ಪುತ್ತೂರು: ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಪ್ರಾಯೋಜಕತ್ವದ ರೋಟರ್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಸೆ.14 ರಂದು ಅಕ್ಷಯ ಕಾಲೇಜಿನಲ್ಲಿ ನೆರವೇರಿತು.
ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮರವರು ರೋಟರ್ಯಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ನ ನೆರವೇರಿಸಿ ಮಾತನಾಡಿ, ಸ್ವ-ಹಿತ ಮೀರಿದ ಸೇವೆಯೊಂದಿಗೆ ಅಂತರ್ರಾಷ್ಟ್ರೀಯ ರೋಟರಿ ಕ್ಲಬ್ ಸೇವೆ ಸಲ್ಲಿಸುತ್ತಿದ್ದು ಪುತ್ತೂರಿನಲ್ಲಿಯೂ ರೋಟರಿ ಯುವ ಸೇರಿದಂತೆ ಏಳು ರೋಟರಿ ಕ್ಲಬ್ ಗಳು ಸಮಾಜದ ಉನ್ನತಿಗಾಗಿ ಸೇವೆ ನೀಡುತ್ತಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದಲ್ಲಿ ಸಮಾಜ ಸೇವೆಯ ಕುರಿತು ಮನದಟ್ಟಾಗಲು ರೋಟರ್ಯಾಕ್ಟ್ ಕ್ಲಬ್ ಗಳು ಬಹಳ ಸಹಕಾರಿಯಾಗಿರುತ್ತದೆ ಎಂದರು.
ರೋಟರಿ ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ ಮಾತನಾಡಿ, ರೋಟರಿ ಮುಖೇನ ಲಕ್ಷಗಟ್ಟಲೇ ರೊಟೇರಿಯನ್ಸ್ ಗಳು ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಮಾರಕ ರೋಗವೆನಿಸಿದ ಪೋಲಿಯೋ ರೋಗದ ನಿರ್ಮೂಲನೆ ಶೇ.98 ಆಗಿದ್ದರೆ ಅದು ರೋಟರಿಯಿಂದ ಆಗಿರುತ್ತದೆ. ವಿದ್ಯಾರ್ಥಿಗಳು ಕೂಡ ತಮಗೆ ಸಿಕ್ಕಂತಹ ಅಪೂರ್ವವಾದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ತಾನೂ ಕೂಡ ಓರ್ವ ರೊಟೇರಿಯನ್ ಆಗಿದ್ದು ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ಅನುಭವಿದೆ. ರೋಟರಿ ಸಂಸ್ಥೆ ಏನೆಂಬುದು ತಿಳಿಯಬೇಕಾದರೆ ನಾವು ಅದರ ಒಳಗೆ ಸೇರಿದಾಗ ಮಾತ್ರ ತಿಳಿಯುತ್ತದೆ. ವಿದ್ಯಾರ್ಥಿಗಳು ಇಂಥಹ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ರೋಟರಿ ಜಿಲ್ಲೆ 3181 ಇದರ ವಲಯ ಸೇನಾನಿ ಝೇವಿಯರ್ ಡಿ’ಸೋಜ ಮಾತನಾಡಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅವಕಾಶಗಳು ಸಿಕ್ಕಾಗ ಅವರ ವ್ಯಕ್ತಿತ್ವ ವಿಕಸನವಾಗುವುದು ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಾಧ್ಯವಾಗುವುದು. ಇದೊಂದು ಸುವರ್ಣಾವಕಾಶವಾಗಿದ್ದು ಮುಂದೊಂದು ದಿನ ರೊಟೇರಿಯನ್ಸ್ ಗಳಾಗಿ ಸಮಾಜದ ಸೇವೆಗೆ ಮುಂಚೂಣಿಯಾಗಿ ಬರುವಂತಾಗಲಿ ಎಂದರು
ರೋಟರಿ ಜಿಲ್ಲೆ 3181 ಇದರ ಡಿ.ಆರ್.ಆರ್ ರಾಹುಲ್ ಆಚಾರ್ಯ, ಝಡ್.ಆರ್.ಆರ್ ನವೀನ್ ಚಂದ್ರ, ಅಕ್ಷಯ ಕಾಲೇಜು ರೋಟರ್ಯಾಕ್ಟ್ ಚೇರ್ ಮ್ಯಾನ್ ರತ್ನಾಕರ್ ರೈ, ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ಅಕ್ಷಯ ಕಾಲೇಜು ರೋಟರ್ಯಾಕ್ಟ್ ಕೋ-ಆರ್ಡಿನೇಟರ್ ರಾಕೇಶ್ ಕೆ.ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕ್ಷಯ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರೋಟರ್ಯಾಕ್ಟ್ ಕ್ಲಬ್ ನೂತನ ಕಾರ್ಯದರ್ಶಿ ಸವಿ ದೇಚಮ್ಮ ವಂದಿಸಿದರು. ರಿಯಾ ಪೊನ್ನಮ್ಮ ಕಾರ್ಯಕ್ರಮ ನಿರೂಪಿಸಿದರು.
ರೋಟರ್ಯಾಕ್ಟ್ ಪದಪ್ರದಾನ…
ಅಧ್ಯಕ್ಷ:ಸತ್ಯನಾರಾಯಣ ನಾಯಕ್,ಕಾರ್ಯದರ್ಶಿ:ದೇಚಮ್ಮ,ಕೋಶಾಧಿಕಾರಿ:ಕೌಶಿಕ್ ಕೆ
ರೋಟರ್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜಿನ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಸತ್ಯನಾರಾಯಣ ನಾಯಕ್, ಕಾರ್ಯದರ್ಶಿಯಾಗಿ ಸವಿ ದೇಚಮ್ಮ, ಕೋಶಾಧಿಕಾರಿಯಾಗಿ ಕೌಶಿಕ್ ಕೆ, ಜೊತೆ ಕಾರ್ಯದರ್ಶಿಯಾಗಿ ಡಿಂಪಲ್, ನಿಯೋಜಿತ ಅಧ್ಯಕ್ಷ ಹಾಗೂ ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಪ್ರೇಮ್ ಕುಮಾರ್, ಬುಲೆಟಿನ್ ಸಂಪಾದಕರಾಗಿ ಹಿಮಾನಿ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಎನ್.ಲಿಖಿತ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಸುಶ್ಮಿತಾ ಕೆ.ಎಸ್, ಅಂತರ್ರಾಷ್ಟ್ರೀಯ ಸರ್ವಿಸ್ ನಿರ್ದೇಶಕರಾಗಿ ಸಾನಿಧ್ಯ, ಕ್ರೀಡಾ ಹಾಗೂ ಸಾಂಸ್ಕೃತಿಕ ಚೇರ್ ಮ್ಯಾನ್ ಗಳಾಗಿ ಅನಿಶಾ ಡಿ’ಸೋಜ ಹಾಗೂ ಅಶ್ಮಿತಾರವರಿಗೆ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮರವರು ಪದಪ್ರದಾನ ನೆರವೇರಿಸಿದರು.