ಕಾಣಿಯೂರಿನಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ- ವೈಭವದ ಶೋಭಾಯಾತ್ರೆ

0

ಕುಣಿತ ಭಜನೆ, ಕೋಲಾಟ, ಗೊಂಬೆ ಕುಣಿತ, ಅಮರ್ ಬೊಳ್ಳಿಲು ಟ್ಯಾಬ್ಲೋ ಮೆರವಣಿಗೆಯಲ್ಲಿ ಮೆರುಗು

ಕಾಣಿಯೂರು: ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಇದರ ಆಶ್ರಯದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ನಡೆದ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸಂಪನ್ನಗೊಂಡಿದ್ದು, ವೈಭವದ ಶೋಭಾಯಾತ್ರೆ ನಡೆಯಿತು. ಶ್ರೀ ಗಣೇಶನ ವಿಗ್ರಹ ವಿಸರ್ಜನ ಶೋಭಾಯಾತ್ರೆಯು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಿಂದ ಹೊರಟು ಕೂಡುರಸ್ತೆಯಾಗಿ ಕಾಣಿಯೂರಿನ ಪ್ರಮುಖ ರಸ್ತೆಯಲ್ಲಿ ಸಾಗಿ ಕಜೆಬಾಗಿಲು ಎಂಬಲ್ಲಿ ಜಲಸ್ತಂಭನಗೊಂಡಿತ್ತು. ವಿಶೇಷ ಶೋಭಾಯಾತ್ರೆಯಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ ತರಬೇತುಗೊಳಿಸಿದ ಶರವೂರು ಶ್ರೀ ದುರ್ಗಾಪರಮೇಶ್ವರಿ ಸಂಸ್ಕಾರ ಶಿಬಿರದ ಮಕ್ಕಳ ಕುಣಿತ ಭಜನೆ, ಸವ್ಯಸಂಚಿ ಸುಭಾಷ್ ಪಂಜ ರಚಿಸಿ ನಿರ್ದೇಶಿಸಿದ ಮಕ್ಕಳ, ಮಹಿಳೆಯರ ಕೋಲಾಟ ಹಾಗೂ ಕೋಟಿ ಚೆನ್ನಯ ಕಥೆ ಆಧಾರಿತ ” ಅಮರ್ ಬೊಳ್ಳಿಲು” ಟ್ಯಾಬ್ಲೋ, ವಿವಿಧ ರೀತಿಯ ಗೊಂಬೆ ಕುಣಿತ, ನ್ಯಾಸಿಕ್ ಬ್ಯಾಂಡ್ ಮೆರವಣಿಗೆಯಲ್ಲಿ ಮೆರುಗನ್ನು ನೀಡಿದವು.

LEAVE A REPLY

Please enter your comment!
Please enter your name here