ ನಿರಂತರ ನಡೆಯುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿದ್ದ ಹೋಟೇಲ್ ನವದುರ್ಗದ ಮಾಲಕ ಪದ್ಮನಾಭ ಮಲ್ಯ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಎಂ.ಕೆ.ಪ್ರಸಾದ್, ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕು.ಅಕ್ಷಯ ಕೆ.ಎಲ್ ಗೌಡ ಪ್ರಾರ್ಥಿಸಿದರು.ಸಮಿತಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು ಸ್ವಾಗತಿಸಿ, ಪೂವಪ್ಪ ನಾಯ್ಕ ವಂದಿಸಿದರು. ಜತೆ ಕಾರ್ಯದರ್ಶಿ ನೀಲಂತ್ ಕಾರ್ಯಕ್ರಮ ನಿರೂಪಿಸಿದರು.


ನಗರಸಭೆ ಮಾಜಿ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಥದ ಸಾರಥಿ ದಯಾನಂದ, ಖಜಾಂಜಿ ಶ್ರೀನಿವಾಸ ಮೂಲ್ಯ, ಉಪಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಸಹಜ್ ರೈ ಬಳಜ್ಜ, ವಿಶ್ವನಾಥ ಗೌಡ ಬನ್ನೂರು,ಸುಧೀರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರಮೇಶ್ ಮುಂಡೂರು ಮತ್ತು ಶೇಖರ್ ಬ್ರಹ್ಮನಗರ, ಗೌರವ ಸಲಹೆಗಾರರಾದ ಸಂತೋಷ್ ರೈ ಕೈಕಾರ, ಭಾಮಿ ಜಗದೀಶ್ ಶೆಣೈ, ಚಂದ್ರಶೇಖರ್ ಪರ್ಲಡ್ಕ, ಚಂದ್ರಶೇಖರ ರಾವ್ ಬಪ್ಪಳಿಗೆ, ಮಲ್ಲೇಶ್ ಆಚಾರ್ಯ, ದಯಾನಂದ, ರಾಜೇಶ್ ಬನ್ನೂರು, ಸುರೇಂದ್ರ ಆಚಾರ್ಯ,ಅಜಿತ್ ರೈ ಹೊಸಮನೆ, ಕಿರಣ್ ಶಂಕರ್ ಮಲ್ಯ, ಆನಂದ ನೆಕ್ಕರೆ, ಚಂದ್ರಶೇಖರ್ ಎಸ್, ಉದಯ ಹೆಚ್, ಶ್ರೀಧರ್ ಪಟ್ಲ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಸ್.ಅಪ್ಪಯ್ಯ ಮಣಿಯಾಣಿ, ದಿನೇಶ್ ಪಂಜಿಗ, ರೂಪೇಶ್ ಕೊಂಬೆಟ್ಟು, ಶೇಖರ್ ಬನ್ನೂರು,ವಾಟೆಡ್ಕ ಶ್ರೀಕೃಷ್ಣ ಭಟ್, ರಂಗನಾಥ್ ರಾವ್, ಜಯಶ್ರೀ ಎಸ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗಣೇಶ ವಿಗ್ರಹ ರಚನೆ, ರಂಗೋಲಿ ಮತ್ತು ಗೀತ ಕಂಠ ಪಾಠ ಸ್ಪರ್ಧೆಗಳು ನಡೆಯಿತು.ಬೆಳಿಗ್ಗೆ ಭಜನಾ ಕಾರ್ಯಕ್ರಮ ನಡೆಯಿತು.


ವೇದಿಕೆಯ ಬಲ ಬದಿಯಲ್ಲಿ ವರ್ಣರಂಜಿತ ಮೂಷಿಕ ರಥದಲ್ಲಿ ಶ್ರೀ ಗಣೇಶನ ವಿಗ್ರಹ
ವೇದಿಕೆ ಬಲ ಭಾಗದಲ್ಲಿ ಭಾರತೀಯ ಯುದ್ಧ ನೌಕೆಗಳು, ಚಂದ್ರಯಾನ, ಸಂಸತ್, ರಾಮಮಂದಿರ ಚಿತ್ರಗಳು
ವೇದಿಕೆಯ ಮಧ್ಯೆ ಬಾಲಗಂಗಾಧರ ತಿಲಕ್, ಭಾರತಮಾತೆಯ ಭಾವಚಿತ್ರ
ಸೆ.22ಕ್ಕೆ ವೈವಿಧ್ಯಮಯ ಸ್ತಬ್ಧ ಚಿತ್ರಗಳೊಂದಿಗೆ ಶ್ರೀ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ
ನೂತನ ಸಂಸತ್ ಭವನ, ಸೈಂಗೋಲ್, ಚಂದ್ರ-ಆದಿತ್ಯಯಾನ ಈ ಬಾರಿಯ ವಿಶೇಷತೆ


ಮಹಾಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವದಲ್ಲಿ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಸಭಾಂಗಣದ ತುಂಬಾ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದ ಪ್ರದರ್ಶನ ವರ್ಷಂಪ್ರತಿ ನಡೆಯುತ್ತಿದ್ದು, ಶ್ರೀ ಗಣೇಶನ ವಿಗ್ರಹದ ಬಳಿ ದೇಶದ ಸೈನಿಕರ ಹೋರಾಟ, ಬಲಿದಾನ, ಯುದ್ದ ನೌಕೆಗಳು, ತಂತ್ರಜ್ಞಾನ, ವಿಜ್ಞಾನ, ಕೃಷಿ ಕ್ಷೇತ್ರ ಕುರಿತ ಚಿತ್ರಗಳನ್ನು ವೇದಿಕೆಯ ಬಲಭಾಗದಲ್ಲಿ ಪ್ರದರ್ಶನ ನಡೆಯುತ್ತದೆ. ಈ ಬಾರಿ ಇವೆಲ್ಲದರ ಜೊತೆಗೆ ಅಯೋಧ್ಯೆಯಲ್ಲಿ ನಿರ್ಮಾಣದ ಕೊನೆ ಹಂತದಲ್ಲಿರುವ ರಾಮಮಂದಿರ, ಉದ್ಘಾಟನೆಗೊಂಡ ನೂತನ ಸಂಸತ್ ಭವನ, ಸೈಂಗೋಲು, ಚಂದ್ರಯಾನ, ಆದಿತ್ಯಯಾನದ ಚಿತ್ರ, ಪ್ರಧಾನಿ ನರೇಂದ್ರ ಮೋದಿಯವರ ವಿವಿಧ ಯೋಜನೆಗಳ ಮಾಹಿತಿ, ಏಕರೂಪ ನಾಗರಿಕ ಸಂಹಿತೆ ಕುರಿತು ಮಾಹಿತಿ ಚಿತ್ರಗಳನ್ನು ಅಳವಡಿಸಲಾಗಿತ್ತು.

LEAVE A REPLY

Please enter your comment!
Please enter your name here