ಪುತ್ತೂರು ಪ್ರಪಾತಕ್ಕೆ ಉರುಳಿದ ವಾಹನದಿಂದ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ

0

ಪುತ್ತೂರು: ಕಾಂಕ್ರೀಟ್ ಕೆಲಸಕ್ಕೆ ಸಂಬಂಧಿಸಿ ವಾಹನವೊಂದರ ಜೋಡಣೆ ಕಳಚಿದ ಕಾಂಕ್ರೀಟ್ ಮಿಕ್ಸರ್ ಯಂತ್ರ ಪ್ರಪಾತಕ್ಕೆ ಉರುಳಿದ ಘಟನೆ ಪುತ್ತೂರು ಬೈಪಾಸ್ ರಸ್ತೆಯ ಬೊಳುವಾರಿನಲ್ಲಿ ಸೆ.22 ಬೆಳಗ್ಗಿನ ಜಾವ ನಡೆದಿದೆ.
ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ವಾಹನವೊಂದು ತನ್ನ ಹಿಂದೆ ಜೋಡಣೆ ಮಾಡಿ ಕೊಂಡೊಯ್ಯುತ್ತಿದ್ದ ವೇಳೆ ಬೊಳುವಾರು ಬೈಪಾಸ್ ಬಳಿ ಕಾಂಕ್ರೀಟ್ ಮಿಕ್ಸರ್ ಯಂತ್ರ ವಾಹನದ ಜೋಡಣೆಯಿಂದ ಕಳಚಿದೆ. ಪರಿಣಾಮ ಅದು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಆದರೆ ಯಂತ್ರವನ್ನು ಕೊಂಡೊಯ್ಯುತ್ತಿದ್ದ ವಾಹನವಾಗಲಿ ಅದಕ್ಕೆ ಸಂಬಂಧಿಸಿದವರಾಗಲಿ ಅಲ್ಲಿ ಯಾರೂ ಇರಲಿಲ್ಲ.

LEAVE A REPLY

Please enter your comment!
Please enter your name here