ಸವಣೂರು : ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಶ್ರೀಗೌರಿ ಗಣೇಶ ಉತ್ಸವ ಸಮಿತಿ ಇದರ ವತಿಯಿಂದ 35ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಉತ್ಸವವು ಸೆ.19ರಂದು ರಮೇಶ್ ಪುದ್ವುಣ್ಣಾಯ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸೆ.19ರಂದು ಬೆಳಿಗ್ಗೆ ಧ್ವಜಾರೋಹಣವನ್ನು ನಿವೃತ ಮುಖ್ಯಶಿಕ್ಷಕ ಮೋನಪ್ಪ ನಾಯ್ಕ ಕೊಂಬಕೆರೆ ನೆರವೇರಿಸಿದರು.ಬಳಿಕ ಶ್ರೀಗಣಪತಿ ದೇವರ ಮೂರ್ತಿ ಪ್ರತಿಷ್ಠಾಪನೆ , ಪುಣ್ಚಪ್ಪಾಡಿ ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಹಾಗೂ ದೇವಸ್ಯ ಶ್ರೀಹರಿಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ,ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ಶ್ರೀಗಣಪತಿ ದೇವರಿಗೆ ನೂತನ ಪೀಠ ಸಮರ್ಪಣೆ ನಡೆಯಿತು.
ಧಾರ್ಮಿಕ ಸಭೆ
ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ವಿಶ್ರಾಂತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಅವರು ಧಾರ್ಮಿಕ ಉಪನ್ಯಾಸ ನೀಡಿದರು.ಅಧ್ಯಕ್ಷತೆಯನ್ನು ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ ವಹಿಸಿದ್ದರು.ವೇದಿಕೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ,ಶ್ರೀ ಗೌರಿ ಗಣೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಸಚಿನ್‌ಕುಮಾರ್‌ಜೈನ್, ಹೊಸಗದ್ದೆ ಗಣಪತಿ ವಿಸರ್ಜನಾ ಕಟ್ಟೆ ಉಸ್ತುವಾರಿ ಅಧ್ಯಕ್ಷ ಕುಶಾಲಪ್ಪ ಗೌಡ ತುಂಬೆತ್ತಡ್ಕ ಉಪಸ್ಥಿತರಿದ್ದರು.ಶ್ರೀಗೌರಿ ಗಣೇಶ ಉತ್ಸವ ಸಮಿತಿಯ ಅಧ್ಯಕ್ಷ ಮಹೇಶ್‌ಕೆ.ಸವಣೂರು ಸ್ವಾಗತಿಸಿ,ಕಾರ್ಯದರ್ಶಿ ಪ್ರಮೋದ್‌ಬೊಳ್ಳಾಜೆ ವಂದಿಸಿದರು.ಗ್ರಾ.ಪಂ.ಸದಸ್ಯ ಶೀನಪ್ಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಪುಣ್ಚಪ್ಪಾಡಿ ಗ್ರಾಮದ ಸಾಧಕ ಎಸ್ಸೆಸೆಲ್ಸಿ ,ಪಿಯುಸಿ,ಪದವಿ,ಸ್ನಾತಕೋತರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ ನಡೆಯಿತು.
ಮಧಾಹ್ನ ಶ್ರೀಮಹಾಗಣಪತಿ ದೇವರ ಮಹಾಪೂಜೆ ,ಬಳಿಕ ಪ್ರಸಾದ ವಿತರಣೆ,ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀಮಹಾಗಣಪತಿ ದೇವರ ಮಹಾಪೂಜೆ ನಡೆದು ಶ್ರೀಗಣಪತಿ ದೇವರಮೂರ್ತಿ ವಿಸರ್ಜನಾ ಶೋಭಾಯಾತ್ರೆ ನಡೆಯಿತು. ವೈಭವದ ಶೋಭಾಯಾತ್ರೆ ನಡೆದು ಬಳಿಕ ಹೊಸಗದ್ದೆ ಗೌರಿ ಹೊಳೆಯಲ್ಲಿ ಗಣಪತಿ ದೇವರ ಮೂರ್ತಿಯ ಜಲಸ್ತಂಬನ ನಡೆಯಿತು.
ಕ್ರೀಡಾಕೂಟ
ಶ್ರೀಗಣೇಶೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕ್ರೀಡಾಕೂಟ ನಡೆಯಿತು,ಸಾರ್ವಜನಿಕರಿಗೆ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ 3500 ನಗದು ಹಾಗೂ ಟ್ರೋಫಿ,ದ್ವಿತೀಯ 2500 ನಗದು ಹಾಗೂ ಟ್ರೋಫಿ, ಕಾಲೇಜು ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ, ಪುರುಷರ ಹಗ್ಗಜಗ್ಗಾಟದಲ್ಲಿ ಪ್ರಥಮ 2000 ನಗದು ಹಾಗೂ ಟ್ರೋಫಿ ,ದ್ವಿತೀಯ 1500 ನಗದು ಹಾಗೂ ಟ್ರೋಫಿ.ಮಹಿಳೆಯರ ಹಗ್ಗಜಗ್ಗಾಟದಲ್ಲಿ ಪ್ರಥಮ 1500 ನಗದು ಹಾಗೂ ಟ್ರೋಫಿ ,ದ್ವಿತೀಯ 1000 ನಗದು ಹಾಗೂ ಟ್ರೋಫಿ,ಪುರುಷರ ವಿಭಾಗದ ಅಡ್ಡಕಂಬ ಸ್ಪರ್ಧೆಯ ವಿಜೇತರಿಗೆ 1000 ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರಿಗೆ ಭಕ್ತಿಗೀತೆ ,ಸಂಗೀತ ಕುರ್ಚಿ,ಗೋಣಿಚೀಲ ಓಟ ,ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಕೆ ಒಡೆಯುವ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮದಲ್ಲಿ ಸಮರ್ಥ ಜನ ಸೇವಾ ಟ್ರಸ್ಟ್,ಅರ್ಪಿತಾ ಯುವತಿ ಮಂಡಲ ಕುಮಾರಮಂಗಲ, ಕುಮಾರಮಂಗಲ ಯುವಕ ಮಂಡಲ,ಸವಣೂರು ಯುವಕ ಮಂಡಲ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪುಣ್ಚಪ್ಪಾಡಿ ಒಕ್ಕೂಟ,ಸಾರಕರೆ ಶ್ರೀ ಧರ್ಮರಸು ಉಳ್ಳಾಕುಲು ಶೇವಾ ಸಮಿತಿ ,ಗಜಕೇಸರಿ ಭಜನಾ ಮಂಡಳಿ ವಿನಾಯಕನಗರ, ಧರ್ಮರಸು ಉಳ್ಳಾಕುಲು ಶರೇಯೋಭಿವೃದ್ದಿ ಟ್ರಸ್ಟ್‌ಕುದ್ರೋಳಿ ಮಾಡ, ಯಕ್ಷ ಕುಟುಂಬ ಕುಮಾರಮಂಗಲ ,ಬದಿಯಡ್ಕ,ರಾಷ್ಟ್ರ ಸೇವಿಕಾ ಸಮಿತಿ ,ಶ್ರೀ ಕೃಷ್ಣಾರ್ಪಿತ ಭಜನಾ ಮಂಡಳಿ ಪುಣ್ಚಪ್ಪಾಡಿ ಸಂಘಟನೆಗಳು ಸಹಕರಿಸಿತು.