ಬಡಗನ್ನೂರು: ಸುಳ್ಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ 35ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಜರುಗಿತು.
ಸೆ.19ರಂದು ಪೂರ್ವಾಹ್ನ 8:30ಕ್ಕೆ ಸುಳ್ಯಪದವು ಆಯುಧ ಪೂಜಾ ಸೇವಾ ಸಮಿತಿ ಅಧ್ಯಕ್ಷ ಸುಂದರ ನಾಯ್ಕ ಕನ್ನಡ್ಕ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಪೂರ್ವಾಹ್ನ 9:00ಕ್ಕೆ ಗಣಪತಿ ಹವನ, ವಿಗ್ರಹ ಪ್ರತಿಷ್ಠೆ ಬಳಿಕ ಶಾಲಾ ಮಕ್ಕಳಿಗೆ ಗಣೇಶ ಭಕ್ತಿಗೀತೆ, ಗಣೇಶನ ಚಿತ್ರ ಬಿಡಿಸುವುದು, ಗೀತಾ ಕಂಠಪಾಠ, ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ 3:30ರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬಹುಮಾನ ವಿತರಣೆ ಮಾಡಿದರು.
ಶೋಭಾಯಾತ್ರೆ:
ಸಂಜೆ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು ಕುಣಿತ ಭಜನೆ, ಬ್ಯಾಂಡ್ ವಾದ್ಯ ಘೋಷ, ಹಾಗೂ ಡಿಜೆ ಮೆರವಣಿಗೆಯ ಮೂಲಕ ಮರದಮೂಲೆ ಮುರಲೀಧರ ಭೋಗಲ್ಕರ್ ಬಿ.ಎಸ್. ಇವರ ತೋಟದ ಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂದಿರದ ಟ್ರಸ್ಟ್ ನ ಅಧ್ಯಕ್ಷ ಶ್ರೀಪತಿ ಭಟ್., ಗೌರವಾಧ್ಯಕ್ಷ ಪ್ರಭಾಕರ್ ನಾಯಕ್, ಆಡಳಿತ ಮಂಡಳಿ ಅಧ್ಯಕ್ಷ ಸೇಸಪ್ಪ ಪೂಜಾರಿ ಕಡಮಗದ್ದೆ, ಟ್ರಸ್ಟ್ ನ ಸದಸ್ಯರಾದ ಗಂಗಾಧರ ರೈ ಎಂ.ಜಿ, ಪ್ರಹ್ಲಾದ ಇಂದಾಜೆ, ರಮಾಕಾಂತಿ, ಬೋಳಂಕೂಡ್ಲು ಕೋಶಾಧಿಕಾರಿ ಚಿನ್ನಪ್ಪ ಗೌಡ ಶಬರಿನಗರ, ಆಡಳಿತ ಮಂಡಳಿ ಉಪಾಧ್ಯಕ್ಷ ರಾಜೇಶ್ ಎಂ, ಪ್ರಧಾನ ಕಾರ್ಯದರ್ಶಿ ಸತೀಶ್ ಬಟಂಗಳ,ಕಾರ್ಯದರ್ಶಿ ಗುರುಕಿರಣ್ , ಕೋಶಾಧಿಕಾರಿ ಹರಿಶ್ಚಂದ್ರ ಕನ್ನಡ್ಕ, ಸದಸ್ಯರಾದ ರುಕ್ಮಾಂಗದ ಅಚಾರ್ಯ, ಪ್ರಕಾಶ್ ಮರದ ಮೂಲೆ, ಉಮೇಶ್ ಆಡಳಿತ ಮಂಡಳಿ ನಿಕಟ ಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ನಾಗರಾಜ್ ಭಟ್, ,ಸದಸ್ಯರಾದ ಶೀನಪ್ಪ ಮಡಿವಾಳ, ಮಾಧವ ನಾಯ್ಕ, ಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸೂರ್ಯನಾರಾಯಣ ಭಟ್, ಗೌರವಾಧ್ಯಕ್ಷ ಪ್ರಭಾಕರ್ ಕಲ್ಲೂರಾಯ, ಕಾರ್ಯದರ್ಶಿ ಮೋಹನ್ ದಾಸ್ ರೈ, ಗಿರೀಶ್ ಪೂಜಾರಿ ಕನ್ನಡ್ಕ, ಅಶೋಕ ಬಿ.ಕೆ, ಲಕ್ಷ್ಮೀ ನರಸಿಂಹ ನಾಯಕ್, ಮಾಜಿ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಬಡಗನ್ನೂರು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಸುಶೀಲಾ ಕನ್ನಡ್ಕ, ಹಾಗೂ ಅಯುಧ ಪೂಜಾ ಸಮಿತಿ ಸದಸ್ಯರು, ಶಬರಿ ನಗರ ಸ್ವಾಮಿ ಕೊರಗಜ್ಜ ಸಮಿತಿ ಸದಸ್ಯರು, ಮಹಿಳಾ ಭಜನಾ ಸಂಘದ ಸದಸ್ಯರು, ಯುವ ಶಕ್ತಿ ಕ್ರೀಡಾ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.