ಉಪ್ಪಿನಂಗಡಿ: ಜಿಕೆ ಟ್ಯಾಕ್ಸ್ ಸೊಲ್ಯುಷನ್ಸ್ ಶುಭಾರಂಭ

0

ಉಪ್ಪಿನಂಗಡಿ: ಜಿಎಸ್‌ಟಿ ಪ್ರಾಕ್ಟಿಷನರ್ ಮತ್ತು ತೆರಿಗೆ ಸಲಹೆಗಾರರ ಕಚೇರಿ ’ಜಿಕೆ ಟ್ಯಾಕ್ಸ್ ಸೊಲ್ಯುಷನ್ಸ್’ ಉಪ್ಪಿನಂಗಡಿ ರಾಮಲಕ್ಷ್ಮಣ ಆರ್ಕೆಡ್‌ನ ಮೊದಲ ಮಹಡಿ, ಹೋಟೆಲ್ ಟಿಫಿನ್ ಹಾಲ್‌ನ ಮೇಲ್ಭಾಗದಲ್ಲಿ ಸೆ.21ರಂದು ಶುಭಾರಂಭಗೊಂಡಿತು.


ಕುಪ್ಲಾಜೆ ಅನೀಶ ಉಪಾಧ್ಯಾಯ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. ಕುಂತೂರು ಅರ್ಬಿಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ ಬಾಲಾಜೆ ಹಾಗೂ ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ತೇಜಕುಮಾರ್ ರೈ ವಳೆಂಜ ಅವರು ದೀಪ ಬೆಳಗಿಸಿದರು. ದೇವಕಿ ಬಾಲಾಜೆ, ಸುಶೀಲ ಬಾಲಾಜೆ, ಪ್ರೇಮಾತೇಜಕುಮಾರ್ ರೈ ವಳೆಂಜ, ಪ್ರೇಮಾ ರೈ ವಳೆಂಜ, ಉಮೇಶ್ ಶೆಟ್ಟಿ ಬಾಲಾಜೆ, ಪೆರಾಬೆ ಗ್ರಾ.ಪಂ.ಸದಸ್ಯೆ ಮಮತಾ ಅಂಬರಾಜೆ, ಉಪ್ಪಿನಂಗಡಿಯ ವೈದ್ಯ ಡಾ.ಯತೀಶ್, ನ್ಯಾಯವಾದಿಗಳಾದ ರವಿಕಿರಣ್ ಕೊಯಿಲ, ಲತನ್ ರೈ, ರಾಜೇಶ್ ಎಲೆಕ್ಟ್ರಿಕಲ್ಸ್‌ನ ರಾಜೇಶ್ ಶೆಟ್ಟಿ ಸಂಪ್ಯಾಡಿ, ಶೇಷಪತಿ ರೈ ಗುತ್ತುಪಾಲು, ಆಲಂಕಾರು ಜೆಸಿಐ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಪ್ರಶಾಂತ ರೈ ಬಳಂಪೋಡಿ, ಚೆನ್ನಕೇಶವ ರೈ ಗುತ್ತುಪಾಲು, ಸುಂದರ ಗೌಡ ’ಸಚಿನ್’ ಉಪ್ಪಿನಂಗಡಿ, ಕಟ್ಟಡ ಮಾಲಕ ರೋಹಿತಾಕ್ಷ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ತೆರಿಗೆ ಸಲಹೆಗಾರರಾದ ಗುರುಕಿರಣ್ ಶೆಟ್ಟಿ ಬಾಲಾಜೆ ಅವರು, ನಮ್ಮಲ್ಲಿ ಜಿಎಸ್ಟಿ ಫೈಲಿಂಗ್ ಆಂಡ್ ರಿಜಿಸ್ಟ್ರೇಷನ್ ಎಸ್ಸೆಸ್‌ಮೆಂಟ್, ಆಡಿಟಿಂಗ್/ ಇನ್‌ಕಮ್ ಟ್ಯಾಕ್ಸ್ ಫೈಲಿಂಗ್, ಟಿಡಿಎಸ್ ಫೈಲಿಂಗ್ ಆಂಡ್ ಟ್ಯಾಕ್ಸ್, ಎಕೌಂಟಿಂಗ್ ಆಂಡ್ ಬುಕ್ ಕೀಪಿಂಗ್, ಇಪಿಎಫ್, ಇಎಸ್‌ಐ ಫೈಲಿಂಗ್ ಆಂಡ್ ರಿಜಿಸ್ಟ್ರೀಷೆನ್, ಪ್ರೊಜೆಕ್ಟ್ ರಿಪೋರ್ಟ್ಸ್ ಫಾರ್ ಲೋನ್ಸ್, ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೆಟ್, ಎಕೌಂಟಿಂಗ್ ಆಂಡ್ ಬಿಲ್ಲಿಂಗ್ ಸಾಫ್ಟ್‌ವೇರ್, ಎಂಎಸ್‌ಎಂಇ ರಿಜಿಸ್ಟ್ರೇಷನ್, ಲೇಬರ್ ಲೈಸೆನ್ಸ್ ರಿಜಿಸ್ಟ್ರೇಷನ್ ಹಾಗೂ ಎಕೌಂಟಿಂಗ್‌ಗೆ ಸಂಬಂಧಿಸಿದ ಎಲ್ಲಾ ಸೇವೆ ಮಾಡಿಕೊಡಲಾಗುವುದು ಎಂದು ಹೇಳಿ ಸಹಕಾರ ಕೋರಿದರು. ಕೃತಿಕಾಗುರುಕಿರಣ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here